39.8 C
Kadaba
Sunday, March 16, 2025

ಹೊಸ ಸುದ್ದಿಗಳು

ಮನೆಯಲ್ಲಿ ಅನುಮಾನಸ್ಪದ ಚಟುವಟಿಕೆ ಶಂಕೆ : ಸಾರ್ವಜನಿಕ ದೂರಿನ ಮೇರೆಗೆ ಪೊಲೀಸ್‌ ದಾಳಿ

Must read

 ಕಡಬ ಟೈಮ್:  ಮನೆಯೊಂದಕ್ಕೆ
ದಿಢೀರ್ದಾಳಿ ನಡೆಸಿದ ಪುತ್ತೂರು ನಗರ ಠಾಣೆ ಪೊಲೀಸರು ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದ ಘಟನೆ  ಪುತ್ತೂರು
ನಗರದ ಹೊರವಲಯ ಬನ್ನೂರಿನಲ್ಲಿ 29 ರಂದು ಸಂಜೆ ನಡೆದಿದೆ.

kadabatimes.in

ಪುತ್ತೂರು ನಗರ ಠಾಣೆಯ ಪೊಲೀಸರು ಆಗಮಿಸಿದ ಸಂದರ್ಭ


kadabatimes.in


ಮನೆಯಲ್ಲಿ ಅನುಮಾನಸ್ಪದ ಚಟುವಟಿಕೆ ನಡೆಯುತ್ತಿದೆ ಎಂಬ ದೂರು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿರುವುದಾಗಿ ಪೊಲೀಸ್ಮೂಲಗಳು ತಿಳಿಸಿವೆಪೊಲೀಸರು
ಭೇಟಿ ನೀಡಿದ ವೇಳೆ ಮನೆಯಲ್ಲಿ ಮನೆ
ಒಡತಿಯ ಯೊಂದಿಗೆ ಮತ್ತೊಬ್ಬರು ಮಹಿಳೆಯೂ ಇದ್ದರು.  ಇವರ
ಹೊರತು ಮನೆಯಲ್ಲಿ  ಬೇರೆ
ಯಾರು ಇರಲಿಲ್ಲ ಎನ್ನಲಾಗಿದೆ .

kadabatimes.in

ವಿಚಾರಣೆ ವೇಳೆ ಇನ್ನೊರ್ವ  ಮಹಿಳೆಯೂ
ತಾನೂ ಮನೆ ಒಡತಿಯ ಸ್ನೇಹಿತೆ ಎಂದು ಪೊಲೀಸರಿಗೆ ತಿಳಿಸಿರುವುದಾಗಿ ತಿಳಿದು ಬಂದಿದೆಇಬ್ಬರು
ಮಹಿಳೆಯರು ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದು ಕಳೆದ ಕೆಲ ದಿನಗಳಿಂದ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ
ಹಿನ್ನಲೆಯಲ್ಲಿ ಹಾಗೂ ಮನೆ ಸಮೀಪ ಅನುಮಾನಸ್ಪದ ವ್ಯಕ್ತಿಗಳು ಭೇಟಿ ನೀಡಿದ ಹಿನ್ನಲೆಯಲ್ಲಿ ಸಂಶಯದ ಮೇರೆಗೆ
ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

kadabatimes.in

ದಾಳಿಯ
ವೇಳೆ ಸಾರ್ವಜನಿಕರ ಆರೋಪವನ್ನು ಪುಷ್ಟಿಕರಿಸುವ ಯಾವುದೇ ಸಾಕ್ಷ್ಯ ದೊರೆತಿಲ್ಲ  ಎಂದು ಹೇಳಲಾಗುತ್ತಿದೆ  .