ಕಡಬ : ಸಿವಿಲ್ ಇಂಜಿನಿಯರಿಂಗ್ ಓದಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಐತ್ತೂರಿನ ಯುವಕ ದಿಢೀರ್ ಆತ್ಮಹತ್ಯೆಗೆ ಶರಣು

kadaba times

ಕಡಬ: ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿ  ಸಂಬಳ ಸಾಕಾಗುವುದಿಲ್ಲವೆಂದು ಕೆಲಸ ತೊರೆದು ಮನೆಯಲ್ಲಿಯೇ ಕೃಷಿಚಟುವಟಿಕೆ ಮಾಡಿಕೊಂಡಿದ್ದ ಯುವಕನೋರ್ವ ದಿಢೀರ್  ಆತ್ಮಹತ್ಯೆಗೆ ಶರಣಾದ ಘಟನೆ ತಡವಾಗಿ ವರದಿಯಾಗಿದೆ.

kadaba times
uniq
ಮೃತ ಯುವಕ ಸುಜಯ್ (Kadaba times)


ಐತ್ತೂರು ಗ್ರಾಮದ ಕೇರ್ಪಡ ನಿವಾಸಿ ನಾರ್ಣಪ್ಪ ಗೌಡ ಎಂಬವರ ಪುತ್ರ  ಸುಜಯ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಮಗನ ಸಾವಿನ ಸುದ್ದಿಯಿಂದ ಹೆತ್ತವರು ಹಾಗೂ ಕುಟುಂಬಸ್ಥರು ದುಖ: ಸಾಗಾರದಲ್ಲಿ ಮುಳುಗಿದ್ದಾರೆ.    ಬಿಇ ಸಿವಿಲ್ ಇಂಜಿನಿಯರಿಂಗ್  ಓದಿದ್ದ ಈ ಯುವಕ2020 ರಲ್ಲಿ ಬೆಂಗಳೂರು ಮತ್ತು ಹಾಸನದಲ್ಲಿ ಖಾಸಗಿ ಕಂಪೆನಿಗಳಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲ   ಕೆಲಸ ಮಾಡಿದ್ದ. ಬಳಿಕ ಸಂಬಳ ಕಡಿಮೆಯಿಂದು ಕೆಲಸ ಬಿಟ್ಟು ಊರಿನಲ್ಲಿ ಕೃಷಿ ಮತ್ತು ಗ್ರಾ.ಪಂ ವ್ಯಾಪಿಯಲ್ಲಿ  ಗುತ್ತಿಗೆ ಪಡೆದುಕೊಂಡು  ಕೆಲಸ ಮಾಡುತ್ತಿದ್ದ .

 

kadaba times
kadaba times

ಸೆ.6 ರ ರಾತ್ರಿ ವೇಳೆ  ಮನೆ  ಹಿಂದುಗಡೆ ಇರುವ ಹಳೆಯ ಮನೆಯ ಛಾವನಿಗೆ ಅಡ್ಡಲಾಗಿ ಹಾಕಲಾಗಿದ್ದ ಬಿದಿರಿನ ದಿಮ್ಮಿಗೆ ನೇಣು ಬಿಗಿದುಕೊಂಡು ಆತ್ಯಹತ್ಯೆ  ಮಾಡಿಕೊಂಡಿದ್ದು  ಕಡಬ ಸರಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮುಖಾಂತರ ಕರೆದುಕೊಂಡು
ಬಂದ ವೇಳೆ  ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂದು ಮೃತ ಯುವಕನ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ . ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ ನಂಬ್ರ: 23/2025 ಕಲಂ:194 BNSS-2023.ಯಂತೆ ಪ್ರಕರಣ ದಾಖಲಾಗಿದೆ.

ಆನ್ ಲೈನ್ ಬೆಟ್ಟಿಂಗ್ ಗೆ ಜೀವ ಬಲಿಯಾಯಿತೆ? :  ಈ ಯುವಕನ ದಿಢೀರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಆನ್ಲೈನ್ ಬೆಟ್ಟಿಂಗ್ ದಂಧೆಗೆ ಬಲಿಯಾಗಿರಬಹುದೆಂಬ ಸಂಶಯ ಬಹುತೇಕರನ್ನು  ಕಾಡತೊಡಗಿದೆ. ಮೃತ ಯುವಕನ ಆಪ್ತ ವಲಯದಲ್ಲಿ ಈ ಬಗ್ಗೆ  ಚರ್ಚೆಯಾಗಿದೆ ಎಂದು ತಿಳಿದು ಬಂದಿದೆ.  ಉನ್ನತ ಪೊಲೀಸ್ ಅಧಿಕಾರಿಗಳು ಮೃತ  ಯುವಕನ ಮೊಬೈಲ್ ಪರಿಶೀಲನೆ ಮಾಡುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ. ಈ ಸಂಶಯದ ಮೇರೆಗೆ ಪೋಲಿಸರು ಯುವಕನ ಸ್ನೇಹಿತರಿಂದಲೂ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

ಪೊಲೀಸರಿಂದ ಎಚ್ಚರಿಕೆ:   ಪೊಲೀಸ್ ಇಲಾಖೆ ಈಗಾಗಲೇ ಅನ್ನ್ಲೈನ್  ಸೇರಿದಂತೆ ಇತರ ಮಾರ್ಗಗಳ ಮೂಲಕ ಹಣ ಕಳೆದುಕೊಳ್ಳದಂತೆ ಆಗಾಗ ಎಚ್ಚರಿಕೆನೀಡುತ್ತಿದ್ದಾರೆ.  ಬೆಟ್ಟಿಂಗ್ ಸೇರಿದಂತೆ ವಿವಿಧ ಆಯಾಮಗಳಲ್ಲಿ ಜನರು ಹಣ ಕಳೆದುಕೊಂಡು ಪ್ರಾಣ ಕಳೆದುಕೊಳ್ಳುತ್ತಿರುವುದು ಅಲ್ಲಲ್ಲಿ ಸುದ್ದಿಯಾಗುತ್ತಿದೆ. ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕಿದೆ.

Related Articles

Latest Articles