
ದ.ಕ. ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದೆ.


ಕಡಬ ಸೇರಿದಂತೆ ಸುತ್ತ ಮುತ್ತಲ ಪ್ರದೇಶದಲ್ಲಿ ಸುಮಾರು 9 ರ ಹತ್ತು ಗಂಟೆಯ ಹೊತ್ತಿಗೆ ಗಾಳಿ, ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿದಿದೆ.
ಜಿಲ್ಲೆಯ ಹಲವಡೆ ಆಗಾಗ ಮಳೆಯಾಗುತ್ತಿದ್ದು,ಸುಬ್ರಹ್ಮಣ್ಯ,ಕಡಬ ಸೇರಿದಂತೆ ಕುಮಾರ ಪರ್ವತ ತಪ್ಪಲಿನಲ್ಲಿ ಕೆಲವು ದಿನಗಳಿಂದ ಮಳೆ ಕಣ್ಮರೆಯಾಗಿತ್ತು.


ಸಿಡಿಲಿನ ಅರ್ಭಟಕ್ಕೆ ಕೆಲವಡೆ ವಿದ್ಯುತ್ ಸಂಪರ್ಕ ಕಡಿದು ಹೋಗಿ ಜನಸಾಮಾನ್ಯರು ತೊಂದರೆ ಅನುಭವಿಸಿದ್ದಾರೆ.
