ಕೋಡಿಂಬಾಳದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಮಾಡಿ: ಅಧಿಕಾರಿಗಳಿಗೆ ಹಿಂದಿ-ಇಂಗ್ಲಿಷ್ ಭಾಷೆಯಲ್ಲಿ ಮನವರಿಕೆ ಮಾಡಿದ ಪ.ಪಂ ಅಧ್ಯಕ್ಷೆ

kadaba times

ಕಡಬ: ಮಂಗಳೂರು-ಬೆಂಗಳೂರು ರೈಲು ಮಾರ್ಗದ  ಕೊಡಿಂಬಾಳ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಮಾಡುವಂತೆ ಕಡಬ ಪಟ್ಟಣ ಪಂಚಾಯತ್ ವತಿಯಿಂದ ಮನವಿಸಲ್ಲಿಸಲಾಗಿದೆ.

kadaba times
uniq

ನೆಟ್ಟಣದಲ್ಲಿರುವ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಆಗಮಿಸಿದ  ದಕ್ಷಿಣ ಪಶ್ಚಿಮ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಶರಣ್ ಮಾಥೂರ್ ಅವರಿಗೆ   ಪ.ಪಂ ಅಧ್ಯಕ್ಷೆ ತಮ್ಮನಾ ಜಬಿನ್ ಅವರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ  ಕೋಡಿಂಬಾಳದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಯ ಅಗತ್ಯವನ್ನು ವಿಸ್ಕೃತವಾಗಿ  ವಿವರಿಸಿದರು.

ಇದೇ ವೇಳೆ  ಹೋರಾಟಗಾರ ಸಯ್ಯದ್ ಮೀರಾ ಸಾಹೇಬ್ ಅವರು ಈ ಹಿಂದಿನ ಹೋರಾಟದ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಬಳಿಕ ಮನವಿ ನೀಡಲಾಯಿತು. ಬಳಿಕ ಮಾತನಾಡಿದ ಮುಕುಲ್ ಶರಣ್ ಮಾಥೂರ್ ಅವರು ಈ ಬಗ್ಗೆ ಸೂಕ್ತವಾಗಿ ಪರಿಶೀಲಿಸಿ ಕ್ರಮಕೈಕೊಳ್ಳುವ ಭರವಸೆ ನೀಡಿದರು.

kadaba times
kadaba times

ಕಡಬ ತಾಲೂಕು ಕೇಂದ್ರ ಹತ್ತಿರದಲ್ಲಿದ್ದು   ಸುತ್ತಮುತ್ತಲಿನ   ಸಾವಿರಾರು ಜನರು ಪ್ರತಿದಿನ ಪ್ರಯಾಣಕ್ಕೆ ಈ ನಿಲ್ದಾಣವನ್ನು ಅವಲಂಬಿಸಿದ್ದಾರೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯರು, ಹೆಚ್ಚಿನ ಸಂಖ್ಯೆಯಲ್ಲಿ  ಈ ಮಾರ್ಗ ಬಳಸುತ್ತಿರುವುದಾಗಿದೆ.  ಈ ನಿಲ್ದಾಣದಲ್ಲಿ  ಎಕ್ಸ್‌ಪ್ರೆಸ್ ರೈಲು ನಿಲ್ಲದ ಕಾರಣ ಸಮೀಪದ ನಿಲ್ದಾಣಗಳಿಗೆ ಹೋಗಬೇಕಾದ ಅನಿವಾರ್ಯತೆ ಇದ್ದು  ಬಂದು ಹೆಚ್ಚುವರಿ ವೆಚ್ಚ ಹಾಗೂ ಸಮಯವೂ ನಷ್ಟವಾಗುತ್ತಿದೆ  ಎಂದು ಮನವಿನಲ್ಲಿ ಉಲ್ಲೇಖಿಸಲಾಗಿದೆ.

ಕೊಡಿಂಬಾಳ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗಾಗಿ ಹಲವು ದಶಕಗಳಿಂದ ನಡೆಯುತ್ತಿರುವ ಸ್ಥಳೀಯರ ಹೋರಾಟ ನನಸಾಗುವ ಕಾಲ ಹತ್ತಿರವಾಗಿದೆ.  ಕೊಡಿಂಬಾಳ ರೈಲು  ನಿಲ್ದಾಣವು ಕಡಬ, ಪಂಜ, ಆಲಂಕಾರು, ನೆಲ್ಯಾಡಿ, ಮರ್ದಾಳ   ಸೇರಿದಂತೆ ಸುತ್ತಮುತ್ತಲಿನ  ಪ್ರದೇಶದ ಜನರ ಸಂಚಾರದ ಪ್ರಮುಖ ಕೇಂದ್ರವಾಗಿದೆ. ಆದಾಗ್ಯೂ, ಸಾಮಾನ್ಯ ಪ್ರಯಾಣಿಕರ ರೈಲುಗಳನ್ನು ಹೊರತುಪಡಿಸಿ ಯಾವುದೇ ಎಕ್ಸ್‌ಪ್ರೆಸ್ ರೈಲು ಇಲ್ಲಿ ನಿಲ್ಲದಿರುವುದರಿಂದ ಜನರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.

Related Articles

Latest Articles