ಮದ್ದೂರು ಗಣೇಶೋತ್ಸವದಲ್ಲಿ ಕಲ್ಲು ತೂರಾಟ ವಿಚಾರ: ಕಡಬದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ

kadaba times

ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣೆಗೆ ಮೇಲೆ ಕಲ್ಲು  ತೂರಾಟ
ಮಾಡಿ ಗಲಬೆ ಸೃಷ್ಠಿಸಿದ ಘಟನೆಯನ್ನು ಖಂಡಿಸಿ ಕಡಬ ಪ್ರಖಂಡ ವಿಶ್ವ ಹಿಂದೂ ಪರಿಷತ್ ವತಿಯಿಂದ ಬುಧವಾರ ಕಡಬ ಪೇಟೆಯ ಮುಖ್ಯ ರಸ್ತೆಯ ಪಂಜ ಕ್ರಾಸ್ ಬಳಿ ಪ್ರತಿಭಟನೆ ನಡೆಯಿತು.

kadaba times
uniq


ಆರ್ ಎಸ್.ಎಸ್ ಹಿರಿಯ ಮುಖಂಡ ಡಾ.ಸುರೇಶ್ ಕುಮಾರ್
ಮಾತನಾಡಿ, ಮದ್ದೂರಿನಲ್ಲಿ ಹಿಂದೂ ವಿರೋಧಿ ಮತಾಂದ ಪುಂಡರು ನಮ್ಮ ಶ್ರದ್ಧೆಯ ಗಣೇಶೋತ್ಸವ ಮೆರವಣಿಗೆಗೆ ವ್ಯವಸ್ಥಿತ ಸಂಚು ನಡೆಸಿ ಕಲ್ಲೂ ತೂರಾಟ ಮಾಡಿದ್ದಾರೆ. ಹಿಂದೂ ಧರ್ಮ, ಸಂಸ್ಕೃತಿಯ ಮೇಲೆ ನಿರಂತರ   ದಾಳಿ
ನಡೆಯತ್ತಲೇ ಇದೆ, ಹಿಂದೂ ವಿರೋಧಿಗಳ ಅಟ್ಟಹಾಸ ಮಿತಿ ಮೀರುತ್ತಿದೆ,  ಈಗ
ಮಲಗಿದ್ದ ಹಿಂದೂಗಳನ್ನು ಬಡಿದೆಬ್ಬಿಸಲಾಗುತ್ತಿದೆ.   ಮದ್ದೂರು  ಘಟನೆ
ಒಂದು ಉದಾಹರಣೆ ಮಾತ್ರ ದೇಶದ ಎಲ್ಲೆಡೆ ಇಂತಹ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.


ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಲಾಸ್ತ್ಯ ರೈ ಮಾತನಾಡಿ,  ಹಿಂದೂ
ಸಮಾಜ ಯಾವತ್ತೂ ಅನ್ಯ ಧರ್ಮಿಯರ ಆಚರಣೆಯ ಮೇಲೆ ದಾಳಿ ಮಾಡಿದ ಉದಾಹರಣೆ ಇಲ್ಲ.  ಹಿಂದೂಗಳ
ಮೆಲಿನ ದಬ್ಬಾಳಿಕೆಯ ಬಗ್ಗೆ ಸಿಎಂ ಯಾಕೆ ಮಾತಾಡುತ್ತಿಲ್ಲ ಎಂದರು.


kadaba times
kadaba times

ಪ್ರತಿಭಟನೆ ಬಳಿಕ ತಹಶೀಲ್ದಾರ್ ವರಿಗೆ ಮನವಿ
ಸಲ್ಲಿಸಲಾಯಿತು.  ಕಡಬ ಪ್ರಖoಡ ವಿಶ್ವಹಿಂದು ಪರಿಷತ್
ಅಧ್ಯಕ್ಷ ಕೇಪು ಶಿವರಾಮ ಶೆಟ್ಟಿ ಸೇರಿದಂತೆ ಹಿಂದೂಪರ ಸಂಘಟನೆಯ ಪ್ರಮುಖರು
ಹಾಜರಿದ್ದರು.



Related Articles

Latest Articles