ಕುಂತೂರು ಮಸೀದಿ ಬಳಿ ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ

kadaba times

ಆಲಂಕಾರು: ರಸ್ತೆ ದಾಟಿ ಮಣ್ಣು ರಸ್ತೆ ತಲುಪಿದ್ದ ಬಾಲಕನಿಗೆ ಕಾರು ಡಿಕ್ಕಿಯಾದ ಘಟನೆ ನ.19ರಂದು ಬೆಳಿಗ್ಗೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕುಂತೂರು ಮಸೀದಿ ಬಳಿ ನಡೆದಿದೆ.

kadaba times
uniq

ಕುಂತೂರು ಗ್ರಾಮದ ಎರ್ಮಾಳ ನಿವಾಸಿ ರಶೀದ್ ಅವರ ಪುತ್ರ, ಕುಂತೂರು ಸರಕಾರಿ ಶಾಲಾ 4ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಅಹಿಲ್ (10ವ.) ಗಾಯಗೊಂಡ ಬಾಲಕ.

ಈ ಸುದ್ದಿಯನ್ನು ಓದಿರಿ:ಮೂರು ವರ್ಷದ ಹೋರಿಯನ್ನು ಕಡಿದು ಮಾಂಸ ಮಾಡುತ್ತಿದ್ದ ಶೆಡ್ ಗೆ ಸುಬ್ರಹ್ಮಣ್ಯ ಪೊಲೀಸರ ದಾಳಿ

ಈತ ಮಸೀದಿಗೆ ಹೋಗಲು ರಸ್ತೆ ದಾಟಿ ಮಣ್ಣು ರಸ್ತೆಗೆ ತಲುಪಿದಾಗ ಕಡಬ ಕಡೆಯಿಂದ ಕಿರಣ್‌ಕುಮಾರ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ವೆನ್ಯೂ ಕಾರು (24ಬಿಹೆಚ್ 0553ಬಿ) ಡಿಕ್ಕಿಯಾಗಿದೆ.

kadaba times
kadaba times

ಈ ಸುದ್ದಿಯನ್ನು ಓದಿರಿ: ಮನೆಯ ಹಿಂದಿನ ಕೊಟ್ಟಿಗೆಯ ಬಳಿ ಇದ್ದ ಐದು ವರ್ಷದ ಮಗುವನ್ನು ಹೊತ್ತೊಯ್ದ ಚಿರತೆ

ಘಟನೆಯಲ್ಲಿ ಬಾಲಕನ ಕಾಲಿಗೆ ಗಾಯವಾಗಿದ್ದು ಚಿಕಿತ್ಸೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಪೂಂಜ ನಿವಾಸಿ ಡಿ.ಅಬೂಬಕ್ಕರ್ ಸಿದ್ದೀಕ್ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Latest Articles