ಕಡಬ: ಆ ಒಂದು ಸುದ್ದಿ ತಿಳಿದು ಠಾಣೆಯತ್ತ ಬಂದ ಜನರು:ಏನಿದು ಘಟನೆ?

kadaba times

ಕಡಬ: ಕಾಲೇಜೊಂದರ ಅತಿಥಿ ಉಪನ್ಯಾಸಕ ಸಹಿತ ಆಟೋ ಚಾಲಕ ವಿದ್ಯಾರ್ಥಿನಿಯರ ಜೊತಗಿದ್ದರೆಂಬ ಸುದ್ದಿಯ ಮೇರೆಗೆ  ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದ  ಘಟನೆ ಸೆ .24 ರ ಸಂಜೆ ಕಡಬದಲ್ಲಿ ನಡೆದಿದೆ.

kadaba times
uniq

ವಿದ್ಯಾರ್ಥಿನಿ ಪೋಷಕರ ಕೋರಿಕೆಯ ಮೇರೆಗೆ  ಕಾಲೇಜೊಂದರ ವಿದ್ಯಾರ್ಥಿನಿಯ ಜೊತೆ ಆಟೋದಲ್ಲಿ ಉಪನ್ಯಾಸಕರೊಬ್ಬರು ತೆರಳಿದ್ದರು.  ಮತ್ತೊರ್ವ ವಿದ್ಯಾರ್ಥಿನಿಯೂ ಜೊತೆಗೆ ಇದ್ದ ವಿಚಾರ  ಚರ್ಚೆಯಾಗಿತ್ತು. ಹೀಗಾಗಿ ಮಾಹಿತಿ ಪಡೆದು   ಠಾಣೆಗೆ ಕರೆದೊಯ್ದಿರುವುದಾಗಿ ಹೇಳಲಾಗಿದೆ.

ಈ ಘಟನೆ ಹಲವು ಆಯಾಮಗಳಲ್ಲಿ ಚರ್ಚೆಯಾಗುತ್ತಿದ್ದಂತೆ ಇತ್ತ   ಠಾಣೆ ಮುಂಭಾಗ ಹಿಂದೂ ಪರ ಸಂಘಟನೆಯ ಹಲವರು ಸಹಿತ ಅನೇಕರು ಜಮಾಹಿಸಿದ್ದರು . ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಯಾಗಿತ್ತು.

ಮಾಹಿತಿ ಪ್ರಕಾರ ಕಾರ್ಯಕ್ರವೊಂದರ ನಿಮಿತ್ತ ತೆರಳಿದ್ದವರು ಪೊಷಕರ ಕೋರಿಕೆಯಂತೆ ಮನೆಯೊಂದಕ್ಕೆ ಬಂದಿದ್ದರು ಎನ್ನಲಾಗಿದೆ.  ಸದ್ಯ ತೀವ್ರ ಚರ್ಚೆಯ ನಡುವೆ  ಪೊಲೀಸರು ವಿಚಾರಣೆ ಮಾಡಿದ್ದು ಮಾತುಕತೆ ಈ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ  .

kadaba times
kadaba times

ಘಟನೆಯ ಬಗ್ಗೆ  ಪೊಲೀಸ್ ವರಿಷ್ಠಾಧಿಕಾರಿಗಳ ಸ್ಪಷ್ಟನೆ: ಕಾಲೇಜೊಂದರ ಕಾರ್ಯಕ್ರಮ ಮುಗಿಸಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಅವರುಗಳ ಮನೆಗೆ ಹಿಂತಿರುಗುತ್ತಿದ್ದಾಗ, ವಿಧ್ಯಾರ್ಥಿನಿಯೊಬ್ಬಳ ಪೋಷಕರ ಅಹ್ವಾನದ ಮೇರೆಗೆ ಅಧ್ಯಾಪಕರು ಸದ್ರಿ ವಿಧ್ಯಾರ್ಥಿನಿ ಹಾಗೂ ಆಕೆಯ ಸಹಪಾಠಿ ವಿಧ್ಯಾರ್ಥಿನಿಯ ಜೊತೆಯಾಗಿ ಕಡಬ ಪೇಟೆಯಿಂದ ರಿಕ್ಷಾದಲ್ಲಿ, ವಿಧ್ಯಾರ್ಥಿನಿಯ ಮನೆಗೆ ಬೇಟಿ ನೀಡಿರುತ್ತಾರೆ.

ಆ ವೇಳೆ ಮನೆಯಲ್ಲಿ ವಿಧ್ಯಾರ್ಥಿನಿಯ ಪೋಷಕರು ಮನೆಯಲ್ಲಿದ್ದು, ಈ ವೇಳೆ ಸ್ಥಳೀಯ ಕೆಲವರು ತಪ್ಪಾಗಿ ತಿಳಿದುಕೊಂಡು ಸಂಶಯಗೊಂಡು ಠಾಣೆಗೆ ಮಾಹಿತಿ ನೀಡಿರುತ್ತಾರೆ. ಅಧ್ಯಾಪಕರನ್ನು, ವಿದ್ಯಾರ್ಥಿನಿಯ ಮನೆಯವರನ್ನು, ಆಟೋ ಚಾಲಕನನ್ನು ವಿಚಾರಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿದ್ದಾರೆ.

 

Related Articles

Latest Articles