
ಕಡಬ: ದ. ಕ ಜಿಲ್ಲೆಯ ಅಡಕೆ, ತೆಂಗು ಬೆಳೆಗಾರರು ತೋಟಗಳಿಗೆ ಬಂದಿರುವ ರೋಗ ಭಾಧೆಗಳಿಂದ ಕಂಗೆಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರ ರೈತರಿಗೆ ನೆರವಾಗಿ ನಿಲ್ಲಬೇಕು, ಆದರೆ ರೈತರಿಗೆ ಸಿಗಬೇಕಾದ ಫಝಲ್ ಭೀಮಾ ಬೆಳೆ ವಿಮೆ ಇನ್ನು ಕೈ ಸೇರಿಲ್ಲ, ಕೆಲವು ಸಹಕಾರ ಸಂಘಗಳಿಗೆ ಸಾಲ ಮನ್ನಾದ ಹಣ ಇನ್ನೂ ಜಮೆಯಾಗಿಲ್ಲ. ಈ ಎಲ್ಲಾ ವಿಷಯಗಳ ಬಗ್ಗೆ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸುದಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.


ಅವರು ಸೋಮವಾರ ಕಡಬ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಯೋಗ ಕ್ಷೇಮ ಸಹಕಾರ ಭವನದಲ್ಲಿ ಪ್ರಾರಂಭಿಸಿರುವ ನೂತನ ಮಣ್ಣು ಪರೀಕ್ಷಾ ಕೇಂದ್ರ ಭೂಸತ್ವ ಉದ್ಘಾಟನಾ ಕರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


