
ಕದಬ ಟೈಮ್ಸ್,ಸುಳ್ಯ: ಆಟೋ ಚಾಲಕರೊಬ್ಬರು ಮನೆಯಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟ ಘಟನೆ ಸುಳ್ಯದ ಜಟ್ಟಿಪಳ್ಳದಲ್ಲಿ ನಡೇದಿದೆ.


ಬೊಳಿಯಮಜಲು ಸಮೀಪದ ನಿವಾಸಿ, ಶಾಸ್ತ್ರಿ ಸರ್ಕಲ್ ಬಳಿಯ ಕ್ಯೂ ನಲ್ಲಿ ರಿಕ್ಷಾ ನಿಲ್ಲಿಸಿ ಬಾಡಿಗೆ ಮಾಡುತ್ತಿದ್ದ ರಿಕ್ಷಾ ಚಾಲಕ ಅನಿಲ್ ಜೈನ್ ಹೃದಯಾಘಾತಕ್ಕೆ ಬಲಿಯಾದವರು.


ಮನೆಯಲ್ಲಿ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಾಣ ಉಳಿಸಿಕೊಳ್ಳಲಾಗಲಿಲ್ಲವೆನ್ನಲಾಗಿದೆ. ಸ್ನೇಹ ಸಂಗಮ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾಗಿರುವ ಇವರು ಪತ್ನಿ ಮತ್ತು ಪುತ್ರನ ಜತೆಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು.
