
ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಹಿರಿಯ ಪ್ರಗತಿಪರ ಕೃಷಿಕ ಬಾಬು ಗೌಡ (90) ನಿಧನರಾಗಿದ್ದಾರೆ. ಸಜ್ಜನ ವ್ಯಕ್ತಿತ್ವದ ಬಾಬು ಗೌಡರು ಕೃಷಿ ಕ್ಷೇತ್ರದಲ್ಲಿ ದಶಕಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರೆಂಜಿಲಾಡಿ ಭಾಗದ ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದರು


ಕಡಬ: ತಾಲೂಕಿನ ರೆಂಜಿಲಾಡಿ ಗ್ರಾಮದ ಕಾನದಬಾಗಿಲು ನಿವಾಸಿಯಾಗಿದ್ದ ಹಿರಿಯ ಪ್ರಗತಿಪರ ಕೃಷಿಕ ಬಾಬು ಗೌಡ (90) ಅವರು ಅಲ್ಪಕಾಲದ ಅಸೌಖ್ಯದಿಂದ ಫೆಬ್ರವರಿ 14ರ ಶನಿವಾರದಂದು ಸ್ವಗೃಹದಲ್ಲಿ ನಿಧನರಾದರು.
ಸಜ್ಜನ ವ್ಯಕ್ತಿತ್ವದ ಬಾಬು ಗೌಡರು ಕೃಷಿ ಕ್ಷೇತ್ರದಲ್ಲಿ ದಶಕಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರೆಂಜಿಲಾಡಿ ಭಾಗದ ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದ ಇವರು, ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದರು.


ಕೇವಲ ಕೃಷಿಯಲ್ಲದೆ, ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದ ಇವರ ನಿಧನಕ್ಕೆ ಸ್ಥಳೀಯ ಪ್ರಮುಖರು ಹಾಗೂ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ. ಮೃತರು ಪುತ್ರರಾದ ಕಲ್ಲುಗುಡ್ಡೆ ರೇಷ್ಮ ಹಾರ್ಡ್ ವೇರ್ ಮಾಲೀಕ ಲಿಂಗಪ್ಪ ಗೌಡ ಕಾನದಬಾಗಿಲು, ಮಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸುಬ್ರಾಯ ಗೌಡ, ಪುತ್ರಿ ಪಾರ್ವತಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಕುಟುಂಬಸ್ಥರ ಸಮ್ಮುಖದಲ್ಲಿ ಕಾನದಬಾಗಿಲು ನಿವಾಸದಲ್ಲಿ ನೆರವೇರಲಿದೆ.
