ಸವಣೂರು ಗ್ರಾ.ಪಂ:ಹಸಿ ಮೀನು ಮಾರುಕಟ್ಟೆ ಏಲಂ ಗೆ 9 ಜನ ಬಿಡ್‌ದಾರರ ನಡುವೆ ಭಾರೀ ಫೈಟ್

kadaba times

ಕಡಬ ತಾಲೂಕಿನ ಸವಣೂರು ಪೇಟೆಯ ಹೃದಯಭಾಗದಲ್ಲಿರುವ ಸವಣೂರು ಗ್ರಾಮ ಪಂಚಾಯತ್ ಮೀನು ಮಾರುಕಟ್ಟೆಯ 2026-27ನೇ ಸಾಲಿನ ವಾರ್ಷಿಕ ಏಲಂ ಪ್ರಕ್ರಿಯೆ ಸೆಪ್ಟೆಂಬರ್ 28 ರಂದು ಪಂಚಾಯತ್‌ನ ಕುಮಾರಧಾರ ಸಭಾಭವನದಲ್ಲಿ ನಡೆಯಿತು. ಒಟ್ಟು ಒಂಬತ್ತು ಮಂದಿ ಬಿಡ್‌ದಾರರು ಭಾಗವಹಿಸಿದ ಈ ಹರಾಜಿನಲ್ಲಿ ಪುತ್ತೂರು ಪರ್ಲಡ್ಕದ ಮೊಹಮ್ಮದ್ ಹನೀಫ್ ಅವರು ಗರಿಷ್ಠ 6 ಲಕ್ಷದ 44 ಸಾವಿರ ರೂಪಾಯಿಗೆ ಒಂದು ವರ್ಷದ ಅವಧಿಗೆ ಮಾರುಕಟ್ಟೆಯನ್ನು ತಮ್ಮದಾಗಿಸಿಕೊಂಡರು

kadaba times
uniq

ಸವಣೂರು / ಕಡಬ:ಸವಣೂರು ಪೇಟೆಯ ಕೇಂದ್ರ ಭಾಗದಲ್ಲಿರುವ, ಸವಣೂರು ಗ್ರಾಮ ಪಂಚಾಯತ್ ಆಡಳಿತ ವ್ಯಾಪ್ತಿಗೆ ಒಳಪಟ್ಟ ಮೀನು ಮಾರುಕಟ್ಟೆಯ 2026-27ನೇ ಸಾಲಿನ ಹರಾಜು (ಏಲಂ) ಪ್ರಕ್ರಿಯೆಯು ಸೆಪ್ಟೆಂಬರ್ 28 ರಂದು ಸವಣೂರು ಗ್ರಾ.ಪಂ. ಕುಮಾರಧಾರ ಸಭಾಭವನದಲ್ಲಿ ಯಶಸ್ವಿಯಾಗಿ ಜರುಗಿತು.

ಗ್ರಾಮ ಪಂಚಾಯತ್‌ನ ಪ್ರಮುಖ ಆದಾಯ ಮೂಲಗಳಲ್ಲೊಂದಾದ ಈ ಮಾರುಕಟ್ಟೆ ಏಲಂನಲ್ಲಿ ಒಟ್ಟು 9 ಮಂದಿ ಆಸಕ್ತ ಬಿಡ್‌ದಾರರು ಉತ್ಸಾಹದಿಂದ ಭಾಗವಹಿಸಿದ್ದರು.

ತೀವ್ರ ಪೈಪೋಟಿ – ₹6,44,000ಕ್ಕೆ ಅಂತಿಮ ಬಿಡ್:

kadaba times
kadaba times

ಏಲಂ ಪ್ರಕ್ರಿಯೆಯಲ್ಲಿ ಬಿಡ್‌ದಾರರ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಅಂತಿಮವಾಗಿ ಪುತ್ತೂರು ತಾಲೂಕಿನ ಪರ್ಲಡ್ಕ ನಿವಾಸಿ ಮೊಹಮ್ಮದ್ ಹನೀಫ್ ಅವರು ಬರೋಬ್ಬರಿ ₹6,44,000 (ಆರು ಲಕ್ಷದ ನಲವತ್ನಾಲ್ಕು ಸಾವಿರ ರೂಪಾಯಿ) ಮೊತ್ತದ ಗರಿಷ್ಠ ಬಿಡ್ ಕೂಗುವ ಮೂಲಕ ಒಂದು ವರ್ಷದ ಅವಧಿಗೆ ಸವಣೂರು ಮೀನು ಮಾರುಕಟ್ಟೆಯ ಹರಾಜನ್ನು ತಮ್ಮದಾಗಿಸಿಕೊಂಡರು.

ಈ ಹರಾಜು ಪ್ರಕ್ರಿಯೆಯಲ್ಲಿ ಇತರ ಬಿಡ್‌ದಾರರಾದ ಹಸೈನಾರ್ ಪುದ್ದೊಟ್ಟು,ಸಿದ್ದೀಕ್ ಚಾಪಳ್ಳ,ಶಾಕೀರ್ ಕುಂಭಮೂಲೆ, ಅಬೂಬಕ್ಕರ್ ಪುತ್ತೂರು, ಉಮ್ಮರ್ ಕಣಿಮಜಲು,ಆಶ್ರಫ್ ಕಂಪ, ಅಬ್ದುಲ್ ರಜಾಕ್ ಕೆನರಾ, ಅವರುಗಳು ಭಾಗವಹಿಸಿ ಬಿಡ್ ಸಲ್ಲಿಸಿದ್ದರು.

 ಹರಾಜು ಪ್ರಕ್ರಿಯೆಯ ಸಂದರ್ಭದಲ್ಲಿ ಸವಣೂರು ಗ್ರಾ.ಪಂ. ಲೆಕ್ಕಸಹಾಯಕರಾದ ಜಯಂತಿ, ಮಾಜಿ ಸದಸ್ಯರುಗಳಾದ ಭರತ್ ರೈ ಪಾಲ್ತಾಡು, ತೀರ್ಥರಾಮ್ ಕೆಡೆಂಜಿ, ಅಬ್ದುಲ್‌ರಜಾಕ್ ಕೆನರಾ, ಗ್ರಾ.ಪಂ. ಸಿಬ್ಬಂದಿಗಳಾದ ದಯಾನಂದ ಮಾಲೆತ್ತಾರು, ಪ್ರಮೋದ್ ಕುಮಾರ್, ಯತೀಶ್ ಕೆ., ಜಯ ಕೆ. ಮತ್ತು ಜಯಶ್ರೀ ಅವರುಗಳು ಉಪಸ್ಥಿತರಿದ್ದು ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಿಕೊಟ್ಟರು.

Related Articles

Latest Articles