ಬೆಳ್ಳಾರೆಯಲ್ಲಿ ನಡೆದ ಕಳ್ಳತನ ಪ್ರಕರಣ ಸಾಬೀತು : ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಸುಳ್ಯ ಕೋರ್ಟ್

kadaba times

ಸುಳ್ಯದ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯದಲ್ಲಿ ಕಳ್ಳತನ ಪ್ರಕರಣದ ತೀರ್ಪು. ಆರೋಪಿಗೆ  ಒಂದು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.

kadaba times
uniq

ಸುಳ್ಯ: ಇಲ್ಲಿನ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ, ಕಳ್ಳತನ ಪ್ರಕರಣವೊಂದರ ಆರೋಪಿಯ ಅಪರಾಧ ಸಾಬೀತಾಗಿದ್ದು, ನ್ಯಾಯಾಧೀಶರಾದ ಶಿವಣ್ಣ ಹೆಚ್. ಆರ್. ಅವರು ಫೆಬ್ರವರಿ 25 ರಂದು ಆರೋಪಿಗೆ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದ್ದಾರೆ.

ದೋಷಿ ಎಂದು ಸಾಬೀತಾದ ಆರೋಪಿಯನ್ನು ಜಗದೀಶ್ ಯಾನೆ ಜೈಜೇಶ್ ಯಾನೆ ಸಿಂದ್ರು ಎಂದು ಗುರುತಿಸಲಾಗಿದೆ.

2018 ಜುಲೈ 25ರಂದು ಬೆಳಿಗ್ಗೆ 9.30 ರಿಂದ ಸಂಜೆ 4.45 ರ ಮಧ್ಯೆ ಅವಧಿಯಲ್ಲಿ, ಕೊಡಿಯಾಲ ಗ್ರಾಮದ ರಾಮಕುಮೇರಿ ನಿವಾಸಿ ಸತ್ಯನಾರಾಯಣ ಅವರ ಮನೆಯ ಕಪಾಟಿನ ಲಾಕರ್ ಮುರಿದು ಕಳ್ಳತನ ನಡೆಸಲಾಗಿತ್ತು. ಲಾಕರ್‌ನಲ್ಲಿದ್ದ ನಗದು ₹26,500 ಮತ್ತು ಪರ್ಸ್‌ನಲ್ಲಿದ್ದ 6 ಪವನ್ (4 ಪವನ್ ಮತ್ತು 2 ಪವನ್ ತೂಕದ ಎರಡು ಸರಗಳು) ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು.

kadaba times
kadaba times

ಐಪಿಸಿ ಕಲಂ 454: ಒಂದು ವರ್ಷ ಕಾರಾಗೃಹ ಶಿಕ್ಷೆ ಮತ್ತು ₹3,000 ದಂಡ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ ಒಂದು ತಿಂಗಳ ಕಾರಾಗೃಹ ವಾಸ. ಐಪಿಸಿ ಕಲಂ 380: ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ₹3,000 ದಂಡ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ ಒಂದು ತಿಂಗಳ ಸಾದಾ ಕಾರಾಗೃಹ ವಾಸ.ಈ ಎರಡೂ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಲ್ಲಿರುತ್ತವೆ ಎಂದು ನ್ಯಾಯಾಲಯ ಆದೇಶಿಸಿದೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಪ್ರೀತಿ ಎಂ.ಸಿ. ವಾದ ಮಂಡಿಸಿದ್ದರು. ಅಂದಿನ ಪಿ.ಎಸ್.ಐ ಡಿ.ಎನ್. ಈರಯ್ಯ ಅವರು ಆರೋಪಿಯನ್ನು ಪತ್ತೆ ಹಚ್ಚಿದ್ದರು. ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಆರ್. ಅವರು ತನಿಖಾಧಿಕಾರಿಯಾಗಿ ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪೊಲೀಸ್ ಕಾನ್ಸ್ಟೇಬಲ್ ಮನು ವಿ.ಎಂ. ಅವರು ನ್ಯಾಯಾಲಯದ ಕರ್ತವ್ಯ ನಿರ್ವಹಿಸಿದ್ದರು.

Related Articles

Latest Articles