ಕಡಬ ಠಾಣೆಯ ಎಸ್.ಐ ಅಭಿನಂದನ್ ಎ.ಎಸ್ ಸಹಿತ ಮೂವರು ದಿಢೀರ್ ವರ್ಗಾವಣೆ

kadaba times

ಕಡಬ: ಕಡಬ ಠಾಣಾ ಎಸ್.ಐ  ಅಭಿನಂದನ್ ಎ.ಎಸ್ ಸಹಿತ ಮೂರು ಪೊಲೀಸ್ ಉಪನಿರೀಕ್ಷರನ್ನು ವರ್ಗಾವಣೆ ಗೊಳಿಸಿ  ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಅಮಿತ್ ಸಿಂಗ್ ಐಪಿಎಸ್ ಅವರು ನ.14  ರಂದು  ಆದೇಶ ಹೊರಡಿಸಿದ್ದಾರೆ.

kadaba times
uniq

ಬಂಟ್ವಾಳ ನಗರ ಠಾಣೆ  ಪಿ ಎಸ್.ಐ ಗುಣಪಾಲ ಜೆ   (ತನಿಖೆ) ಅವರನ್ನು ಪುತ್ತೂರು ಗ್ರಾಮಾಂತರ ಠಾಣೆಗೆ,  ಪುತ್ತೂರು ಗ್ರಾಮಾಂತರ ಠಾಣಾ ಎಸ್.ಐ ಜಂಬೂರಾಜ್ ಮಹಾಜನ್ ಅವರನ್ನು  ಕಡಬ ಠಾಣೆಗೆ,   ಶ್ರೀ ಮತಿ ಸುಧಾ ಪ್ರಭು ಅವರ ಸ್ಥಳಕ್ಕೆ ಪಶ್ಚಿಮ ವಲಯ ಕಚೇರಿಯಲ್ಲಿ   ಸ್ಥಳ ನಿರೀಕ್ಷಣೆಯಲ್ಲಿದ್ದ  ಮಹಾಂತೇಶ್ ಜಾಬ ಗೌಡ ಅವರನ್ನು ಉಡುಪಿಯ ಕೋಟ ಠಾಣೆ(ತನಿಖೆ)ಗೆ ವರ್ಗಾವಣೆಗೊಳಿಸಲಾಗಿದೆ.

ಕಡಬ ಠಾಣೆಯಿಂದ ವರ್ಗಾವಣೆಗೊಂಡಿರುವ ಅಭಿನಂದನ್ ಎಂ.ಎಸ್ ಅವರಿಗೆ  ಯಾವುದೇ ಸ್ಥಳವನ್ನು ಸೂಚಿಸಿಲ್ಲ  .ತಕ್ಷಣದಿಂದ ಜಾರಿಗೆ ಬರುವಂತೆ ಸಾರ್ವಜನಿಕ ಹಿತದೃಷ್ಟಿ ಮತ್ತು ಆಡಳಿತಾತ್ಮಕ  ಕಾರಣಗಳಿಗಾಗಿ ಮುಂದಿನ ಆದೇಶದವರೆಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

kadaba times
kadaba times

ಸಂಬಂಧಪಟ್ಟ ಪೊಲೀಸ್ ಅಧೀಕ್ಷಕರು ಮೇಲ್ಕಂಡ ಪಿಎಸ್‌ಐ ರವರನ್ನು ಸ್ಥಳ ನಿಯುಕ್ತಿಗೊಳಿಸಿರುವ ಸ್ಥಳದಲ್ಲಿ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿ ಕಳುಹಿಸುವುದು ಮತ್ತು ಅವರನ್ನು ಬಿಡುಗಡೆ ಮಾಡಿದ ಹಾಗೂ ಕರ್ತವ್ಯಕ್ಕೆ ವರದಿ ಮಾಡಿಕೊಂಡ ದಿನಾಂಕದ ಬಗ್ಗೆ ಈ ಕಛೇರಿಗೆ ಮಾಹಿತಿ ನೀಡುವುದು. ಈ ಆದೇಶದಿಂದಾಗಿ ಸ್ಥಳ ನಿಯುಕ್ತಿಗೊಳ್ಳದ ಪಿಎಸ್‌ಐ ರವರು ಮುಂದಿನ ಸ್ಥಳ ನಿಯುಕ್ತಿಗಾಗಿ ಪಶ್ಚಿಮ ವಲಯ ಕಛೇರಿಯಲ್ಲಿ ವರದಿ ಮಾಡುವುದು ಎಂದು ಪೊಲೀಸ್ ಮಹಾ ನಿರೀಕ್ಷಕರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

Related Articles

Latest Articles