26.1 C
Kadaba
Saturday, April 19, 2025

ಹೊಸ ಸುದ್ದಿಗಳು

ಕಡಬ: 5 ವರ್ಷಗಳ ಹಿಂದೆ ನಡೆದ ಅಪಘಾತ ಪ್ರಕರಣ:ಸಾಕ್ಷ್ಯಾಧಾರ, ದಾಖಲೆಗಳ ಕೊರತೆ-ಆರೋಪಿ ಖುಲಾಸೆ

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಕ್ಷೇಪಾರ್ಹ, ಅಥವಾ ತಪ್ಪು ಮಾಹಿತಿಗಳು  ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

KADABA TIMES (ಕಡಬ ಟೈಮ್ಸ್):  ಕಡಬ:ಸುಮಾರು 5 ವರ್ಷಗಳ ಹಿಂದೆ ಕಡಬದ ಕೋಡಿಂಬಾಳ ಸಮೀಪದ ಬೊಳ್ಳೂರಿನಲ್ಲಿ  ಸಂಭವಿಸಿದ್ದ ಅಪಘಾತ ಪ್ರಕರಣವೊಂದರಲ್ಲಿ ಆರೋಪಿ ಟಿಪ್ಪರ್ ಲಾರಿ ಚಾಲಕನನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.‌

kadabatimes.in

2020ರ ಮಾ.1ರಂದು ಮೇಘರಾಜ್ ಎಂಬವರು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿ ಮರ್ದಾಳಕ್ಕೆ ಬಂದು ಮನೆ ಸಾಮಾನುಗಳನ್ನು ತೆಗೆದುಕೊಂಡು ಮರ್ದಾಳದಿಂದ ತನ್ನ ಮನೆ ಕಡೆಗೆ ಹೋಗುವಾಗ ಪರಿಚಯದ ಸನೀಫ್ ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ತನ್ನ ಬಾಬ್ತು ಮೋಟಾರ್ ಸೈಕಲ್‌ನಲ್ಲಿ ಕೋಡಿಂಬಾಳ ರಸ್ತೆಯಲ್ಲಿ ಮನೆ ಕಡೆಗೆ ಹೋಗುತ್ತಿರುವಾಗ ಕಡಬ ತಾಲೂಕು ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ಎಂಬಲ್ಲಿಗೆ ತಲುಪಿದಾಗ  ದ್ವಿಚಕ್ರ ವಾಹನದ ಸವಾರ ಮೇಘರಾಜ್ ಎಂಬವರು,ತಿರುವು ರಸ್ತೆಯಲ್ಲಿ ನಿರ್ಲಕ್ಷತನ ಮತ್ತು ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸಿಕೊಂಡು ಹೋಗಿ ಕೋಡಿಂಬಾಳ ಕಡೆಯಿಂದ ಬರುತ್ತಿದ್ದ 407 ಲಾರಿಯ ಚಕ್ರದ ಅಡಿಗೆ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದರು ಎಂದು ಅನಿಲ್ ಎಂಬವರು ನೀಡಿದ ದೂರಿನ ಮೇರೆಗೆ ಪೊಲೀಸರು ಮೃತ ಸ್ಕೂಟರ್ ಸವಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

kadabatimes.in
kadabatimes.in

ತದನಂತರ ಸದ್ರಿ ಪ್ರಕರಣವು ತಿರುವು ಪಡೆದುಕೊಂಡು ಟಿಪ್ಪರ್ ಚಾಲಕ ಅಬ್ದುಲ್ ಲತೀಫ್ ಎಂಬವರ ನಿರ್ಲಕ್ಷತನ ಮತ್ತು ಅಜಾಗರೂಕತೆ ಚಲಾವನೆಯಿಂದ ಅಪಘಾತವಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು .ಬದಲಾದ ಸನ್ನಿವೇಶದಲ್ಲಿ ಅಬ್ದುಲ್ ಲತೀಫ್ ರವರ ಮೇಲೆ ವಿಚಾರಣೆ ಕೂಡ ನಡೆದಿತ್ತು. ನ್ಯಾಯಾಲಯವು ತನಿಖೆಯನ್ನು ಕೈಗೆತ್ತಿಕೊಂಡು ಒಟ್ಟು 22 ಸಾಕ್ಷಿಗಳ ಪೈಕಿ 9 ಸಾಕ್ಷಿಗಳನ್ನು ತನಿಖೆ ನಡೆಸಿರುತ್ತದೆ, ಅಲ್ಲದೆ ಅಭಿಯೋಜಕರ ಪರವಾಗಿ ಒಟ್ಟು 25 ದಾಖಲೆಗಳನ್ನು ಗುರುತಿಸಲ್ಪಟ್ಟಿರುತ್ತದೆ.

kadabatimes.in

ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ, ದಾಖಲೆಗಳ ಕೊರತೆ ಮತ್ತು ವ್ಯತಿರಿಕ್ತ ಹೇಳಿಕೆಗಳು, ಆರೋಪಿಯ ತಪ್ಪಿನಿಂದಲೇ ಅಪಘಾತವಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಕಂಡುಬರುವುದಿಲ್ಲ ಮತ್ತು ಆರಂಭದಲ್ಲಿ ಮೃತ ಸವಾರನ ವಿರುದ್ದವೇ ಕೇಸು ದಾಖಲಾಗಿ ಬಳಿಕ ಅದನ್ನು ತಿರುಚಿ ಟಿಪ್ಪರ್ ಲಾರಿ ಚಾಲಕನ ಮೇಲೆ ಅರೋಪ ಹೊರಿಸಿರುವುದನ್ನು ಈ ಗಂಭೀರವಾದ ವೈರುದ್ಯಗಳ ತನಿಖಾ ವರದಿಯಲ್ಲಿ ಪೂರಕವಾದಂತಹ ವಿಚಾರಗಳು ಕಂಡು ಬರದೇ  ಇರುವುದನ್ನು ಪರಿಗಣಿಸಿ ಈ ಪ್ರಕರಣವನ್ನು ಸಾಬೀತು ಪಡಿಸುವಲ್ಲಿ ಅಭಿಯೋಜನೆಯು ವಿಫಲಗೊಂಡಿದೆ ಎಂಬುದಾಗಿ ಪರಿಗಣಿಸಿ ಆರೋಪಿಯು ನಿರ್ದೋಷಿ ಎಂದು ಎರಡನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧಿಶರಾದ ಯೋಗೀಂದ್ರ ಶೆಟ್ಟಿ ಅವರು ಬಿಡುಗಡೆ ಮಾಡಿರುತ್ತಾರೆ. ಆರೋಪಿಯ ಪರವಾಗಿ ವಕೀಲರಾದ ಮಹೇಶ್‌ಕಜೆ ಅವರು ವಾದಿಸಿದ್ದರು.

ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.