

![]() ![]() |
ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಮುಖಂಡರು |
ಕಡಬ: ಕಡಬ ತಾಲೂಕಿನ
ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (29.ವ) ಕೆಲಸಕ್ಕೆಂದು
ಹೋದವರು ಮನೆಗೆ ಹಿಂದಿರುಗದೆ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ನಾಪತ್ತೆಯಾದ ಯುವಕ ಕೊಲೆಯಾಗಿರುವ
ಬಗ್ಗೆ ಬಲವಾದ ಆರೋಪ ಕೇಳಿ ಬಂದ ಹಿನ್ನೆಲೆ ಗ್ರಾಮಸ್ಥರು ಪೊಲೀಸರ ವಿಳಂಬ ಧೋರಣೆಯಿಂದ ಬೇಸೆತ್ತು ಠಾಣೆ
ಮುಂಭಾಗದಲ್ಲಿ ಆಕ್ರೋಶ ಹೊರ ಹಾಕಿದ್ದರು. ಈ ಬೆನ್ನೆಲ್ಲೇ ಬಿಜೆಪಿಯ ಪ್ರಮುಖರು ನೊಂದ ಕುಟುಂಬಕ್ಕೆ
ಸಾಂತ್ವನ ಹೇಳಿ ಠಾಣೆಗೆ ಆಗಮಿಸಿ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಕೊಲೆ ಆರೋಪಿಗಳ ವಿರುದ್ದ
ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ
ಕಿಶೋರ್ ಕುಮಾರ್ ಪುತ್ತೂರು ಅವರು ಮಾಧ್ಯಮದ ಜೊತೆ
ಮಾತನಾಡಿ, ಬಿಳಿನೆಲೆಯಲ್ಲಿ ಕಾರ್ಯಕರ್ತನ ಹತ್ಯೆಯಾಗಿದೆ. ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು,
ಗಾಂಜಾವನ್ನು ನಿಯಂತ್ರಣ ಮಾಡಬೇಕು. ಪೊಲೀಸ್ ಇಲಾಖೆಯ ಮೇಲೆ ಗೌರವ ಇದೆ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು,
ಗಾಂಜಾ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಮಾತ್ರವಲ್ಲ ನಾಗರಿಕ ಸಮಾಜವೂ ಎಚ್ಚರಗೊಳ್ಳಬೇಕು ಎಂದು ಹೇಳಿದ್ದಾರೆ.


ಕಡಬ ಬಿಜೆಪಿ ಮುಖಂಡ
ಕೃಷ್ಣ ಶೆಟ್ಟಿ ಮಾತನಾಡಿ ಗಾಂಜಾ ವ್ಯಸನಿಗಳ ಆಕ್ರಮನಕ್ಕೆ ಯುವಕ ಬಲಿಯಾಗಿದ್ದಾನೆ. ಈ ಪ್ರಕರಣದ ಬಗ್ಗೆ
ಕೂಲಂಕಷ ತನಿಖೆಯಾಗಬೇಕು, ಆ ಭಾಗದ ರಾಜಕೀಯ ಪ್ರಮುಖರು
ಈ ಪ್ರಕರಣದ ಹಿಂದೆ ಇರುವ ಆರೋಪವನ್ನು ಆ ಭಾಗದ ಕಾರ್ಯಕರ್ತರು ಮಾಡಿದ್ದಾರೆ. ಈ ಹಿಂದೆ ಯೂ ಕೆಲ ಘಟನೆಗಳು
ಸಂಭವಿಸಿದಾಗ ಆ ಭಾಗದ ಕಾಂಗ್ರೆಸ್ ಮುಖಂಡ ರಕ್ಷಣೆ
ನೀಡಿರುವ ಆರೋಪ ಇದೆ. ಮತ್ತೆ ಜಿಲ್ಲೆಯಲ್ಲಿ ಇಂತಹ
ಘಟನೆ ಮರುಕಳುಹಿಸಬಾರದು ಎಂದಿದ್ದಾರೆ.
ವೆಂಕಟ್ ವಲಳಂಬೆ ಮಾತನಾಡಿ,ಈ
ಪ್ರಕರಣದ ಬಗ್ಗೆ ಸರಿಯಾದ ತನಿಖೆಯಾಗಬೇಕು, ಸಾಮಾನ್ಯ ವ್ಯಕ್ತಿಯನ್ನು ಅಮಾನುಷವಾಗಿ ಕೊಲೆ ಮಾಡಲಾಗಿದೆ, ಪ್ರಾಮಾಣಿಕ ನೆಲೆಯಲ್ಲಿ ತನಿಖೆಯಾಗಬೇಕೆಂದು ಆಗ್ರಹಿಸಿದರು.
ಈ ಪ್ರಕರಣದ ಹಿಂದೆ ಯಾರು ಇದ್ದಾರೆ ಎನ್ನುವುದನ್ನು ಜನ
ಮಾತನಾಡಿಕೊಳ್ಳುತ್ತಿದ್ದಾರೆ. ಆರೋಪಿಯ ಮೂಲಕ ಬಾಯಿ ಬಿಡಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕೆಂದು ಆಗ್ರಹಿಸಿದರು.

