26.1 C
Kadaba
Saturday, April 19, 2025

ಹೊಸ ಸುದ್ದಿಗಳು

Big breaking: ಕಡಬದಲ್ಲಿ ಭೀಭತ್ಸ ಘಟನೆ: ದಟ್ಟ ಕಾಡಿನಲ್ಲಿ ಯುವಕನ ಭೀಕರ ಕೊಲೆ

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಕ್ಷೇಪಾರ್ಹ, ಅಥವಾ ತಪ್ಪು ಮಾಹಿತಿಗಳು  ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

 

kadabatimes.in
ನಾಪತ್ತೆಯಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಸಂದೀಪ್ ಗೌಡ 

ಕಡಬ:  ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (29) ಕೆಲಸಕ್ಕೆಂದು ಹೋದವನು ಮನೆಗೆ ಹಿಂದಿರುಗದೆ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

kadabatimes.in


ಇದೀಗ ಪ್ರಕರಣದ
ಬೆನ್ನತ್ತಿದ ಪೊಲೀಸರು ಇದೊಂದು ನಾಪತ್ತೆ ಪ್ರಕರಣವಲ್ಲ ಬದಲಾಗಿ ಕೊಲೆ ಎಂಬುದು ಈಗ ಗೊತ್ತಾಗಿದೆ.  ಅ ಭೀಕರವಾಗಿ ಕೊಲೆ ಮಾಡಲಾಗಿದೆ ಎಂಬ ವಿಚಾರ ತಿಳಿದು ಬಂದಿದೆ.


ನೆಟ್ಟಣ ರೈಲು ನಿಲ್ದಾಣದ ಸುಮಾರು ಒಂದುವರೆ ಕಿ.ಮೀ ದೂರದ ನಾರಡ್ಕ ಎಂಬಲ್ಲಿ ದಟ್ಟ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.   ಕೊಲೆ ಪ್ರಕರಣದಲ್ಲಿ ಕೇಳಿ ಬಂದಿರುವ  ಪ್ರತೀಕ್  ಎಂಬಾತನನ್ನು ಪೊಲೀಸರು ಕರೆದೊಯ್ದಿದ್ದು  ಈ ವೇಳೆ ಸಾರ್ವಜನಿಕರು ತಡೆಯೊಡ್ಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಸ್ಥಳದಲ್ಲಿ ಡಿವೈಎಸ್ಪಿ, ವೃತ್ತ ನಿರೀಕ್ಷರು ಮತ್ತು ಕಡಬ ಎಸ್.ಐ ನೇತೃತ್ವದ ಪೊಲೀಸರು,ಸಾರ್ವಜನಿಕರು ಸೇರಿದ್ದರು.

ದಟ್ಟ ಕಾಡಿನಲ್ಲಿ ಆಕ್ರೋಶ ಹೊರ ಹಾಕುತ್ತಿರುವ ಸಾರ್ವಜನಿಕರು


ಮೃತ ದೇಹ ಇರುವ ಜಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು ಕೆಲ ಹೊತ್ತು ಆತಂಕದ ವಾತಾವರಣಕ್ಕೆ ಕಾರಣವಾಗಿತ್ತು. ಪೊಲೀಸರ ವಾಹನಕ್ಕೂ ತಡೆಯೊಡ್ಡಿ ಆಕ್ರೋಶ ಹೊರ ಹಾಕಿದರು.  ಸಾರ್ವಜನಿಕರು  ಓರ್ವನೇ ಕೊಲೆ ಮಾಡಿದನೇ ಅಥವಾ ಇತರರು ಯಾರಾದರೂ ಇದ್ದಾರೆಯೇ ಎಂಬುದರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು   ಪೊಲೀಸರ ಸ್ಪಷ್ಟನೆ ಬಳಿಕವೇ ತಿಳಿದು ಬರಲಿದೆ.

kadabatimes.in


ಈ ಘಟನೆಗೆ ಸಂಬಂಧಿಸಿ  ಭಾನುವಾರ ರಾತ್ರಿಯೇ   ಇಬ್ಬರನ್ನು ವಶಕ್ಕೆ ಪಡೆದು ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು.   ಕಡಬ ಠಾಣೆಗೆ ಡಿವೈಎಸ್ಪಿ ಆಗಮಿಸಿ ಮಾಹಿತಿ ಕಲೆ ಹಾಕಿದ್ದರು. ನೆಟ್ಟಣ ಬಳಿ ನಾಪತ್ತೆಯಾದ ಯುವಕನ ಕೊಲೆಯಾಗಿದೆ  ಎಂಬ ಸುದ್ದಿ ಭಾನುವಾರ ರಾತ್ರಿ ಹಬ್ಬಿತ್ತು . ಸೋಮವಾರ ಪೊಲೀಸರು ನೆಟ್ಟಣಕ್ಕೆ ಬರುವ ತಯಾರಿ ಮಾಡಿದ್ದು ಸುದ್ದಿಯ ಹಿನ್ನೆಲೆಯಲ್ಲಿ  ನೆಟ್ಟಣ ಮುಖ್ಯ ಪೇಟೆಯಲ್ಲಿ ಅಧಿಕ ಜನರು ಸೇರಿದ್ದರು.ನೆಟ್ಟಣದಲ್ಲೂ
, ಠಾಣೆಯಲ್ಲೂ ಪೊಲೀಸರ ವಿರುದ್ದ ಜನರು ಆಕ್ರೋಶ ಹೊರ ಹಾಕಿದ್ದರು.


ಪೊಲೀಸರು ಮೃತ ದೇಹ ಇರುವ
ಸ್ಥಳದ ಬಗ್ಗೆ ಸುಳಿವು ನೀಡದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಹಲವು ವದಂತಿಗಳು ಹಬ್ಬಿತ್ತು. 
ಸಂದೀಪ್ ಮರ್ದಾಳದಲ್ಲಿ ವಿನಯ ಎಂಬವರೊಂದಿಗೆ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದು . 27ರಂದು ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವನು ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸಾಗಿರಲಿಲ್ಲ


ಬಗ್ಗೆ ಶಾಮಿಯಾನ ಮಾಲಕ ಅವರಲ್ಲಿ ವಿಚಾರಿಸಿದಾಗ ಸಂದೀಪ್ ನೆಟ್ಟಣ ನಿವಾಸಿ ಪ್ರತೀಕ್ ನೊಂದಿಗೆ  ಕಾರಿನಲ್ಲಿ ಹೋಗಿರುವುದಾಗಿ ತಿಳಿಸಿದ್ದರು. ದಿನ ಮನೆಗೆ ಬಾರದೇ ಇದ್ದಾಗ ನೆರೆ ಕರೆಯವರಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸರೋಜಾ ಅವರು ಕಡಬ ಠಾಣೆಗೆ ದೂರು ನೀಡಿದ್ದರು.


kadabatimes.in


ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.