ಕಡಬ: ಗಲಾಟೆ ನಡೆಸಿ ಸಂಚಾರಕ್ಕೆ ಅಡ್ಡಿಪಡಿಸಿದ ಆಂಧ್ರ ಪ್ರವಾಸಿಗರು ಸೇರಿ ನಾಲ್ವರ ವಿರುದ್ಧ ಸುಮೋಟೋ ಕೇಸ್

kadaba times

ನೂಜಿಬಾಳ್ತಿಲ ಗ್ರಾಮದ ಕೈಪನಡ್ಕ ಬಳಿ ಧರ್ಮಸ್ಥಳ–ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ತೋಟದಿಂದ ಅಡಿಕೆ ಹಾಗೂ ತೆಂಗಿನ ಗಿಡಗಳನ್ನು ಕಿತ್ತ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು, ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿ ಗಲಾಟೆ ಸೃಷ್ಟಿಸಿದ ಆರೋಪದ ಮೇಲೆ ಸ್ಥಳೀಯರಿಬ್ಬರು ಹಾಗೂ ಆಂಧ್ರಪ್ರದೇಶ ಮೂಲದ ಇಬ್ಬರು ಪ್ರವಾಸಿಗರು ಸೇರಿದಂತೆ ನಾಲ್ವರ ವಿರುದ್ಧ ಕಡಬ ಪೊಲೀಸರು ಸ್ವಯಂಪ್ರೇರಿತವಾಗಿ (ಸುಮೋಟೋ) ಪ್ರಕರಣ ದಾಖಲಿಸಿಕೊಂಡಿದ್ದಾರೆ.

kadaba times
uniq

ಕಡಬ / ನೂಜಿಬಾಳ್ತಿಲ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕೈಪನಡ್ಕ ಪರಿಸರದಲ್ಲಿ ಧರ್ಮಸ್ಥಳ–ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬದಿಯ ತೋಟವೊಂದರಿಂದ ಅಡಿಕೆ ಹಾಗೂ ತೆಂಗಿನ ಸಸಿಗಳನ್ನು ಕಿತ್ತುಕೊಳ್ಳಲು ಯತ್ನಿಸಿದ ವಿಚಾರವಾಗಿ ಹೆದ್ದಾರಿಯಲ್ಲೇ ಪರಸ್ಪರ ಬೈದಾಡಿಕೊಂಡು ಸಾರ್ವಜನಿಕ ಶಾಂತಿಭಂಗ ಹಾಗೂ ಸುಗಮ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸರು ಸುಮೋಟೋ (ಸ್ವಯಂಪ್ರೇರಿತ) ಪ್ರಕರಣ ದಾಖಲಿಸಿದ್ದಾರೆ.

ಕಡಬ ಪೊಲೀಸ್ ಕಾನ್‌ಸ್ಟೇಬಲ್ ಪ್ರವೀಣ ಶಿಂಗಣ್ಣವರ್ ನೀಡಿದ ವರದಿಯನ್ವಯ ಸ್ಥಳೀಯ ನಿವಾಸಿಗಳು ಹಾಗೂ ಆಂಧ್ರಪ್ರದೇಶದ ಪ್ರವಾಸಿಗರು ಸೇರಿ ನಾಲ್ವರ ಮೇಲೆ ಎಫ್‌ಐಆರ್ ದಾಖಲಾಗಿದೆ.

ಎಫ್‌ಐಆರ್‌ನಲ್ಲಿ ಹೆಸರಿಸಲಾದ ಆರೋಪಿಗಳ ವಿವರ: ಇಚಿಲಂಪಾಡಿಯ ಮೇಹಿ ಜಾರ್ಜ್ (44), ಜಾನ್ಸನ್,ಆಂದ್ರಪ್ರದೇಶದ  ರಾಜಪಲ್ಲಿ ಹರ್ಷವರ್ಧನ (25), ಕೂಡೂರು ಯೋಗಾನಂದ ಯಾನೆ ರಾಮಚಂದ್ರ (28), ಹಾಗೂ ಇತರರು.

