ಕಡಬಕ್ಕೂ ಪಾದಾರ್ಪಣೆ ಮಾಡಿದ ಅಂಕಲ್ ಸ್ವೀಟ್ಸ್

ಕಡಬ ಅಂಚೆ ಕಚೇರಿ ಬಳಿ ಐದನೇ ಶಾಖೆ ತೆರೆದ ಅಂಕಲ್ ಸ್ವೀಟ್ಸ್ ಸಂಸ್ಥೆಯ ಮಾಲಕ ಕುಶಾಲಪ್ಪ ಗೌಡ ಕಾರ್ಲಾಡಿ

kadaba times

ಕಡಬ: ಪುತ್ತೂರಿನಲ್ಲಿ ಮನೆ ಮಾತಾಗಿರುವ ಅಂಕಲ್ ಸ್ವೀಟ್ಸ್ ಕಡಬ ತಾಲೂಕಿಗೂ ಪಾದಾರ್ಪಣೆ ಮಾಡಿದೆ. ಐದನೇ ಶಾಖೆಯು ಇದೀಗ  ಕಡಬ ಅಂಚೆ ಕಚೇರಿ ಬಳಿ ಸೆ. 25ರಂದು ಅದ್ದೂರಿಯಾಗಿ ಶುಭಾರಂಭಗೊಂಡಿದೆ. ಹಲವಾರು ವರ್ಷಗಳಿಂದ ವ್ಯಾಪಾರ ನಡೆಸಿಕೊಂಡು ಬಂದಿರುವ ಕುಶಾಲಪ್ಪ ಗೌಡರು ಜನತೆಯ ಪ್ರೀತಿ ವಿಶ್ವಾಸವನ್ನು ಗಳಿಸಿದ್ದಾರೆ.  ನೂತನವಾಗಿ ಶುಭಾರಂಭಗೊಂಡಿರುವ ಸಂಸ್ಥೆಯು ಪರಿಸರದ ಎಲ್ಲಾ ಜನತೆಗೆ ಉತ್ತಮ ಸೇವೆ ನೀಡುವುದರ ಮೂಲಕ ಕಡಬದ ಜನತೆಯ ಪ್ರೀತಿ, ವಿಶ್ವಾಸ ಗಳಿಸಲಿದೆ.

kadaba times
uniq

ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ  ಮಾನತಾಡಿ, ಆಧುನಿಕತೆಯ ಜೀವನ ಶೈಲಿಯಲ್ಲಿ ಹೊಸ ಹೊಸ ಆಹಾರ ಉತ್ಪನ್ನ, ತಿಂಡಿಗಳನ್ನು ಜನತೆ ಬಯಸುತ್ತಿರುವ ಸನ್ನಿವೇಶದಲ್ಲಿ ಅಂತಹ ಹೊಸತನದ ತಿಂಡಿಗಳ ಜೊತೆಗೆ ವಿವಿಧ ಉತ್ಪನ್ನಗಳು ಒಂದೇ ಮಳಿಗೆಯಲ್ಲಿ ಸಿಗುವಂತಹ ವ್ಯವಸ್ಥೆ ಅಂಕಲ್ ಸ್ಟ್ರೀಟ್ಸ್ ಮಳಿಗೆಯಲ್ಲಿ ಆಗುತ್ತಿದೆ ಎಂದರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಹಲವಾರು ವರ್ಷಗಳಿಂದ ಗುಣಮಟ್ಟದ ಬೇಕರಿ ಉತ್ಪನ್ನಗಳನ್ನು ಉತ್ಪಾದಿಸಿ ಗ್ರಾಹಕರ ಪ್ರೀತಿ ವಿಶ್ವಾಸದ ಜತೆಗೆ ಪಾರದರ್ಶಕ ವ್ಯವಹಾರವನ್ನು ಮಾಡಿರುವ “ಕಾರಣಕ್ಕಾಗಿಯೇ ಅಂಕಲ್ ಸ್ವೀಟ್ಸ್ ಇದೀಗ 5ನೇ ಮಳಿಗೆ ತೆರೆಯಲು ಸಾಧ್ಯವಾಗಿದೆ.  ಕುಶಾಲಪ್ಪ ಗೌಡರು ಸಾಮಾನ್ಯ ವ್ಯಕ್ತಿಯಾಗಿ ಆರಂಭ ಮಾಡಿರುವ ಅಂಕಲ್ ಸ್ಪೀಟ್ಸ್ ಮಳಿಗೆ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದೆ ಎಂದರು.

