ಲಕ್ಷಗಟ್ಟಲೆ ತೆರಿಗೆ ಶುಲ್ಕ , ಅಂಗಡಿಗಳ ಬಾಡಿಗೆ ಹಣ ಗುಳುಂ :ಪಂಜ ಗ್ರಾ.ಪಂ ಬಿಲ್‌ ಕಲೆಕ್ಟರ್‌ ಅಮಾನತು

kadaba times

ಪಂಜ: ಗ್ರಾಮ ಪಂಚಾಯತ್‌ನ ತೆರಿಗೆ, ಇತರ ಶುಲ್ಕ ಹಾಗೂ ಅಂಗಡಿಗಳ ಬಾಡಿಗೆ ಹಣವನ್ನು ದುರುಪಯೋಗ ಮಾಡಿದ ಆರೋಪದಲ್ಲಿ ಗ್ರಾ.ಪಂ. ಸಿಬಂದಿಯನ್ನು ಆಡಳಿತ ಅಮಾನತು ಮಾಡಿರುವ ಘಟನೆ ಪಂಜದಲ್ಲಿ ನಡೆದಿದೆ.

kadaba times
uniq

ಪಂಜ ಗ್ರಾ.ಪಂ.ನಲ್ಲಿ ಬಿಲ್‌ ಕಲೆಕ್ಟರ್‌ ಆಗಿರುವ ಬಾಬು ಅಮಾನತಿಗೊಳಗಾದವರು. ಅವರು ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಬ್ಯಾಂಕ್‌ಗೆ ಪಾವತಿಸದೇ ದುರುಪಯೋಗ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಗ್ರಾ.ಪಂ. ಆಡಳಿತ ಹಾಗೂ ಪಿಡಿಒ ಅವರು ವಿಚಾರಿಸಿದಾಗ ಬಾಬು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ತುರ್ತು ಸಭೆ ನಡೆಸಿ ಅಮಾನತು ನಿರ್ಣಯ ಕೈಗೊಂಡಿದೆ ಹಾಗೂ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದೆ.

kadaba times
kadaba times

2024 25ನೇ ಸಾಲಿನ 6.05 ಲಕ್ಷ ರೂ. ಹಾಗೂ 2025 26ನೇ ಸಾಲಿನ 7.89 ಲಕ್ಷ ರೂ. ಸೇರಿದಂತೆ ಒಟ್ಟು 13.94 ಲಕ್ಷ ರೂ.ಗಳನ್ನು ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.

Related Articles

Latest Articles