ಶಿರಾಡಿ ಗ್ರಾಮ: ಗುಂಡ್ಯದ ಮಹಿಳೆಗೆ 94(ಸಿ) ಅಡಿ ಜಮೀನು ಮಂಜೂರಾತಿ ಕೊಡಿಸುವುದಾಗಿ ನಂಬಿಸಿ ಲಕ್ಷ ರೂ ಪಡೆದು ವಂಚನೆ

kadaba times

ಕಡಬ ತಾಲೂಕಿನ ಶಿರಾಡಿ ಗ್ರಾಮದ ಗುಂಡ್ಯ ನಿವಾಸಿಯೊಬ್ಬರಿಗೆ 94(ಸಿ) ನಿಯಮಾವಳಿಯಡಿ ಜಮೀನು ಮಂಜೂರಾತಿ ಮಾಡಿಸಿಕೊಡುವುದಾಗಿ ನಂಬಿಸಿ ₹3.25 ಲಕ್ಷ ಹಣ ಪಡೆದು, ದಾಖಲೆಗಳನ್ನೂ ಮಾಡಿಸಿಕೊಡದೆ ವಂಚಿಸಿ ಜೀವಬೆದರಿಕೆ ಹಾಕಿರುವ ಬಗ್ಗೆ ವ್ಯಕ್ತಿಯೊಬ್ಬರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ  ಎಫ್‌ಐಆರ್ ದಾಖಲಾಗಿದೆ. ಮಹಿಳೆಯೊಬ್ಬರು ನೀಡಿದ ಲಿಖಿತ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

kadaba times
uniq

ಉಪ್ಪಿನಂಗಡಿ / ಶಿರಾಡಿ:ಕಡಬ ತಾಲೂಕಿನ ಶಿರಾಡಿ ಗ್ರಾಮದ ಗುಂಡ್ಯ ವ್ಯಾಪ್ತಿಯಲ್ಲಿ ವಾಸವಿರುವ ಜಮೀನನ್ನು ಸರ್ಕಾರದ ಅಕ್ರಮ-ಸಕ್ರಮ 94(ಸಿ) ಅಡಿಯಲ್ಲಿ ಮಂಜೂರು ಮಾಡಿಸಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಹಾಗೂ ಹಣ ವಾಪಸ್ ಕೇಳಿದಾಗ ಬೆದರಿಕೆ ಹಾಕಿರುವ ಆರೋಪ ವ್ಯಕ್ತವಾಗಿದೆ.

ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಸಿರಿಬಾಗಿಲು ಗ್ರಾಮದ ದೇರಣೆ ನಿವಾಸಿ ಪದ್ಮನಾಭ ಗೌಡ ಎಂಬುವವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ (BNS) ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯ ನಿವಾಸಿ ಸರಿತಾ (52) ಅವರು ಪೊಲೀಸರಿಗೆ ನೀಡಿರುವ ಲಿಖಿತ ದೂರಿನ ಪ್ರಕಾರ, ಸಂತ್ರಸ್ತೆ  ಕುಟುಂಬವು ಶಿರಾಡಿ ಗ್ರಾಮದ ಗುಂಡ್ಯದ ಸರ್ವೆ ನಂಬ್ರ 87/1 ರಲ್ಲಿ ಮನೆ ನಿರ್ಮಿಸಿಕೊಂಡು ವಾಸ್ತವ್ಯವಿದೆ.ಈ ಜಮೀನನ್ನು ಸರ್ಕಾರದ 94(ಸಿ) ಯೋಜನೆಯಡಿ ಮಂಜೂರು ಮಾಡಿಸಿಕೊಡುವುದಾಗಿ ಆರೋಪಿತ ವ್ಯಕ್ತಿ ಪದ್ಮನಾಭ ಗೌಡ ಎಂಬಾತ ನಂಬಿಸಿದ್ದನು.

