ಇಚಿಲಂಪಾಡಿ ಬಳಿ ಅಡಿಕೆ ಸಸಿಗಳನ್ನು ಕಿತ್ತುಕೊಂಡು ಹೋಗಲು ಯತ್ನಿಸಿದ ಆರೋಪ

kadaba times

ಕಡಬ / ನೂಜಿಬಾಳ್ತಿಲ: ಖಾಸಗಿ ತೋಟವೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿ ಅಡಿಕೆ ಸಸಿಗಳನ್ನು ಕಿತ್ತುಕೊಂಡು ಹೋಗಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪರಸ್ಪರ ವಾಗ್ವಾದ ನಡೆದು,  ಹಲ್ಲೆಯ ಹಂತಕ್ಕೆ ತಲುಪಿ ಭಾರೀ ಜನಸ್ತೋಮ ಜಮಾಯಿಸಿದ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದ ಇಚಿಲಂಪಾಡಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.

kadaba times
uniq

​ಆಂಧ್ರಪ್ರದೇಶ ನೋಂದಣಿಯ ಕಾರಿನಲ್ಲಿ ಆಗಮಿಸಿದ್ದ ಯಾತ್ರಿಕರ ತಂಡ ಮೇಲೆ ಈ ಆರೋಪ ಕೇಳಿ ಬಂದಿದೆ
​ಸ್ಥಳೀಯರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರಿನಲ್ಲಿ ಬಂದಿದ್ದ ಆಂಧ್ರ ಮೂಲದ ಯಾತ್ರಾರ್ಥಿಗಳ ತಂಡವೊಂದು ಇಚಿಲಂಪಾಡಿಯಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಸೇರಿದ ಕೃಷಿ ತೋಟಕ್ಕೆ ನುಗ್ಗಿ ಅಲ್ಲಿ ನೆಡಲಾಗಿದ್ದ ಅಡಿಕೆ ಸಸಿಗಳನ್ನು ಕಿತ್ತು ಕಾರಿಗೆ ತುಂಬಿಸಿಕೊಳ್ಳಲು ಯತ್ನಿಸಿದೆ ಎನ್ನಲಾಗಿದೆ.

​ಇದನ್ನು ಗಮನಿಸಿದ ತೋಟದ ಮಾಲೀಕರು ಹಾಗೂ ಸ್ಥಳೀಯರು ಅವರನ್ನು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಎರಡೂ ಕಡೆಯ ನಡುವೆ ತೀವ್ರ ಮಾತಿನ ಚಕಮಕಿ ಆರಂಭವಾಗಿ  ಹಲ್ಲೆಯ ಹಂತಕ್ಕೆ  ತಲುಪಿತ್ತು ಎಂದು ಹೇಳಲಾಗಿದೆ.

​ಸ್ಥಳದಲ್ಲಿ ಭಾರೀ ಜನಸ್ತೋಮ – ಪೊಲೀಸರ ಎದುರೇ ಸ್ಥಳೀಯರ ಆಕ್ರೋಶ:
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ  ಸುತ್ತಮುತ್ತಲ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ  ಜಮಾಯಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.

kadaba times
kadaba times

ಮಾಹಿತಿ ತಿಳಿದ ಕಡಬ ಪೊಲೀಸ್ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಇದೇ ಸಂದರ್ಭದಲ್ಲಿ ಪೊಲೀಸರ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಸ್ಥಳೀಯರು ಸ್ಥಳದಲ್ಲೇ ತೀವ್ರ ಆಕ್ರೋಶ ಹೊರಹಾಕಿದ್ದು, ಸಾರ್ವಜನಿಕರ ಆಕ್ರೋಶದ ದೃಶ್ಯಗಳು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಆಂಧ್ರ ಮೂಲದ ತಂಡದ ಕೆಲವರು ಹಲ್ಲೆಯಾಗಿದೆ ಎಂದು ಕಡಬ ಸಮುದಾಯ ಆಸ್ಪತ್ರೆಗೆ   ದಾಖಲಾಗಿದ್ದು  ಬಳಿಕ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಲು ಯತ್ನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ
​

ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯವರಿಂದ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಹಲ್ಲೆ ಹಾಗೂ ಸಸಿ ಕಳವು ಯತ್ನದ ಕುರಿತು ಕೂಲಂಕಷ ಪರಿಶೀಲನೆ ನಡೆಸುತ್ತಿದ್ದಾರೆ.  ನಿಖರ ವಿವರಗಳು ಹೊರಬರಬೇಕಿದೆ.

Related Articles

Latest Articles