ತಾಯಿ ಮನೆಗೆ ಹೋಗಿ ಮರುದಿನ ಬರುವುದಾಗಿ ಮನೆಯಿಂದ ಹೋದ ಶಿರಾಡಿಯ ಮಹಿಳೆ ಮೃತಪಟ್ಟ ರೀತಿಯಲ್ಲಿ ಪತ್ತೆ

kadaba times

ನೆಲ್ಯಾಡಿ:ತಾಯಿ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯೊಂದ
ಹೋಗಿದ್ದ ಮಹಿಳೆಯೊಬ್ಬರು ಮೃತಪಟ್ಟ ರೀತಿಯಲ್ಲಿ ಪತ್ತೆಯಾದ ಘಟನೆ ಶಿರಾಡಿ ಗ್ರಾಮದಲ್ಲಿ ನಡೆದಿದೆ.

kadaba times
uniq


 ಕಡಬ
ತಾಲೂಕಿನ ಶಿರಾಡಿ ಗ್ರಾಮದ ಸಂಪ್ಯಾಡಿ ನಿವಾಸಿ ಕೆ.ಪ್ರಕಾಶ ಎಂಬವರ
ಪತ್ನಿ ಓಮನ(53ವ.) ಮೃತಪಟ್ಟ ಮಹಿಳೆ


ತಾಯಿ ಮನೆಗೆ ಹೋಗಿ ಮರುದಿನ ಬರುವುದಾಗಿ ತಿಳಿಸಿ ಸೆ.7ರಂದು ಮನೆಯಿಂದ ಹೋಗಿದ್ದರು. ಸೆ.8ರಂದು ಸಂಜೆಯಾದರೂ  ಮನೆಗೆ
ವಾಪಾಸು ಬಾರದೇ ಇದ್ದ ಕಾರಣ ಮೃತ  ಮಹಿಳೆಯ ತಾಯಿ
ಮನೆಗೆ ಫೋನ್ ಮಾಡಿ ವಿಚಾರಿಸಿದಾಗ, ಅಲ್ಲಿಗೆ ಬಂದಿರುವುದಿಲ್ಲ ಎಂದು ತಿಳಿಸಿದ್ದರು.

kadaba times
kadaba times

 

ಈ
ಹಿನ್ನೆಲೆಯಲ್ಲಿ ಮನೆಮಂದಿ ಮತ್ತು
 ನೆರೆಕರೆಯವರು
ಹುಡುಕಾಡಿದಾಗ  ಹಳೆ
ಮನೆಯಲ್ಲಿ ಬಿದ್ದುಕೊಂಡ ರೀತಿಯಲ್ಲಿ ಪತ್ತೆಯಾಗಿರುವುದು
ಕಂಡು ಬಂದಿದೆ. 
ಸೆ.7ರ ಬೆಳಿಗ್ಗೆ 10 ಗಂಟೆಯಿಂದ
ಸೆ.8ರ ರಾತ್ರಿ 10 ಗಂಟೆಯ
ಮಧ್ಯದಲ್ಲಿ ಹೃದಯಾಘಾತದಿಂದ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. 


ಈ ಬಗ್ಗೆ ಮೃತ
ಮಹಿಳೆಯ ಪತಿ ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Latest Articles