ಬಂಟ್ವಾಳ ಬಳಿ ಭೀಕರ ರಸ್ತೆ ಅಪಘಾತ: ಕಡಬದ ಸ್ಕೂಟಿ ಸವಾರೆ ಸ್ಥಳದಲ್ಲೇ ಮೃತ್ಯು

kadaba times

ಕಡಬ: ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಡಬದ ಮೂಲದ ಸ್ಕೂಟರ್ ಸವಾರೆ ಮೃತಪಟ್ಟಿರುವ   ದಾರುಣ ಘಟನೆ ಬಂಟ್ವಾಳದ ಕಾವಳಕಟ್ಟೆ ಎಂಬಲ್ಲಿ ನ. 19ರಂದು ಸಂಭವಿಸಿದೆ.

kadaba times
uniq

ಕಡಬದ ಶ್ರೀ ದುರ್ಗಾ ಎಲೆಕ್ಟ್ರಿಕಲ್  ಮಾಲಕರಾಗಿರುವ  ಕುಂತೂರು ನಿವಾಸಿ  ಸುನಿಲ್ ಕೊಲತ್ತಾಯ ಎಂಬವರ ಪುತ್ರಿ ,ಸ್ಕೂಟರ್ ಸವಾರೆ ಅನನ್ಯಾ (21ವ)  ಮೃತಪಟ್ಟವರು .

ಸ್ಕೂಟರ್ ನ  ಇನ್ನೋರ್ವ  ಸಹ ಸವಾರೆ  ಗುರುವಾಯನಕೆರೆ ನಿವಾಸಿ ಪೃಥ್ವಿ ಗಂಭೀರ ಗಾಯಗೊಂಡಿರುವುದಾಗಿದೆ. ಇಬ್ಬರೂ ಮಂಗಳೂರು ಕಾಲೇಜಿನ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿಯರೆಂದು ತಿಳಿದು ಬಂದಿದೆ.

kadaba times
kadaba times

ಗಾಯಾಳು ವಿದ್ಯಾರ್ಥಿನಿಯನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಇವರಿಬ್ಬರೂ ಮಂಗಳೂರಿನ ಕಾ ಘಟನಾ ಸ್ಥಳಕ್ಕೆ ಪೂಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Latest Articles