ನಮ್ಮ ಕಡಬಕ್ಕೆ ಹೆಮ್ಮೆ: ರಾಷ್ಟ್ರೀಯ ಕಬ್ಬಡಿ ಟೂರ್ನಮೆಂಟ್ ಗೆ ಆಯ್ಕೆಯಾದ ಶ್ರೀ ಭಾರತಿ ವಿದ್ಯಾಸಂಸ್ಥೆಯ 4 ಕಬಡ್ಡಿ ಪಟುಗಳು

kadaba times

ಆಲಂಕಾರು :-ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ,36ನೇ ಅಖಿಲ ಭಾರತೀಯ ಖೇಲಖೂದ್,ಕಬ್ಬಡಿ ಟೂರ್ನಮೆಂಟ್ 2025-26 ಇದರ ವತಿಯಿಂದ ಭಾರತ ಭಾರತಿ ರೆಸಿಡೆನ್ಸಿಯಲ್ ಸಿ.ಬಿ.ಎಸ್.ಸಿ ಸ್ಕೂಲ್,ಜಾಮಟಿ,ಬೆತುಲ್,ಮಧ್ಯಪ್ರದೇಶ ಇಲ್ಲಿ ನಡೆದ 14ರ ವಯೋಮಾನದ ಬಾಲಕಿಯರ ರಾಷ್ಟ್ರಮಟ್ಟದ ಕಬಡ್ಡಿ ಫೈನಲ್ ಫೈಟ್ ನಲ್ಲಿ ಬಲಿಷ್ಠ ವೆಸ್ಟ್ ಯು.ಪಿ ವಿರುದ್ದ 36-35 ಅಂತರದ ಜಯದೊಂದಿಗೆ ದಕ್ಷಿಣ ಮಧ್ಯ ಕ್ಷೇತ್ರ ತಂಡವು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ದ ರಾಷ್ಟ್ರೀಯ ಕಬ್ಬಡಿ ಟೂರ್ನಮೆಂಟ್ ಗೆ ಆಯ್ಕೆಯಾಗಿರುತ್ತದೆ.

kadaba times
uniq

ತಂಡದಲ್ಲಿ ಶ್ರೀ ಭಾರತಿ ವಿದ್ಯಾಸಂಸ್ಥೆಯ ಕಬಡ್ಡಿ ಪಟುಗಳಾದ ತೃಷಾ ಕೋಡಂದೂರು (ಚಾರ್ವಾಕ ದಿ.ದಾಮೋದರ ಗೌಡ ಮತ್ತು ದೇವಿಕಾ ದಂಪತಿ ಪುತ್ರಿ ),ಧನ್ಯಶ್ರೀ ಅರ್ಬಿ (ಅರ್ಬಿ ಲೋಕೇಶ್ ಗೌಡ ದಂಪತಿಗಳ ಪುತ್ರಿ), ಸಾತ್ವಿಕ ಕೆದ್ದೋಟ್ಟೆ (ಕುಂತೂರು ಕೆದ್ದೋಟ್ಟೆ ಶೇಖರ ಗೌಡ ಕೆ.ಕೆ ಮತ್ತು ಸುನೀತಾ ದಂಪತಿಗಳ ಪುತ್ರಿ)ಧ್ರುವಿ ಬಾಕಿಲ(ಚಾರ್ವಾಕ ಬಾಕಿಲ ವಸಂತ ಗೌಡ ಬಿ ಮತ್ತು ಲೀಲಾವತಿ ದಂಪತಿಗಳ ಪುತ್ರಿ) ಈ ಕಬಡ್ಡಿ ಪಟುಗಳು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮುಂದೆ ಡಿಸೆಂಬರ್ ನಲ್ಲಿ ತೆಲಂಗಾಣ ರಾಜ್ಯದ ವಿಜಯವಾಡದಲ್ಲಿ ಕೇಂದ್ರ ಸರಕಾರದ ಕ್ರೀಡಾ ಇಲಾಖೆಯ ಅಡಿಯಲ್ಲಿ ಬರುವ, ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಇದರ 14 ವಯೋಮಾನದ ರಾಷ್ಟ್ರೀಯ ಕಬಡ್ಡಿ ಟೂರ್ನಮೆಂಟ್ ನಲ್ಲಿ ದೇಶದ 29ರಾಜ್ಯ ಗಳಿಂದ ಬರುವ ತಂಡಗಳ ಮಧ್ಯೆ 30ನೇ ತಂಡವಾಗಿ ಕಣಕ್ಕಿಲಿಯರಿದ್ದಾರೆ. ಇದು ಆಲಂಕಾರು ಊರಿಗೆ ಐತಿಹಾಸಿಕ ಕ್ಷಣವಾಗಿದ್ದು, ನೂರಾರು ಕಬಡ್ಡಿ ಪ್ರೇಮಿಗಳು ಗ್ರಾಮೀಣ ಮಕ್ಕಳ SGFI ಸಾಧನೆ ಯನ್ನು ಕೊಂಡಾಡಿದ್ದಾರೆ.

kadaba times
kadaba times

ಈ ಸಾಧನೆಯ ಹಿಂದೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ.ಸುರೇಶ ಕುಮಾರ್ ಕೂಡೂರು,ಶಾಲಾ ಸಂಚಾಲಕ ಗಂಗಾಧರ ಗೌಡ ಕುಂಡಡ್ಕ ,ಉಪಾಧ್ಯಕ್ಷ ಈಶ್ವರಗೌಡ ಪಜ್ಜಡ್ಕ, ಕಾರ್ಯದರ್ಶಿ ಇಂದುಶೇಖರ ಶೆಟ್ಟಿ,ಕೋಶಧಿಕಾರಿ ರಾಮಚಂದ್ರ ಭಟ್ ಅತ್ರಿವನ, ಶಾಲಾ ಶೈಕ್ಷಣಿಕ ಪರಿವೀಕ್ಷಕ ಗಿರಿಶಂಕರ್ ಸುಲಾಯ ಸೇರಿದಂತೆ ಶಾಲೆಯ ಸಮಸ್ತ ಆಡಳಿತ ಮಂಡಳಿ  ಸಹಕರಿಸಿದ್ದಾರೆ.   ಶಿಕ್ಷಕ ತಂಡದ ತರಬೇತುದಾರ ಚಂದ್ರಹಾಸ್ ಕೆ.ಸಿ ಕುಂಟ್ಯಾನ ಇವರ ಪೂರ್ಣ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ.

Related Articles

Latest Articles