ಕಡಬ:PUC ಪರೀಕ್ಷೆ ಹಿನ್ನೆಲೆ ಸರ್ಕಾರಿ ಕಾಲೇಜಿನಲ್ಲಿ ‘ ಸ್ವಚ್ಛತಾ ಅಭಿಯಾನ’:ಪ.ಪಂ ಅಧ್ಯಕ್ಷರ ಕಾರ್ಯಕ್ಕೆ ಮೆಚ್ಚುಗೆ

kadaba times

2026ರ ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆ, ಕಡಬ ಸರ್ಕಾರಿ ಪಿಯು ಕಾಲೇಜಿನಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀ ಮತಿ ತಮ್ಮನಾ ಜಬೀನ್  ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು

kadaba times
uniq

ಕಡಬ: ಫೆಬ್ರವರಿ-ಮಾರ್ಚ್ 2026ರಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಸುಗಮ ನಿರ್ವಹಣೆಗಾಗಿ, ಕಡಬದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ” ಸ್ವಚ್ಚತೆಯೇ ಸೇವೆ   ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

https://youtu.be/qpZeqA063fc?si=bZ5py9Sxy551xS1T

ಅಧ್ಯಕ್ಷರ ನೇತೃತ್ವದಲ್ಲಿ ಶ್ರಮದಾನ: ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ   ಶ್ರೀಮತಿ ತಮ್ಮನ್ನಾ ಜಬೀನ್ ಅವರು ಸ್ವಯಂಪ್ರೇರಿತರಾಗಿ ಈ ಅಭಿಯಾನದ ನೇತೃತ್ವ ವಹಿಸಿದ್ದರು. ಕೇವಲ ಸೂಚನೆ ನೀಡುವುದಕ್ಕೆ ಸೀಮಿತವಾಗದೆ, ಅವರು ತಮ್ಮ ಪತಿ   ಮತ್ತು ಪೌರಕಾರ್ಮಿಕರ ತಂಡದೊಂದಿಗೆ ಸೇರಿ ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸಿದ್ದಾರೆ.

kadaba times
kadaba times

ಪರೀಕ್ಷಾ ಕೇಂದ್ರದ ಸಿದ್ಧತೆ: ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಆರೋಗ್ಯಕರ ಮತ್ತು ಶುಚಿಯಾದ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕಾಲೇಜಿನ ವರಾಂಡ, ತರಗತಿ ಕೊಠಡಿಗಳು ಹಾಗೂ ವಿದ್ಯಾರ್ಥಿನಿಯರ ವಿಶ್ರಾಂತಿ ಕೊಠಡಿಗಳನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಯಿತು. “ಸ್ವಚ್ಛತೆಯೇ ಸೇವೆ” ಎಂಬ ಮಂತ್ರದೊಂದಿಗೆ ನಡೆದ ಈ ಕಾರ್ಯಕ್ಕೆ ಕಾಲೇಜು ಆಡಳಿತ ಮಂಡಳಿ ಸಾಥ್ ನೀಡಿತು.

 ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಜನಪ್ರತಿನಿಧಿಗಳು ಇಂತಹ ಶ್ರಮದಾನದಲ್ಲಿ ಪಾಲ್ಗೊಳ್ಳುವುದು ಇತರರಿಗೆ ಪ್ರೇರಣೆಯಾಗಿದೆ- ಸರ್ಕಾರಿ ಕಾಲೇಜು ಆಡಳಿತ ಮಂಡಳಿ

ಪ್ರಾಂಶುಪಾಲರಾದ . ಡಿ ದೇವರಾಜು, ಹಿರಿಯ ಉಪನ್ಯಾಸಕ   ವಾಸುದೇವ ಗೌಡ  ಕೆ, ಸಲೀನ್ ಕೆ ಪಿ, ಸೇರಿದಂತೆ  ಉಪನ್ಯಾಸಕ ವೃಂದ ಹಾಗೂ ಪೂರ್ವ ವಿದ್ಯಾರ್ಥಿ ಸಯ್ಯದ್ ಇಕ್ಬಾಲ್,  ಪಟ್ಟಣ ಪಂಚಾಯತ್ ಸಿಬ್ಬಂದಿಗಳು, ಪೌರ ಕಾರ್ಮಿಕರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Related Articles

Latest Articles