ಜಿ.ಪಂ, ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ, ಕಡಬ ತಾಲೂಕು ಆದ ಬಳಿಕ ಬೇರೆ ಬೇರೆ ಪ್ರದೇಶದಿಂದ ಉದ್ಯಮಿಗಳು ಬಂದು ವ್ಯವಹಾರಗಳನ್ನು ಆರಂಭಿಸಿ ಯಶಸ್ಸನ್ನು ಕಂಡಿದ್ದಾರೆ. ಪುತ್ತೂರಿನಲ್ಲಿ ಅಂಕಲ್ ಸ್ವೀಟ್ಸ್ ಮಳಿಗೆ ಆರಂಭಿಸಿ ಯಶಸ್ಸನ್ನು ಕಂಡಂತಹ ಕುಶಾಲಪ್ಪ ಗೌಡರು ಕಡಬದಲ್ಲಿ ನೂತನವಾಗಿ ಆರಂಭಿಸಿರುವ ಅಂಕಲ್ ಸ್ವೀಟ್ಸ್ಗೆ ಗ್ರಾಹಕರ -ಪ್ರೋತ್ಸಾಹ ನಿರಂತರವಾಗಿರಲಿ ಎಂದು ಶುಭಹಾರೈಸಿದರು.

ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ ಮಾತನಾಡಿ, ತಮ್ಮ ಸ್ವಂತ ಸೂರಿನಡಿಯಲ್ಲಿ 5ನೇ ಮಳಿಗೆಯಾಗಿ ನವರಾತ್ರಿ ಜಪರ್ವದಲ್ಲಿ ನೂತನವಾಗಿ ಆರಂಭಗೊಂಡಿರುವ ಅಂಕಲ್ ಸ್ವೀಟ್ಸ್ ಗ್ರಾಹಕರಿಗೆ ಉತ್ತಮ ಸೇವೆಯನು ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯಲಿ ಎಂದರು.

ಗ್ರಾಹಕ ಬಂಧುಗಳ ಪ್ರೋತ್ಸಾಹದಿಂದ ಸಂಸ್ಥೆ ಬೆಳವಣಿಗೆ ಕಂಡಿದೆ- ಅಂಕಲ್ ಸ್ಟ್ರೀಟ್ಸ್ ಮಳಿಗೆಯ ಮಾಲಕ: ಅಂಕಲ್ ಸ್ಟ್ರೀಟ್ಸ್ ಮಳಿಗೆಯ ಮಾಲಕ ಕುಶಾಲಪ್ಪ ಗೌಡ ಕಾರ್ಲಾಡಿ ಅವರು ಮಾತನಾಡಿ, 1996ರಲ್ಲಿ ಪ್ರಾರಂಭಗೊಂಡಿರುವ ಅಂಕಲ್ ಸ್ವೀಟ್ಸ್ ಸಂಸ್ಥೆಯು ಪುತ್ತೂರಿನ ದರ್ಬೆ, ಬೊಳುವಾರು, ಕಾಣಿಯೂರು, ಆಲಂಕಾರುವಿನಲ್ಲಿ ತನ್ನ ಶಾಖೆಗಳನ್ನು ಹೊಂದಿ, ದೇವರ ಅನುಗ್ರಹ ದಿಂದ ಇದೀಗ ಕಡಬದಲ್ಲಿ 5ನೇ ಶಾಖೆಯನ್ನು ಆರಂಭಿಸಲಾಗಿದೆ. ಗ್ರಾಹಕರ ನಿರಂತರ ಪ್ರೋತ್ಸಾಹದಿಂದ ಮಳಿಗೆಯು ಬೆಳವಣಿಗೆ ಕಾಣಲು ಸಾಧ್ಯವಾಗಿದೆ. ಮುಂದೆಯೂ ಸಂಸ್ಥೆಯ ಬೆಳವಣಿಗೆಯಲ್ಲಿ ಗ್ರಾಹಕರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

kadaba times
kadaba times

ಮಾಜಿ ಜಿಲ್ಲಾ ಪರಿಷತ್ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ, ನೂತನವಾಗಿ ಆರಂಭಗೊಂಡಿರುವ ಅಂಕಲ್ ಸ್ವೀಟ್ಸ್ ಮಳಿಗೆಯು ಹೆಚ್ಚೆಚ್ಚು ಮಳಿಗೆಯನ್ನು ಆರಂಭಿಸಿ ಯಶಸ್ಸಿನ ಉದ್ಯಮ ನಡೆಸಲಿ ಎಂದರು. ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಐಬಿನ್, ಉಪಾಧ್ಯಕ್ಷೆ ನೀಲಾವತಿ ಶಿವರಾಮ್ ನೂತನ ಮಳಿಗೆಗೆ ಶುಭ ಹಾರೈಸಿದರು.

ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಕಲ್ಕುರೆ, ನಿರ್ದೇಶಕ ರಘುಚಂದ್ರ ಕೊಣಾಜೆ, ಕಡಬ ಒಕ್ಕಲಿಗ ಗೌಡ ಸಮಾಜದ ಅಧ್ಯಕ್ಷ ಸುರೇಶ್ ಬೈಲು, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಗೌಡ ಪಜ್ಜಡ್ಕ, ಕಡಬ ಪಟ್ಟಣ ಪಂಚಾಯತ್ ಸದಸ್ಯರಾದ ದಯಾನಂದ ಗೌಡ ಪೊಯ್ಯತಡ್ಕ, ಅಕ್ಷತಾ ಬಾಲಕೃಷ್ಣ, ಕೆ.ಎಂ.ಹನೀಫ್, ಯೂಟ್ಯೂಬರ್ ಮೊಹಮ್ಮದ್ ಸಿನಾನ್ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಪುತ್ತಿಲ ಪರಿವಾರದ ಪ್ರಮುಖರಾದ ರೂಪೇಶ್, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಸಿಇಒ ಆಶೋಕ್ ಗೌಡ, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾನ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಚೆನ್ನಪ್ಪ ಗೌಡ ನೂಜಿ, ಉದಯ ರೈ ಮಾದೋಡಿ, ಕಡಬ ತಾಲೂಕು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಖಲಂದರ್, ಉಪಾಧ್ಯಕ್ಷ ಧರ್ಣಪ್ಪ ಗೌಡ ಆಂಬುಲ, ಬೆಳಂದೂರು ಗ್ರಾ.ಪಂ. ಉಪಾಧ್ಯಕ್ಷ ಜಯಂತ ಅಭೀರ, ಕಡಬ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನ್ಯಾಕ್ ಮೇಲಿನಮನೆ, ವಿಶ್ವಹಿಂದೂ ಪರಿಷತ್ ಕಡಬ ಪ್ರಖಂಡ ಅಧ್ಯಕ್ಷ ಶಿವರಾಮ ಶೆಟ್ಟಿ ಕೇಪು, ನಿವೃತ್ತ ಶಿಕ್ಷಕ ಸಾಂತಪ್ಪ ಗೌಡ ಪಿಜಕಳ, ಜೆ.ಎಂ ಗ್ಲಾಸ್ ಮತ್ತು ಫೈವುಡ್ ಇದರ ಎನ್.ಜೆ ಸಂತೋಷ್, ವಿಶ್ವನಾಥ ಅಂಬುಲ, ದಾಮೋದರ ಗೌಡ ಅಂಬುಲ, ಕುಶಾಲಪ್ಪ ಗೌಡ ಅಂಬುಲ, ಸತೀಶ್ ಅಂಬುಲ, ದಿಲೀಪ್ ಆಂಬುಲ, ಧರ್ಮಪಾಲ ಆಂಬುಲ, ಲಿಂಗಪ್ಪ ಗೌಡ ಕಾರ್ಲಾಡಿ, ಬಾಲಣ್ಣ ಗೌಡ ಕಾರ್ಲಾಡಿ, ಶಿವರಾಮ ಗೌಡ ಕಾರ್ಲಾಡಿ, ವಸಂತ ಕಾರ್ಲಾಡಿ, ಉಮೇಶ್ ಕಾರ್ಲಾಡಿ, ಧರ್ಮರಾಜ್ ಕಾರ್ಲಾಡಿ, ಗೋಪಾಲಕೃಷ್ಣ ಕಾರ್ಲಾಡಿ ಸೇರಿದಂತೆ ಹಲವಾರು ಮಂದಿ ನೂತನ ಸಂಸ್ಥೆಗೆ ಭೇಟಿ ನೀಡಿ ಶುಭಹಾರೈಸಿದರು.

ಅಂಕಲ್ ಸ್ವೀಟ್ಸ್ ಸಂಸ್ಥೆಯ ಮಾಲಕರಾದ ಕುಶಾಲಪ್ಪ ಗೌಡ ಕಾರ್ಲಾಡಿ, ಪ್ರೇಮಾ ಕುಶಾಲಪ್ಪ ಕಾರ್ಲಾಡಿ, ಅನುಜ್ಞಾ ಕಾರ್ಲಾಡಿ, ಅನ್ವಯ್ ಕಾರ್ಲಾಡಿ, ಅಪೇಕ್ಷಾ ಕಾರ್ಲಾಡಿ ಅತಿಥಿಗಳನ್ನು ಸ್ವಾಗತಿಸಿ ಬರಮಾಡಿಕೊಂಡರು. ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related Articles

Latest Articles