ಕಡಬದ ಯೂಟ್ಯೂಬರ್ ಸಹಿತ  ಆರು ಮಂದಿಗೆ SIT ನೋಟಿಸ್

kadaba times

ಕಡಬ ಟೈಮ್ಸ್, ಪ್ರಮುಖ ಸುದ್ದಿ:   ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು  ಎಸ್.ಐ.ಟಿ ಕಚೇರಿಗೆ ಕಡಬದ ಯೂಟ್ಯೂಬರ್ ಸಹಿತ  ಆರು ಮಂದಿ  ಯೂಟ್ಯೂಬರ್ ಗಳು ವಿಚಾರಣೆಗೆ ಅ.3 ರಂದು ಹಾಜರಾಗಲು  ನೋಟಿಸ್ ಜಾರಿ ಮಾಡಲಾಗಿದೆ.

kadaba times
uniq

ಯೂಟ್ಯೂಬರ್ ಗಳಾದ ಡಿ ಟಾಸ್ಕ್ ಯೂಟ್ಯೂಬ್ ವಾಹಿನಿಯ ದಿನೇಶ್, ದೂತ ಯೂಟ್ಯೂಬ್ ವಾಹಿನಿಯ ಸಮೀರ್.ಎಮ್.ಡಿ , ಸಂಚಾರಿ ಸ್ಟೂಡಿಯೋ ಯೂಟ್ಯೂಬ್ ವಾಹಿನಿಯ ಸಂತೋಷ್ ಕಡಬ, ಕುಡ್ಲ ರಾಮ್ ಪೇಜ್ ಯೂಟ್ಯೂಬ್ ವಾಹಿನಿಯ ಅಜಯ್ ಅಂಚನ್, ಯುನೈಟೆಡ್ ಮೀಡಿಯಾ ಯೂಟ್ಯೂಬ್ ವಾಹಿನಿಯ ಅಭಿಷೇಕ್ ಸೇರಿ ಒಟ್ಟು ಆರು ಮಂದಿಗೆ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿದು ಬಂದಿದೆ.

kadaba times
kadaba times

ಅ.3 ರಂದು ಬೆಳಗ್ಗೆ 11:30 ಕ್ಕೆ ವಿಚಾರಣೆಗಾಗಿ ಸಂಚಾರಿ ಸ್ಟುಡಿಯೋ ಯೂಟ್ಯೂಬರ್ ಸಂತೋಷ್ ಕಡಬ ಅ.3 ರಂದು ಹಾಜರಾಗಿರುವುದಾಗಿ ತಿಳಿದು ಬಂದಿದೆ. ಜಯಂತ್.ಟಿ ಪತ್ನಿ  ಮಗಳು ಕೂಡ  ಬೆಳ್ತಂಗಡಿ ಕಚೇರಿಗೆ ಅ.3 ರಂದು ಬೆಳಗ್ಗೆ 11:30 ಕ್ಕೆ ಹಾಜರಾಗಿದ್ದಾರೆ. ಸೌಜನ್ಯ ಪರ ಹೋರಾಟಗಾರ  ಹೋರಾಟಗಾರ ಜಯಂತ್.ಟಿ ಮಗನಿಗೂ  ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ‌.

Related Articles

Latest Articles