
ಕಡಬ ಟೈಮ್ಸ್, ಮರ್ದಾಳ : ಇಲ್ಲಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ಬಳಿ ಎರಡು ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು ವಾಹನದಲ್ಲಿದ್ದ ಇಬ್ಬರಿಗೆ ಗಾಯವಾದ ಘಟನೆ ಅ.19 ರ ಸಂಜೆ ನಡೆದಿದೆ.ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಸುಬ್ರಹ್ಮಣ್ಯಕ್ಕೆ ತೆರಳಿ ವಾಪಾಸು ಬರುತ್ತಿದ್ದ ಹರಪ್ಪನಹಳ್ಳಿ ತಾಲೂಕು ಅರಸೀಕರೆ ಹೋಬಳಿಯ ಶಿವಕುಮಾರ ಎಂಬವರು ಚಲಾಯಿಸುತ್ತಿದ್ದ ಇಕೋ ವಾಹನಕ್ಕೆ ಎದುರುಗಡೆಯಿಂದ ಬಂದ ಕಾರು ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲ ಬದಿಗೆ ಬಂದು ಡಿಕ್ಕಿ ಹೊಡೆದಿರುವುದಾಗಿದೆ.
ಇಕೋ ವಾಹನದಲ್ಲಿದ್ದ ಪ್ರಯಾಣಿಕರಾದ ಮಲ್ಲಮ್ಮ (92) ರವರಿಗೆ ತಲೆಗೆ ಮತ್ತು ಬಸಮ್ಮ (50) ರವರಿಗೆ ಬಲ ಕೋಲು ಕಾಲಿಗೆ ಗಾಯವಾಗಿದೆ. ವಾಹನದ ಬಲ ಬದಿಯ ಹಿಂಬದಿ ಸೀಟ್ನ ಡೋರ್ ಮತ್ತು ಟೈರ್ನ ಮೇಲ್ಭಾಗ ಜಖಂಗೊಂಡಿರುತ್ತದೆ.


ಕಾರಿನ ಚಕ್ರ ಒಡೆದು ಹೋಗಿದ್ದು ಬಲ ಬದಿ ಮುಂಭಾಗ ಜಖಂಗೊಂಡಿದೆ. ಕಾರು ಚಾಲಕ ಮಂಜುನಾಥ ಎಂಬವರ ಬಲ ಬದಿ ಕೆನ್ನೆಯಲ್ಲಿ ಗಾಯವಾಗಿರುತ್ತದೆ. ಈ ಬಗ್ಗೆ ಇಕೋ ವಾಹನ ಚಾಲಕ ಶಿವಕುಮಾರ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣಾ ಅ.ಕ್ರ: 68/2025. ಕಲಂ: 281, 125 (a) BNS-2023 ಐ.ಎಂ.ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
