ಆರೆಸ್ಸೆಸ್ ಪ್ರಚಾರಕರಾಗಿ ಸೇರ್ಪಡೆಯಾಗಲಿರುವ ಮಾಜಿ ಪೊಲೀಸ್ ಅಧಿಕಾರಿ

kadaba times

ಕೇರಳ ಪೊಲೀಸ್‌ ನ ಮಾಜಿ ಮಹಾನಿರ್ದೇಶಕ (ಡಿಜಿಪಿ) ಜಾಕೋಬ್ ಥಾಮಸ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ದಲ್ಲಿ ಪೂರ್ಣಾವಧಿ ಪ್ರಚಾರಕರಾಗಿ ಸೇರ್ಪಡೆಯಾಗಲಿದ್ದಾರೆ .

kadaba times
uniq

ಕೇರಳದ ಖಾಸಗಿ ವಾಹಿನಿಯೊಂದರಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇದೇ ಬರುವ ಅಕ್ಟೋಬರ್ 1 ರಂದು ಎರ್ನಾಕುಲಂ ಜಿಲ್ಲೆಯ ಪಲ್ಲಿಕ್ಕರದಲ್ಲಿ ನಡೆಯುವ ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಅಧಿಕೃತವಾಗಿ ಆರ್‌ಎಸ್‌ಎಸ್ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಜಾಕೋಬ್ ಥಾಮಸ್ ಹೇಳಿದ್ದಾರೆ.

ಕ್ರಿಶ್ಚಿಯನ್ ಸಮುದಾಯವನ್ನು ಆಕರ್ಷಿಸಲು ಆರೆಸ್ಸೆಸ್ ಮತ್ತು ಬಿಜೆಪಿ ನಡೆಸುತ್ತಿರುವ ಪ್ರಯತ್ನಗಳ ನಡುವೆಯೇ ಈ ನಿರ್ಧಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ನಾನು ದಶಕಗಳಿಂದ ಆರೆಸ್ಸೆಸ್ ನೊಂದಿಗೆ ಒಡನಾಟ ಹೊಂದಿದ್ದೇನೆ. ಸರಸಂಘಚಾಲಕ ಮೋಹನ್ ಭಾಗವತ್ ಸೇರಿದಂತೆ ಸಂಘಟನೆಯ ಹಿರಿಯ ನಾಯಕರೊಂದಿಗೆ ನನ್ನ ಸಂಪರ್ಕವಿದೆ. ರಾಷ್ಟ್ರಕ್ಕೆ ಶಿಸ್ತು, ನಿಸ್ವಾರ್ಥ ಸೇವೆ ಮತ್ತು ಕೇಡರ್‌ ಗಳ ತ್ಯಾಗವೇ ನನ್ನನ್ನು ಆರೆಸ್ಸೆಸ್ ನೆಡೆಗೆ ಆಕರ್ಷಿಸಿದೆ” ಎಂದು ಜಾಕೋಬ್ ಥಾಮಸ್ ಹೇಳಿದರು.

kadaba times
kadaba times

“ನಾನು ಭೇಟಿಯಾದ ಯಾವುದೇ ಆರೆಸ್ಸೆಸ್ ಕಾರ್ಯಕರ್ತರು ವೈಯಕ್ತಿಕ ಲಾಭಕ್ಕಾಗಿ ಕಾರ್ಯನಿರ್ವಹಿಸುವುದಿಲ್ಲ. ದೇಶಸೇವೆಗೆ ಇಷ್ಟೊಂದು ಸಮರ್ಪಣೆ ತೋರಿಸುವ ಸಂಘಟನೆ ಜಗತ್ತಿನಲ್ಲಿ ಮತ್ತೊಂದಿಲ್ಲ” ಎಂದು ನಿವೃತ್ತ ಪೊಲೀಸ್ ಅಧಿಕಾರಿ ಜಾಕೋಬ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಧಿಯಲ್ಲಿಯೂ ತಾನು ಆರೆಸ್ಸೆಸ್ ನೊಂದಿಗೆ ನಿಕಟ ಸಂಬಂಧ ಹೊಂದಿದ್ದೆ ಎಂದು ಜಾಕೋಬ್ ಥಾಮಸ್ ಬಹಿರಂಗಪಡಿಸಿದರು. ಪ್ರಚಾರಕನಾಗಿ ಕೆಲಸ ಮಾಡುವ ನನ್ನ ಆಸಕ್ತಿಯನ್ನು ಸಂಘಟನೆಗೆ ತಿಳಿಸಿದ್ದೇನೆ. ನನ್ನ ಸೇವೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಆರೆಸ್ಸೆಸ್ ತೀರ್ಮಾನಿಸುತ್ತದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಐಪಿಎಸ್ ಅಧಿಕಾರಿಯಾಗಿ ನಿವೃತ್ತಿ ಹೊಂದಿದ ಬಳಿಕ ಜಾಕೋಬ್ ಅವರು ಬಿಜೆಪಿ ಸೇರಿ 2021 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು ಆದರೆ ಗೆಲುವು ಸಿಗಲಿಲ್ಲ.

Related Articles

Latest Articles