ಈ ಹಿನ್ನೆಲೆಯಲ್ಲಿ 2024ರ ಅಕ್ಟೋಬರ್ 12 ರಂದು ₹1,00,000 ನಗದು, ಎಸ್‌ಬಿಐ ಶಿರಾಡಿ ಶಾಖೆಯ ಖಾತೆಯಿಂದ ಅಕ್ಟೋಬರ್ 16 ರಂದು ₹30,000 ಮೌಲ್ಯದ ಚೆಕ್, ಅಕ್ಟೋಬರ್ 25 ರಂದು ₹95,000 ಮೌಲ್ಯದ ಚೆಕ್, ನವೆಂಬರ್ 14 ರಂದು ₹10,000 ನಗದು ಹಾಗೂ 2025ರ ಮೇ 30 ರಂದು ₹90,000 ನಗದು ಸೇರಿದಂತೆ ಹಂತ-ಹಂತವಾಗಿ ಒಟ್ಟು ₹3,25,000 (ಮೂರು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿ) ಹಣವನ್ನು ಆರೋಪಿ ಪಡೆದುಕೊಂಡಿದ್ದನು.

kadaba times
kadaba times

ಹಣ ವಾಪಸ್ ಕೇಳಿದ್ದಕ್ಕೆ ಬೆದರಿಕೆ ಆರೋಪ: ಹಣ ಪಡೆದು ವರ್ಷಗಳು ಕಳೆದರೂ ಜಮೀನಿನ ಯಾವುದೇ ಮಂಜೂರಾತಿ ದಾಖಲೆ ಪತ್ರಗಳನ್ನು ಮಾಡಿಸಿಕೊಡದೆ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

2026ರ ಸೆಪ್ಟೆಂಬರ್ 22 ರಂದು  ಆರೋಪಿ ಸಂತ್ರಸ್ತೆ  ಮನೆಗೆ ಬಂದಿದ್ದಾಗ, ಮಂಜೂರಾತಿ ಪತ್ರ ಕೊಡಿ ಇಲ್ಲವೇ ಪಡೆದ ಹಣವನ್ನು ಹಿಂದಿರುಗಿಸಿ ಎಂದು ಕೇಳಲಾಗಿತ್ತು. ಆ ಸಂದರ್ಭದಲ್ಲಿ ಆರೋಪಿಯು ಹಣ ಪಡೆದಿರುವುದನ್ನು ನಿರಾಕರಿಸಿ, “ನಾನು ಕೆ.ಡಿ.ಪಿ. ಸದಸ್ಯನಾಗಿದ್ದೇನೆ, ಈಗ ನಮ್ಮದೇ ಸರ್ಕಾರವಿದೆ, ನನಗೇನೂ ಮಾಡಲು ಸಾಧ್ಯವಿಲ್ಲ; ಯಾರಿಗಾದರೂ ದೂರು ನೀಡಿದರೆ ನಿಮ್ಮ ಮನೆಯನ್ನು ತೆರವುಗೊಳಿಸುತ್ತೇನೆ” ಎಂದು ಜೀವಬೆದರಿಕೆಯೊಡ್ಡಿ ಧಮಕಿ ಹಾಕಿದ್ದಾನೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ಉಪ್ಪಿನಂಗಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲು: ಮಹಿಳೆ ನೀಡಿದ ಲಿಖಿತ ದೂರಿನ ಅನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 29 ರಂದು ಅಧಿಕೃತವಾಗಿ ಪ್ರಥಮ ವರ್ತಮಾನ ವರದಿ ದಾಖಲಿಸಿಕೊಳ್ಳಲಾಗಿದೆ.ಅಪರಾಧ ಸಂಖ್ಯೆ: 126/2026 ಕಾಯ್ದೆ ಮತ್ತು ಕಲಂಗಳು: ಕಲಂ 318(4) (ವಂಚನೆ) ಹಾಗೂ ಕಲಂ 351(2) (ಕ್ರಿಮಿನಲ್ ಬೆದರಿಕೆ) ಭಾರತೀಯ ನ್ಯಾಯ ಸಂಹಿತೆ (BNS) 2023 ಪ್ರಕರಣ ಸಂಬಂಧ ಉಪ್ಪಿನಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ

Related Articles

Latest Articles