ವೈರಲ್ ಸುದ್ದಿ: ಬೀದಿ ನಾಯಿಯ ಮೇಲೆ ಹೀಗೊಂದು ಮೊಬೈಲ್ ನಂಬರ್!

kadaba times

ಉಪ್ಪಿನಂಗಡಿ: ಎಲ್ಲೆಡೆ  ಬೀದಿ ನಾಯಿಗಳ ಹಾವಳಿ ಇತ್ತೀಚೆ ಹೆಚ್ಚಾಗಿದೆ.ಇದೀಗ  ಉಪ್ಪಿನಂಗಡಿಯಲ್ಲಿಯೂ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ನಾಯಿ ದಾಳಿಯ ಭೀತಿಯ ನಡುವೆ ಬೀದಿ ನಾಯಿ ಮೇಲೆ ಮೊಬೈಲ್ ನಂಬರ್ ಬರೆದು ವೈರಲ್ ಗೊಳಿಸಲಾಗಿದೆ.

kadaba times
uniq

ಉಪ್ಪಿನಂಗಡಿ  ಬಸ್ ನಿಲ್ದಾಣದಲ್ಲಿ ನಿತ್ಯವೂ  ಬೀದಿ ನಾಯಿಗಳ ಹಿಂಡು ಕಾಣಿಸುತ್ತಿದ್ದು, ಯಾವ ಸಮಯದಲ್ಲಿ ದಾಳಿ ನಡೆಸುವುದೋ ಎಂಬ ಭೀತಿಯಿಂದ ಜನ ಸಂಚರಿಸುತ್ತಿದ್ದಾರೆ.  ಈ ಭೀತಿಯ ನಡುವೆ ನಾಯಿಯ ಮೇಲೊಂದು ಸಂಖ್ಯೆ , ಮತ್ತಿತರ ಚಿತ್ತಾರಗಳು ಬರೆಯಲ್ಪಟ್ಟು ಗಮನ ಸೆಳೆದಿದೆ.

ನಾಯಿಯ ಕಣ್ಣಿನ ಹುಬ್ಬುಗಳಿಗೆ ಕಾಡಿಗೆ ಹಚ್ಚಲಗಿದೆ.  ನಾಯಿಯ ಮೇಲೆ ಮನಸೋ ಇಚ್ಚೆ ಪೆನ್ನಿನಿಂದ ಗೀಚಲಪಟ್ಟಂತಿದೆ.ಸ್ಥಳೀಯಾಡಳಿತಕ್ಕೆ ಎಚ್ಚರಿಕೆಯೋ ಅಥವಾ ಕ್ರಮ ಕೈಗೊಳ್ಳಬೇಕೆಂಬ ಜಾಗೃತಿಯೋ ಅಂತು ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದೆ.

kadaba times
kadaba times

 

Related Articles

Latest Articles