ಕಡಬ: ಮರಿಯಾನೆ ಜೊತೆ ಬೀಡು ಬಿಟ್ಟ ಎರಡು ಕಾಡಾನೆಗಳು:ಆತಂಕದಲ್ಲಿ ಬಜಕರೆ ನಿವಾಸಿಗಳು

kadaba times

ಕಡಬ: ಇಲ್ಲಿನ ಮರ್ದಾಳ ಸಮೀಪದ  ಐತ್ತೂರು ಗ್ರಾಮದ ಬಜಕರೆ ಬಳಿ ಮರಿಯಾನೆ ಜೊತೆಗೆ ಎರಡು ಕಾಡಾನೆಗಳು ಕಳೆದ ನಾಲ್ಕು ದಿನಂದಿದ ಬೀಡು ಬಿಟ್ಟಿದ್ದು ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ.

kadaba times
uniq

ಮೂಜೂರು ಮೀಸಲು ಅರಣ್ಯ ವ್ಯಾಪ್ತಿಯ ಬಜಕರೆ ಸಿ ಆರ್ ಸಿ ಕಾಲನಿ ಪಕ್ಕದ ಅರಣ್ಯ ಪ್ರದೇಶದಲ್ಲಿ ಕಾಣಸಿಕ್ಕಿದ್ದು ಬಜಕರೆ ತೋಡಿನ ಬಳಿ ಇರುವ ಬಿದಿರನ್ನು ಆಹಾರಕ್ಕಾಗಿ ಪುಡಿಗೈದಿದೆ. ಹತ್ತಿದರದಲ್ಲಿದ್ದ ತಾಳೆಮರವನ್ನೂ ಛಿದ್ರ ಛಿದ್ರ ಮಾಡಿರುವುದು ಕಂಡು ಬಂದಿದೆ.

ನ.13  ರ ಮುಂಜಾನೆ ದ್ವಿಚಕ್ರ ವಾಹನದಲ್ಲಿ   ರಬ್ಬರ್ ಟ್ಯಾಪಿಂಗ್ ಗೆ ತೆರಳುತ್ತಿದ್ದ ಕಾರ್ಮಿಕರೊಬ್ಬರಿಗೆ  ಕಾಡಾನೆ ಎದುರಾಗಿದ್ದು ಸಮಯ  ಪ್ರಜ್ಞೆಯಿಂದ ಬೇರೆ ದಾರಿಯಲ್ಲಿ ತೆರಳಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆನೆ ಠಿಕಾಣಿ ಹೂಡಿರುವ ಸ್ಥಳದಿಂದ   100 ಮೀ ಅಂತರದಲ್ಲಿ ಅಂಗನವಾಡಿ ಸಹಿತ ಜನವಸತಿ ಪ್ರದೇಶವಿದೆ.

kadaba times
kadaba times

ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದು ರಾತ್ರಿ ವೇಳೆ  ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಗಳು ಗರ್ನಲ್ ಸಿಡಿಸಿ ಆನೆ ಓಡಿಸಲು ಯತ್ನಿಸಿರುವುದಾಗಿ ತಿಳಿದು ಬಂದಿದೆ.  ಈ ಶಬ್ದರಿಂದ ಮರಿಯಾನೆ ಇರುವ ಕಾರಣ  ಆನೆ ಮತ್ತಷ್ಟು ಆಕ್ರೋಶಗೊಂಡು ಜನರ ಮೇಲೆ ದಾಳಿ ಮಾಡಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ.   ಮತ್ತೊಂದೆಡೆ ಅರಣ್ಯ ಇಲಾಖೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲವೆಂಬ ಆರೋಪವೂ ಕೇಳಿ ಬಂದಿದೆ.

ಈ ಹಿಂದೆ ಕಡಬ ಮರ್ದಾಳದಲ್ಲಿ ಕಾಡಾನೆಗೆ ಯುವತಿ ಮತ್ತು ವ್ಯಕ್ತಿಯೊಬ್ಬರು ಬಲಿಯಾಗಿದ್ದು ಇಂತಹ ಘಟನೆ ಮತ್ತೆ ನಡೆಯಂತೆ ಇಲಾಖೆ ಎಚ್ಚೆತ್ತುಕೊಳ್ಳಬೇಕು ,   ಅರಣ್ಯ ಇಲಾಖೆ ಕಾಡಾನೆಗಳನ್ನು ಸ್ಥಳಾಂತರಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದ್ದಾರೆ.

Related Articles

Latest Articles