ಮಂಗಳೂರು ಸಬ್ ಜೈಲಿನಲ್ಲಿ ನಡೆದಿದ್ದ ‘ಮಾಡೂರು ಯುಸುಫ್’ ಹತ್ಯೆ ಪ್ರಕರಣ: 11 ವರ್ಷಗಳ ಬಳಿಕ ಮಹತ್ವದ ತೀರ್ಪು ಪ್ರಕಟ

kadaba times

2015 ರಲ್ಲಿ ಮಂಗಳೂರು ನಗರದ ಸಬ್ ಜೈಲಿನಲ್ಲಿ ನಡೆದಿದ್ದ ಮಾಡೂರು ಯುಸುಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ವಿಚಾರಣೆ ನಡೆಸಿದ ನ್ಯಾಯಾಲಯವು ಲಿತೇಶ್ ಪೂಜಾರಿ, ಉಮೇಶ್ ಕೊಂಬಾರ್ ಸೇರಿ ಒಟ್ಟು ಐವರು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದು, ಉಳಿದ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಶಿಕ್ಷೆಯ ಪ್ರಮಾಣ ಪ್ರಕಟಣೆ ಬಾಕಿ ಇದೆ.

kadaba times
uniq

ಮಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಹಾಗೂ ಜೈಲಿನ ಭದ್ರತಾ ವೈಫಲ್ಯದ ಕುರಿತು ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮಂಗಳೂರು ಸಬ್ ಜೈಲಿನೊಳಗಿನ ‘ಮಾಡೂರು ಯುಸುಫ್’ ಹತ್ಯೆ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಘಟನೆ ನಡೆದ 11 ವರ್ಷಗಳ ಬಳಿಕ ನ್ಯಾಯಾಲಯವು ಐವರು ಆರೋಪಿಗಳನ್ನು ದೋಷಿಗಳು ಎಂದು ತೀರ್ಪು ನೀಡಿದೆ.

ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (SC No. 151/2021) ದಿನಾಂಕ 28-09-2026 ರಂದು ಸುದೀರ್ಘ ವಿಚಾರಣೆಯ ಬಳಿಕ ಈ ಆದೇಶ ಪ್ರಕಟಿಸಿದೆ.

2015 ರಲ್ಲಿ ಜೈಲಿನಲ್ಲೇ ನಡೆದಿತ್ತು ಭೀಕರ ಕೊಲೆ: ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಸಬ್ ಜೈಲಿನಲ್ಲಿ ದಿನಾಂಕ 02-11-2015 ರಂದು ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯುಸುಫ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ಘಟನೆ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 92/2015, ಕಲಂ 143, 144, 147, 148, 353 (ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ), 427 (ಆಸ್ತಿ ಹಾನಿ), 302 (ಕೊಲೆ) ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.

kadaba times
kadaba times

ತನಿಖೆ ನಡೆಸಿ 10 ಮಂದಿ ವಿರುದ್ಧ ಚಾರ್ಜ್‌ಶೀಟ್: ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಅಂದಿನ ಎಸಿಪಿ ಶ್ರೀ ತಿಲಕ್ ಚಂದ್ರ ರವರು ತನಿಖೆ ನಡೆಸಿ, 10 ಮಂದಿ ಆರೋಪಿಗಳ ವಿರುದ್ಧ 28-01-2016 ರಂದು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.

ಐವರು ದೋಷಿ – ನಾಲ್ವರು ಖುಲಾಸೆ: ನ್ಯಾಯಾಲಯದಲ್ಲಿ ನಡೆದ ಸುದೀರ್ಘ ವಿಚಾರಣೆಯ ನಂತರ ಆರೋಪ ಸಾಬೀತಾಗಿ ದೋಷಿಗಳಾದವರು (5 ಮಂದಿ):ಲಿತೇಶ್ ಪೂಜಾರಿ,ಶೋಭರಾಜ್,ಯುವರಾಜ್,ಪ್ರದೀಪ್, ಉಮೇಶ್ ಕೊಂಬಾರ್

ಆರೋಪದಿಂದ ಖುಲಾಸೆಗೊಂಡವರು;ಶರಣ್ ಪೂಜಾರಿ,ಮಹೇಶ್ ಕುಮಾರ್,ಕಮಲಾಕ್ಷ ಪೂಜಾರಿ, ಲತೀಶ್ (ಇನ್ನೋರ್ವ ಆರೋಪಿ ಸತೀಶ್ ಪೂಜಾರಿ ವಿಚಾರಣೆ ಹಂತದಲ್ಲೇ ಮೃತಪಟ್ಟಿದ್ದಾರೆ)

ದೋಷಿಗಳಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಸದ್ಯದಲ್ಲೇ ಪ್ರಕಟಿಸಲಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀ ಮೋಹನ್ ರವರು ಸಮರ್ಥವಾಗಿ ವಾದ ಮಂಡಿಸಿದ್ದರು.

Related Articles

Latest Articles