ನೆಲ್ಯಾಡಿ:ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಗೆ ಬೆಂಕಿ :ಆರು ತಿಂಗಳ ಹಿಂದೆ ಖರೀದಿಸಿದ್ದಸ್ಕೂಟರ್ ಸಹಿತ ಬೆಲೆ ಬಾಳುವ ಸೊತ್ತುಗಳು ಬೆಂಕಿಗಾಹುತಿ

kadaba times

ನೆಲ್ಯಾಡಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಗೆ ಬೆಂಕಿ ತಗುಲಿ ಸ್ಕೂಟರ್ ಸಹಿತ ಬೆಲೆ ಬಾಳುವ ಸೊತ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ನ.19ರಂದು ಮಧ್ಯಾಹ್ನ ನೆಲ್ಯಾಡಿ ಗ್ರಾಮದಲ್ಲಿ ನಡೆದಿದೆ.

kadaba times
uniq

ಕೊಪ್ಪ ಮಾದೇರಿ ನಿವಾಸಿ, ಶಿಕ್ಷಕ   ಜೋಸ್‌ಪ್ರಕಾಶ್‌ರವರ ಮನೆಯಲ್ಲಿ ಈ ಅವಘಡ ನಡೆದಿದೆ. ಮುಂಜಾನೆ ಮನೆಗೆ ಬೀಗ ಹಾಕಿ ಪತಿ –ಪತ್ನಿ ಕೆಲಸಕ್ಕೆ ತೆರಳಿದ್ದು ಮಕ್ಕಳು ಶಾಲೆಗೆ ತೆರಳಿದ್ದರು.   ಮಧ್ಯಾಹ್ನ 12 ಗಂಟೆ ವೇಳೆಗೆ ಸ್ಥಳೀಯರು  ಕರೆ ಮಾಡಿ ಮನೆಗೆ ಬೆಂಕಿ ತಗುಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ವಾಷಿಂಗ್ ಮಿಷನ್‌ಗಾಗಿ ಮನೆಯ ಹಿಂಬದಿ ಗೋಡೆಗೆ ಸಂಪರ್ಕ ಕಲ್ಪಿಸಿದ್ದ ಪ್ಲಗ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ.  ಘಟನೆಯಲ್ಲಿ ವಾಷಿಂಗ್‌ಮಿಷನ್, ಅಲ್ಲೇ ಪಕ್ಕದಲ್ಲಿದ್ದ ಆರು ತಿಂಗಳ ಹಿಂದೆಯಷ್ಟೇ ಹೊಸದಾಗಿ ಖರೀದಿಸಿದ್ದ  ಸ್ಕೂಟರ್, ಮನೆಯ ಹಿಂಬದಿ ಸಿಮೆಂಟ್ ಶೀಟ್ ಹಾಕಿ ಮಾಡಿದ್ದ ಶೆಡ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಅಲ್ಲದೇ ಮನೆಯ ಬಾಗಿಲು, ಕಿಟಕಿ ಬಾಗಿಲು, ಕಿಟಕಿ ಗಾಜು ಸಹಿತ ಬೆಲೆ ಬಾಳುವ ಗೃಹೋಪಯೋಗಿ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿವೆ.

kadaba times
kadaba times

ಘಟನೆ ಬಗ್ಗೆ ಮನೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರೂ ಸಂಪರ್ಕಕ್ಕೆ ಸಿಗಲಿಲ್ಲ. ಸ್ಥಳೀಯರೇ ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಆದರೆ ಆ ವೇಳೆಗಾಗಲೇ ಮನೆಯಲ್ಲಿನ ಬೆಲೆಬಾಳುವ ಸೊತ್ತುಗಳು ಸುಟ್ಟುಹೋಗಿವೆ.  ಬೆಂಕಿ ನಂದಿಸಿದ ಬಳಿಕ ಸ್ಥಳೀಯರ ಸಹಕಾರದಿಂದ ಮನೆಯನ್ನು ಸ್ವಚ್ಛಗೊಳಿಸಲಾಗಿದೆ.

ಘಟನಾ ಸ್ಥಳಕ್ಕೆ  ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಸಿಬ್ಬಂದಿ ಶಿವಪ್ರಸಾದ್, ನೆಲ್ಯಾಡಿ ಹೊರಠಾಣೆ ಹೆಡ್‌ಕಾನ್ಸ್‌ಸ್ಟೇಬಲ್ ಪ್ರವೀಣ್, ಗ್ರಾಮಸಹಾಯಕ ಚರಣ್ ಸೇರಿದಂತೆ ಹಲವು ಮಂದಿ ಭೇಟಿ ನೀಡಿದ್ದಾರೆ.

Related Articles

Latest Articles