ಕಡಬ ಟೈಮ್, ಕಾಣಿಯೂರು: ಪಂಚಾಯತ್ ನೀರು ಬಿಡುವ ಸಲುವಾಗಿ ಹೋದ ವ್ಯಕ್ತಿಯೊಬ್ಬರು ಅಸ್ವಸ್ಥಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಡಬ ಠಾಣಾ ವ್ಯಾಪ್ತಿಯ ಚಾರ್ವಾಕ ಗ್ರಾಮದಿಂದ ವರದಿಯಾಗಿದೆ.




ಕಡಬ ತಾಲೂಕು ಚಾರ್ವಾಕ ಗ್ರಾಮದ ಮುದ್ವಾ ನಿವಾಸಿ ಅನಂದ ಎಂ (55 ವರ್ಷ) ವೃತಪಟ್ಟವರು.
ಮುದ್ವಾ ಪರಿಸರದ ಪಂಚಾಯತ್ ನೀರು ಸರಬರಾಜು ಮಾಡುವ ಕೆಲಸದಲ್ಲಿದ್ದ ಇವರು ಜ.12 ರಂದು ಮುಂಜಾನೆ ಎಂದಿನಂತೆ ಪಂಚಾಯತ್ ನೀರು ಬಿಡಲು ಹೋದವರು ಮರಳಿ ಮನೆಗೆ ಬಂದವರು ತೀವ್ರ ಅಸ್ವಸ್ಥರಾಗಿದ್ದರು.
ಕೂಡಲೇ ಅವರನ್ನು ಮನೆಯಲ್ಲಿದ್ದವರು ಆಟೋ ರಿಕ್ಷಾದಲ್ಲಿ ಕಾಣಿಯೂರಿನ ಖಾಸಗಿ ಕ್ಲಿನಿಕಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿದ್ದರು. ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಕಾರಣ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಮೃತರ ಮಗ ಯಶವಂತ ಎಂಬವರು ನೀಡಿದ ದೂರಿನಂತೆ ಕಡಬ
ಪೊಲೀಸ್ ಠಾಣಾ ಯು ಡಿ ಆರ್
ನಂಬ್ರ 02/2025 ಕಲಂ:194 BNSS-2023ಯಂತೆ ಪ್ರಕರಣ ದಾಖಲಾಗಿರುತ್ತದೆ.


An incident of a person who went to draw panchayat water fell ill and died in the hospital was reported from Charwaka village under Kadaba police station. Ananda M (55 years), a resident of Mudwa, Charwaka village, died.
He was working to supply panchayat water in Mudwa. He went to the panchayat water supply early in the morning on January 12 as usual. He came back home and was seriously ill.
He was immediately taken to a private clinic in Kaniyoor in an auto rickshaw by his family and admitted for treatment. It is learned that the doctor examined him and told him to take him to another hospital for further treatment.
According to the complaint filed by the deceased’s son Yashwant, a case has been registered as UDR No. 02/2025 Col: 194 BNSS-2023 at Kadaba Police Station.

