ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿ: ಹೈಕೋರ್ಟಿನಲ್ಲಿ ಇತ್ಯಾರ್ಥಕ್ಕೆ ಬಾಕಿ ಇರುವ ಹೊತ್ತಲ್ಲೇ ವಿವಾದಿತ ರಸ್ತೆ ದುರಸ್ತಿ

kadaba times

ಕಡಬ ಟೈಮ್ಸ್ , ಪಟ್ಟಣ ಸುದ್ದಿ: ವಿವಾದಿತ ರಸ್ತೆಯನ್ನು ದುರಸ್ತಿ ಮಾಡಲು ಮುಂದಾದ ಸಂದರ್ಭ ಆಕ್ಷೇಪಿಸಿ ಜಾಗದ ವಾರಿಸುದಾರರು ಠಾಣೆಗೆ ದೂರು ನೀಡಿದ ಘಟನೆ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದಿಂದ ವರದಿಯಾಗಿದೆ.

kadaba times
uniq

ಇಲ್ಲಿನ ಪಟ್ಟಣ ಪಂಚಾಯತ್ ಗೆ ಒಳಪಟ್ಟ  ಪುಳಿಕುಕ್ಕು-ಪಂಜಾಳ ಕಾಲು ದಾರಿಯನ್ನು  ಪುಳಿಕುಕ್ಕು ಅಣ್ಣು ನಾಯ್ಕ್ ಎಂಬವರಿಗೆ ಸೇರಿದ ಪಟ್ಟ ಜಾಗದ ಮೂಲಕ ಮುಖ್ಯ ರಸ್ತೆಯಂತೆ  ನಿರ್ಮಾಣ ಮಾಡಲಾಗಿತ್ತು ಎನ್ನಲಾಗಿದೆ . ಸುಳ್ಳು ದಾಖಲೆ ನೀಡಿ ರಸ್ತೆ ನಿರ್ಮಾಣ ಮಾಡಿದ ಆರೋಪದ  ಹಿನ್ನೆಲೆ ಸ್ಥಳೀಯರೊಬ್ಬರ ಮತ್ತು ಇತರರ ವಿರುದ್ದ  ಜಾಗದ ವಾರಿಸುದಾರರು ಹೈಕೋರ್ಟ್ ಕದ ತಟ್ಟಿದ್ದರು.

ಮಾನ್ಯ  ಹೈಕೋರ್ಟಿನಲ್ಲಿ  ಇತ್ಯಾರ್ಥಕ್ಕೆ ಬಾಕಿ ಇರುವ ಸಂದರ್ಭದಲ್ಲಿಯೇ  ಈ ವಿವಾದಿತ ರಸ್ತೆಯನ್ನು ರಸ್ತೆ ಸಂಪರ್ಕ ಅಗತ್ಯ ಇರುವ ಮನೆಯವರು ಸೆ.28 ರಂದು ಮರಳು, ಜಲ್ಲಿಕಲ್ಲು ತಂದು ದುರಸ್ತಿಗೆ ಮುಂದಾಗಿರುವುದಾಗಿದೆ.  ಈ ವಿಚಾರವನ್ನು ಪಟ್ಟಣ ಪಂಚಾಯತ್ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಜೊತೆಗೆ ವಿವಾದಿತ ರಸ್ತೆಯಾದ ಕಾರಣ ಪೊಲೀಸರಿಗೂ ಮಾಹಿತಿ ನೀಡಲಾಗಿದೆ.

kadaba times
kadaba times

ಮುಂದುವರಿದ ಭಾಗವಾಗಿ ಕೆಲಸ ಸ್ಥಗಿತಗೊಳಿಸಲು ಸೂಚಿಸುವಂತೆ ಹಾಗೂ ಕಾನೂನು ಕ್ರಮ ಕೈಗೊಳ್ಳುವಂತೆ  ಕಡಬ ಪೊಲೀಸರಿಗೆ ಕರುಣಾಕರ ನಾಯ್ಕ್ ಎಂಬವರು ದೂರು ನೀಡಿರುವುದಾಗಿ ತಿಳಿದು ಬಂದಿದೆ. ಪೊಲೀಸರು ದೂರು ಸ್ವೀಕರಿಸಿದ್ದು  ಈಗಾಗಲೇ ಮಾನ್ಯ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವ ಕಾರಣ  ಅಲ್ಲೇ ಇತಾರ್ಥಪಡಿಸಿಕೊಳ್ಳುವಂತೆ ಕಡಬ ಪೊಲೀಸರು ಹಿಂಬರಹ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

Related Articles

Latest Articles