
ಕಡಬ: ಬಸ್ಸೊಂದು ನಿಯಂತ್ರಣ ಕಳೆದುಕೊಂಡು ಚರಂಡಿಗೆ ಇಳಿದ ಘಟನೆ ಕಡಬ ಸಮೀಪದ ಕಾಯರಡ್ಕ ಎಂಬಲ್ಲಿ ಸೆ.24 ರ ರಾತ್ರಿ ನಡೆದಿದೆ.


ಮಂಗಳೂರುನಿಂದ ಕಡಬ ಮಾರ್ಗವಾಗಿ ಕಲ್ಲುಗುಡ್ಡೆಗೆ ತೆರಳುತ್ತಿದ್ದ ಬಸ್ ಚರಂಡಿಗಿಳಿದಿದೆ. ಈ ಘಟನೆಯುಂದ ಪ್ರಯಾಣಿಕರು ಪಾಯದಿಂದ ಪಾರಾಗಿದ್ದಾರೆ. ಬಸ್ ಡಿಕ್ಕಿಯಾಗಿ ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ.
ಪೇರಡ್ಕದಿಂದ ಕಡಬಕ್ಕೆ ಹೋಗುವ ರಸ್ತೆಯಲ್ಲಿ ಮಣ್ಣು ಸಾಗಿಸಿದ ಕಾರಣ ಟಿಪ್ಪರ್ ಗಾಡಿಯಿಂದ ಹೊರಗೆ ಬಿದ್ದ ಮಣ್ಣು ರಸ್ತೆಯಲ್ಲಿ ತುಂಬಿಕೊಂಡಿದ್ದು ಹೀಗಾಗಿಯೇ ಬಸ್ ನಿಯಂತ್ರಣ ಕಳೆದುಕೊಳ್ಳಲು ಕಾರಣವಾಗಿದೆ ಎಂದು ಹೇಳಲಾಗಿದೆ.


ವಿದ್ಯುತ್ ಕಂಬಕ್ಕೆ ಹಾನಿಯಾಗಿರುವುದರಿಂದ ಆ ಭಾಗದಲ್ಲಿ ವಿದ್ಯುತ್ ನಲ್ಲಿ ವ್ಯತ್ಯಯ ಉಂಟಾಗಿದೆ.ಇತರ ವಾಹನಗಳು ರಸ್ತೆಯಲ್ಲಿ ಸಂಚರಿಸಲು ತೊಂದರೆಯಾಗುತ್ತಿದೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ.
