ಮರ್ದಾಳದಲ್ಲಿ ಲೋಕಲ್ ಬಿಜೆಪಿ ಮುಖಂಡನ ಉಸ್ತುವಾರಿಯಲ್ಲಿ ಅಕ್ರಮ ಕೋಳಿ ಅಂಕ

kadaba times

ಕಡಬ ತಾಲೂಕಿನ ಮರ್ದಾಳ ಬಳಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕದ  ಮಾಹಿತಿ ಸಂಗ್ರಹಿಸಿದ ಪೊಲೀಸರು ಇಬ್ಬರು ಹಾಗೂ ಇತರರ  ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.  ಪೊಲೀಸರ ಕ್ರಮದಿಂದ ಜೂಜುಕೋರರು ಕಕ್ಕಾಬಿಕ್ಕಿಯಾಗಿದ್ದಾರೆ.

kadaba times
uniq

ಕಡಬ: ಇಲ್ಲಿನ ಠಾಣಾ ವ್ಯಾಪ್ತಿಯ ಮರ್ದಾಳ ಬಳಿ ಲೋಕಲ್ ಬಿಜೆಪಿ ಮುಖಂಡನ ಉಸ್ತುವಾರಿಯಲ್ಲಿ ನಡೆದ ಅಕ್ರಮ ಕೋಳಿ ಅಂಕ ವಿರುದ್ದ ಕಡಬ ಪೊಲೀಸರು ತಡವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರ ಕ್ರಮದಿಂದ ಅಕ್ರಮ ಕೋಳಿ ಅಂಕ ನಡೆಸುತ್ತಿದ್ದ ತಂಡ ಕಕ್ಕಾಬಿಕ್ಕಿಗೊಂಡಿದೆ.

ಪೊಲೀಸರ FIR  ನಲ್ಲಿ ಏನಿದೆ?: ಫೆ.10  ರಂದು   ಕಡಬ ಪೊಲೀಸ್ ಠಾಣೆಯ ಸಿಪಿಬಿ  ಮಹೇಶ್ ಹೆಚ್.ಬಿ ಅವರು  ಗೂಢಚಾರಿ ಕರ್ತವ್ಯದಲ್ಲಿದ್ದಾಗ, ಬಂಟ್ರ ಗ್ರಾಮದ ತೋಟವೊಂದರಲ್ಲಿ ಜನ ಸೇರಿ ಕೂಗಾಡುತ್ತಿರುವ ಮಾಹಿತಿ ಲಭಿಸಿದೆ . ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಅಲ್ಲಿ ಹತ್ತಿರದ ನಿವಾಸಿಗಳು ಕೋಳಿಗಳ ಕಾಲಿಗೆ ಬಾಳು (ಕತ್ತಿ) ಕಟ್ಟಿ, ಹಣವನ್ನು ಪಣಕ್ಕಿಟ್ಟು ಹಿಂಸಾತ್ಮಕವಾಗಿ ಕೋಳಿ ಅಂಕ ನಡೆಸುತ್ತಿರುವುದು ಕಂಡುಬಂದಿದೆ.

ಪೊಲೀಸರನ್ನು  ಗಮನಿಸಿದ ತಕ್ಷಣ ಜೂಜಾಟದಲ್ಲಿ ತೊಡಗಿದ್ದವರು ತಮ್ಮ ಕೋಳಿಗಳೊಂದಿಗೆ ಸ್ಥಳದಿಂದ ಓಡಿ ತಪ್ಪಿಸಿಕೊಂಡಿದ್ದಾರೆ.  ನಂತರ ನಡೆಸಿದ ತನಿಖೆಯಲ್ಲಿ,  ಈ ಅಕ್ರಮ ಕೂಟದ ನೇತೃತ್ವವನ್ನು ಬಂಟ್ರ ಗ್ರಾಮದ ಉಮೇಶ ಗೌಡ (A1) ಮತ್ತು ಐತ್ತೂರು ಗ್ರಾಮದ ವಿನಯ ಸಿ (A2) ಎಂಬುವವರು ವಹಿಸಿದ್ದರು ಎಂದು ತಿಳಿದುಬಂದಿದೆ.

kadaba times
kadaba times

ಈ ಕುರಿತು  ಆರೋಪಿಗಳ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ 1963 (ಕಲಂ 87, 93) ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆ 1960 (ಕಲಂ 3, 11) ಅಡಿಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ . ಪ್ರಸ್ತುತ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

 

Related Articles

Latest Articles