kadaba times
kadaba times

ಘಟನೆಯ ಹಿನ್ನೆಲೆ :ಕಡಬ ಪೊಲೀಸ್ ಠಾಣೆಯ ರೆಂಜಿಲಾಡಿ–ನೂಜಿಬಾಳ್ತಿಲ ಗ್ರಾಮದ ಬೀಟ್ ಸಿಬ್ಬಂದಿ ಪ್ರವೀಣ ಶಿಂಗಣ್ಣವರ್ ಅವರು ನೀಡಿದ ದೂರಿನ ವಿವರಗಳ ಪ್ರಕಾರ, ಅಕ್ಟೋಬರ್ 3 ರಂದು ಸಂಜೆ ಸುಮಾರು 5:00 ರಿಂದ 5:30 ರ ವೇಳೆಗೆ, ಧರ್ಮಸ್ಥಳ ಕಡೆಯಿಂದ AP-40-CN-5633 ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದಿದ್ದ ಆಂಧ್ರಪ್ರದೇಶ ಮೂಲದ ಪ್ರವಾಸಿಗರು, ನೂಜಿಬಾಳ್ತಿಲ ಗ್ರಾಮದ ಕೈಪನಡ್ಕ ರಸ್ತೆ ಬದಿಯಲ್ಲಿರುವ ಮೇಹಿ ಜಾರ್ಜ್ ಎಂಬವರ ತೋಟದಿಂದ ಅಡಿಕೆ ಗಿಡ ಹಾಗೂ ತೆಂಗಿನ ಗಿಡಗಳನ್ನು ಕೀಳುತ್ತಿದ್ದರು. ಇದನ್ನು ಗಮನಿಸಿದ ಮೇಹಿ ಜಾರ್ಜ್ ಹಾಗೂ ಇಚಿಲಂಪಾಡಿಯ ಜಾನ್ಸನ್ ಅವರು ಪ್ರವಾಸಿಗರನ್ನು ತಡೆದು ನಿಲ್ಲಿಸಿದ್ದಾರೆ.

ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು, ಧರ್ಮಸ್ಥಳ–ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲೇ ನಿಂತು ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ಪರಸ್ಪರ ಬೈದಾಡಿಕೊಂಡು ಗಲಾಟೆ ಆರಂಭಿಸಿದ್ದಾರೆ.ಹೆದ್ದಾರಿಯ ನಡುವೆಯೇ ಜಗಳ ಮುಂದುವರಿದ ಕಾರಣ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿ, ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿತ್ತು. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ತೆರಳಿದ ಬೀಟ್ ಪೊಲೀಸ್ ಸಿಬ್ಬಂದಿ ಪ್ರವೀಣ ಶಿಂಗಣ್ಣವರ್ ಅವರು ಸ್ಥಳದಲ್ಲಿದ್ದವರನ್ನು ವಿಚಾರಿಸಿ ವಿವರ ಪಡೆದುಕೊಂಡಿದ್ದಾರೆ.

ಕಡಬ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲು: ಸಾರ್ವಜನಿಕ ಸ್ಥಳದಲ್ಲಿ ಶಾಂತಿಭಂಗ ಉಂಟುಮಾಡಿ, ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಸೃಷ್ಟಿಸಿದ್ದಕ್ಕಾಗಿ ಪೊಲೀಸರೇ ಸ್ವತಃ ದೂರುದಾರರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅಪರಾಧ ಸಂಖ್ಯೆ: 117/2026 ಕಾಯ್ದೆ ಮತ್ತು ಕಲಂಗಳು: ಕಲಂ 92 ಕರ್ನಾಟಕ ಪೊಲೀಸ್ ಕಾಯ್ದೆ 1963 (KP Act) ಹಾಗೂ ಕಲಂ 194 ಭಾರತೀಯ ನ್ಯಾಯ ಸಂಹಿತೆ 2023 (BNS) ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.

Related Articles

Latest Articles