ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣ ದಾಳಿ:ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು

kadaba times

ಶೇಷಮ್ಮ ಎಂಬುವವರ ಮೇಲೆ ಕಾಡುಕೋಣ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಳ್ಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಾಡುಪ್ರಾಣಿಗಳ ಹಾವಳಿ ಬಗ್ಗೆ ಕೃಷಿಕರ ಆಕ್ರೋಶ ಹೆಚ್ಚಿದೆ.

kadaba times
uniq

ಸುಳ್ಯ: ಅರಂತೋಡು ಗ್ರಾಮದಲ್ಲಿ  ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ಕಾಡುಕೋಣ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಫೆಬ್ರವರಿ 24ರಂದು ನಡೆದಿದೆ.

ಅರಂತೋಡು ಗ್ರಾಮದ ಕರಿಂಬಿ ಮನೆಯ ನಿವಾಸಿ ಶೇಷಮ್ಮ ಎಂಬುವವರೇ ಗಾಯಗೊಂಡ ದುರ್ದೈವಿ. ಮಂಗಳವಾರದಂದು  ಶೇಷಮ್ಮ ಅವರು ತಮ್ಮ ತೋಟದಲ್ಲಿ ಕೊಕ್ಕೋ ಕೊಯ್ಯುವ ಕೆಲಸದಲ್ಲಿ ನಿರತರಾಗಿದ್ದಾಗ, ಪೊದೆಯಲ್ಲಿದ್ದ ಕಾಡುಕೋಣ ಏಕಾಏಕಿ ಅವರ ಮೇಲೆರಗಿದೆ.

kadaba times
kadaba times

ದಾಳಿಯ ತೀವ್ರತೆಗೆ ಶೇಷಮ್ಮ ಅವರ ತೊಡೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ವೈದ್ಯರ ಸಲಹೆಯ ಮೇರೆಗೆ ತೀವ್ರ ನಿಗಾದಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Latest Articles