ಕಡಬ: ಕೋಳಿ ಅಂಕ ನಡೆಯುವ ಮುನ್ನವೇ ಪೊಲೀಸರ ಎಂಟ್ರಿ!

kadaba times

ಕಡಬ: ಅಕ್ರಮ ಕೋಳಿ ಅಂಕ ನಡೆಯುವ ಮುನ್ನವೇ ಪೊಲೀಸರು ಸ್ಥಳಕ್ಕೆ ಎಂಟ್ರಿ ಕೊಟ್ಟು ಬರೀ ಗೈಯಲ್ಲಿ  ವಾಪಸ್ಸಾದ ಘಟನೆ ಡಿ.2 ರಂದು ಐತ್ತೂರು ಗ್ರಾಮದಿಂದ ವರದಿಯಾಗಿದೆ.

kadaba times
uniq

ಕಡಬ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದ ಓಟೆಕಜೆ ಎಂಬಲ್ಲಿ ಹಲವು ಬಾರಿ ಭರ್ಜರಿಯಾಗಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಸುದ್ದಿಯಾಗಿತ್ತು.  ಕಡಬ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ  ಫಲಪ್ರದವಾಗಿರಲಿಲ್ಲ.

ಮಂಗಳವಾರ ದಿನ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ದೊರೆತ ಹಿನ್ನೆಲೆ ನೂತನ ಎಸ್.ಐ ಜಂಬುರಾಜ್ ಮಹಾಜನ್ ಅವರಿಗೆ ಸೂಚನೆ ಬಂದಿತ್ತು ಎನ್ನಲಾಗಿದೆ.  ಮಾಹಿತಿ ಬಂದ ಸ್ಥಳಕ್ಕೆ ತಕ್ಷಣ ಕಡಬ ಠಾಣಾ ಪೊಲೀಸ್ ಉಪನಿರೀಕ್ಷರು  ತೆರಳಿ ಪರಿಶೀಲಿಸಿದ್ದಾರೆ .

kadaba times
kadaba times

ಕೋಳಿ ಅಂಕ ಸುಮಾರು 3 ಗಂಟೆಗೆ ಆರಂಭವಾಗುವುದಿತ್ತು. ಆದರೆ ಮಧ್ಯಾಹ್ನವೇ ಪೊಲೀಸರು ಪರಿಶೀಲನೆಗೆ ತೆರಳುತ್ತಿರುವ ಮಾಹಿತಿ ಸೋರಿಕೆಯಾಗಿ ಸ್ಥಳದಲ್ಲಿದ್ದವರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿದು ಬಂದಿದೆ.    ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿ,   ಸದ್ರಿ ಸ್ಥಳದಲ್ಲಿ ಯಾವುದೇ ಅಕ್ರಮ ಕೋಳಿ ಅಂಕ ಕಂಡುಬಂದಿರುವುದಿಲ್ಲ,  ಮುಂದಿನ ದಿನಗಳಲ್ಲೂ ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ ನಿಗಾವಹಿಸಲಾಗುವುದು ಎಂದು ತಿಳಿಸಿದ್ದಾರೆ.

Related Articles

Latest Articles