ಗುತ್ತಿಗಾರು: ಎರಡು ತಿಂಗಳ ಗಂಡು ಮಗು ಅಸ್ಪಸ್ಥಗೊಂಡು ಮೃತ್ಯು

kadaba times

ಬೆಳ್ಳಾರೆ/ಗುತ್ತಿಗಾರು: ವಾಂತಿ ಮಾಡಲು ಪ್ರಾರಂಭಿಸಿದ  ಎರಡು ತಿಂಗಳ ಕಂದಮ್ಮ  ಆಸ್ಪತ್ರೆಗೆ ದಾಖಲಿಸಿದರೂ ಉಸಿರಾಟದ ಸಮಸ್ಯೆಯಿಂದ ಮೃತ ಪಟ್ಟ ಘಟನೆ ಗುತ್ತಿಗಾರು ಗ್ರಾಮದಿಂದ ವರದಿಯಾಗಿದೆ.

kadaba times
uniq

ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಕಮಿಲದ ಮಾಧವ-ವೀಣಾ ದಂಪತಿಗಳಿಗೆ ಅ 24 ರಂದು ಗಂಡು ಮಗು ಹುಟ್ಟಿತ್ತು. ಸಂಭ್ರಮದಲ್ಲಿದ್ದ ದಂಪತಿಗಳು ಮಗುವಿಗೆ  ನಿಶ್ಮಿತ್  ಎಂದು ನಾಮಕರಣ ಮಾಡಿದ್ದರು.

ಡಿ.8  ರಂದು ಮುಂಜಾನೆ   ಮಗುವಿಗೆ  ವಾಂತಿ ಆರಂಭವಾದ  ಕಾರಣ  ಕುಂಬ್ರದ ಕ್ಲಿನಿಕ್ ವೊಂದಕ್ಕೆ ಕರೆದುಕೊಂಡು ಹೋಗಿ ಔಷಧಿ ಪಡೆದುಕೊಂಡು ವಾಪಾಸು ಮಗುವಿನ ತಾಯಿಯು ತನ್ನ ಓಡಂತರ್ಯದಲ್ಲಿರುವ ತವರು ಮನೆಗೆ ಬಂದಿದ್ದರು.  ರಾತ್ರಿ  ಮಗುವಿಗೆ ಮತ್ತೆ  ಉಸಿರಾಟದ ಸಮಸ್ಯೆಯಾದ ಕಾರಣ  ಮಗುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು.

kadaba times
kadaba times

ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಮಂಗಳೂರಿನ ಸರಕಾರಿ ವೆನ್ಲಾಕ್  ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಅದರಂತೆ ಮಗುವನ್ನು  ಡಿ.9  ರಂದು  ಮಂಗಳೂರಿನ ಸರಕಾರಿ ವೆನ್ ಲಾಕ್  ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಪರೀಕ್ಷಿಸಿ, ಮಗು  ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ವಾಂತಿ ಮಾಡಲು ಪ್ರಾರಂಭಿಸಿ, ಅಸ್ವಸ್ಥಗೊಂಡ ಮಗು ನಿಶ್ಮಿತ್ ನಿಗೆ  ಚಿಕಿತ್ಸೆ ಕೊಡಿಸಿದರೂ  ಚೇತರಿಸಿಕೊಳ್ಳದೇ ಡಿ.9 ರಂದು   ಗಂಟೆಗೆ ಮೃತಪಟ್ಟಿದ್ದು,  ಈ ಬಗ್ಗೆ ಮೃತ ಮಗುವಿನ ತಂದೆ ನೀಡಿದ ದೂರಿನಂತೆ   ಬೆಳ್ಳಾರೆ  ಪೊಲೀಸ್ ಠಾಣೆ UDR NO. 31-2025 U/S 194 BNSS-2023 ಯಂತೆ ಪ್ರಕರಣ ದಾಖಲಾಗಿದೆ.

Related Articles

Latest Articles