

![]() ![]() |
ತಾರಾನಾಥ ಕಡೀರಡ್ಕ, ಅಧ್ಯಕ್ಷರು ಭೀಮ್ ಆರ್ಮಿ ಸಂಘಟನೆ,ಕಡಬ |


ಕಡಬ:
ದೇಶದ ಯುವಕರಿಗೆ
ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ ,ಇಂತಹ
ಮಹತ್ವ ಪೂರ್ಣ ವಿಚಾರಗಳನ್ನು ಯುವ ಸಮುದಾಯ ತಿಳಿದು ಕೊಳ್ಳಬೇಕು ಎಂದು ನೂತನ ಕಡಬ ತಾಲೂಕು ಭೀಮ್ ಆರ್ಮಿ ಸಂಘಟನೆಯ ಅಧ್ಯಕ್ಷ ತಾರಾನಾಥ ಕಡೀರಡ್ಕ ಹೇಳಿದರು.
ಸಂವಿಧಾನ
ದಿನಾಚರಣೆ ಹಿನ್ನೆಲೆಯಲ್ಲಿ ಕಡಬ ಟೈಮ್ ಜೊತೆ ಅಭಿಪ್ರಾಯ ಹಂಚಿಕೊಂಡ ಅವರು , ಸಂವಿಧಾನವನ್ನು
ಪಾಲನೆ ಮಾಡುವ ಮೂಲಕ ಗೌರವ ಸಮರ್ಪಣೆ ಮಾಡಬೇಕು. ಆಗ ಭಾರತೀಯರು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ
ಆಗುತ್ತದೆ . ಸಂವಿಧಾನ ವಿಧಿ ವಿಧಾನಗಳ ಅಡಿಯಲ್ಲಿ ಆಡಳಿತ ನಡೆಯುತ್ತಿದೆ. ಆದರೂ, ನಮ್ಮಗಳ ಸ್ಥಿತಿ
ಇನ್ನೂ ಸುಧಾರಿಸಬೇಕಿದೆ. ಇನ್ನೂ ಸಾಕಷ್ಟು ಸೌಲಭ್ಯಗಳು ತಲುಪಬೇಕಿದೆ.


“ಎಲ್ಲಿಯವರೆಗೆ
ನೀವು ಸಾಮಾಜಿಕ ಸ್ವಾತಂತ್ರ್ಯದಿಂದ ವಂಚಿತರಾಗಿರುತ್ತೀರೋ, ಅಲ್ಲಿಯವರೆಗೆ ನೀವು ಕಾನೂನಿನಿಂದ ಯಾವುದೇ ಸ್ವಾತಂತ್ರ್ಯವನ್ನು ಪಡೆದರೂ ಅದರ ಪ್ರಯೋಜನ ಬರುವುದಿಲ್ಲ” ಎಂಬ ಮಾತು ಸಂವಿಧಾನ
ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್
ಅವರ ನುಡಿಮುತ್ತುಗಳಲ್ಲಿ ಒಂದಾಗಿದೆ.
ಅಂತೆಯೇ
ನಾವು ಸುಕ್ಷಿತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆ,
ಭಾರತ ಸಂವಿಧಾನವು
ವಿಶ್ವದಲ್ಲಿಯೇ ಶ್ರೇಷ್ಟವಾಗಿದೆ. ಮಹಾನ್ ವ್ಯಕ್ತಿಗಳ
ನೇತೃತ್ವದಲ್ಲಿ ಸಂವಿಧಾನ ರಚನೆಯಾಗಿದ್ದು, ಅವಿರತ ಪ್ರಯತ್ನಗಳನ್ನು ಈ ದಿನ ನೆನಪಿಸಬೇಕಿದೆ
ಎಂದರಿದ್ದಾರೆ.

