KADABA TIMES (ಕಡಬ ಟೈಮ್ಸ್): ಕಡಬ: ಇಲ್ಲಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಲ್ಯ ಗ್ರಾಮದ ದೇರಾಜೆ -ಪನ್ಯಾಡಿ ರಸ್ತೆಯಲ್ಲಿ ಸತ್ತ ಕೋಳಿ ಜೊತೆಗೆ ತ್ಯಾಜ್ಯಗಳನ್ನು ಎಸೆಯುತ್ತಿರುವುದು ಕಂಡು ಬಂದಿದೆ.


ಹಲವಾರು ಮನೆಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಸತ್ತ ಕೋಳಿಗಳು ಬೀದಿ ನಾಯಿಗಳಿಗೆ ಆಹಾರವಾಗಿದ್ದು ಜನರು ನಡೆದುಕೊಂದು ಹೋಗಲು ಭಯ ಪಡುವಂತಾಗಿದೆ.




ಸತ್ತ ಕೋಳಿಗಳನ್ನು ಬೀದಿ ನಾಯಿಗಳು ರಸ್ತೆಗೆ ಎಳೆದುಕೊಂಡು ಬರುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೂ ಕಂಟಕವಾಗಿದೆ.ಇದರ ಜೊತೆಗೆ ಮನೆ ತ್ಯಾಜ್ಯಗಳನ್ನು ಎಸೆಯುತ್ತಿರುವುದಾಗಿ ಆ ಭಾಗದ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.


ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆದು ಪರಿಸರವನ್ನು ಹಾಳು ಮಾಡುತ್ತಿರುವವರ ವಿರುದ್ದ ಸ್ಥಳೀಯಾದಳಿತ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಈ ತ್ಯಾಜ್ಯಗಳ ಪೋಟೊ ಹಂಚಿಕೆಯಾಗುತ್ತಿದೆ.