
ಕುಕ್ಕೆ ಸುಬ್ರಹ್ಮಣ್ಯ: ಮದುವೆ ಕಾರ್ಯಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುತ್ತಿದ್ದ ವಾಹನವೊಂದು ಬಿಸಿಲೆ ಘಾಟಿಯ ಕೂಡು ರಸ್ತೆ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಹಲವರಿಗೆ ಗಂಭೀರ ಗಾಯವಾದ ಘಟನೆ ನಡೆದಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.


ವಾಹನ ಪಲ್ಟಿಯಾಗಿ ಸುಮಾರು 22 ಜನರಿಗೆ ಗಾಯವಾಗಿರುವುದಾಗಿ ತಿಳಿದು ಬಂದಿದ್ದು ನಾಲ್ವರಿಗೆ ಗಂಭೀರವಾಗಿದೆ. ಪ್ರಥಮ ಚಿಕಿತ್ಸೆಗಾಗಿ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಆರು ಅಂಬ್ಯೂಲೆನ್ಸ್ ಬಳಸಿ ಮಂಗಳೂರಿಗೆ ಕರೆದೊಯ್ಯಲಾಗಿದೆ.


ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯದಲ್ಲಿ ವನಗುರುವಿನ ಯುವಕ ಮತ್ತು ಏನೆಕಲ್ಲಿನ ವಧುವಿನೊಂದಿಗೆ ಇಂದು ಮದುವೆ ಕಾರ್ಯಕ್ರಮ ನಡೆಯುವ ಹಿನ್ನೆಲೆ ಮದುಮಗನ ಹುಡುಗನ ಕಡೆಯವರು ವಾಹನದಲ್ಲಿ ಬರುತ್ತಿದ್ದರು ಎನ್ನಲಾಗಿದೆ. ವಧು- ವರರೂ ಇಬ್ಬರೂ ನಿನ್ನೆಯೇ ಬಂದಿದ್ದರೆಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
