ತೆಂಗಿನಕಾಯಿ ಕೀಳಲು ಮರ ಏರಿದ್ದ ಕಾರ್ಮಿಕ ಆಕಸ್ಮಿಕವಾಗಿ ಬಿದ್ದು ದುರ್ಮರಣ

kadaba times

ತೆಂಗಿನಕಾಯಿ ಕೀಳಲು ಮರ ಏರಿದ್ದ ಕೂಲಿ ಕಾರ್ಮಿಕ, ನಿಡ್ಲೆ ಗ್ರಾಮದ ಬೂಡುಜಾಲು ನಿವಾಸಿ ನಾರಾಯಣಗೌಡ ಅವರು ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಕೆಳಗೆ ಬಿದ್ದ ರಭಸಕ್ಕೆ ನೆಲದಲ್ಲಿದ್ದ ಅಡಕೆ ಮರದ ತುಂಡು ಅವರ ತಲೆ ಹಾಗೂ ಮುಖದ ಭಾಗಕ್ಕೆ ಬಲವಾಗಿ ತಾಗಿದ್ದರಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

kadaba times
uniq

ಧರ್ಮಸ್ಥಳ / ಬೆಳ್ತಂಗಡಿ:ತೆಂಗಿನಕಾಯಿ ಕೀಳಲೆಂದು ಮರವೇರಿದ್ದ ಕಾರ್ಮಿಕರೊಬ್ಬರು ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು,  ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಬಿದ್ರೆ ಗ್ರಾಮದ ಕುತ್ರಿಜಾಲು ಎಂಬಲ್ಲಿ ಮಂಗಳವಾರ (ಸೆಪ್ಟೆಂಬರ್ 15) ನಡೆದಿದೆ.

ನಿಡ್ಲೆ ಗ್ರಾಮದ ಬೂಡುಜಾಲು ನಿವಾಸಿ ನಾರಾಯಣಗೌಡ ಮೃತಪಟ್ಟ ದುರ್ದೈವಿ.

ಮರದಿಂದ ಆಕಸ್ಮಿಕವಾಗಿ ಕಾಲು ಜಾರಿ ದುರಂತ: ಕೂಲಿ ಕಾರ್ಮಿಕರಾಗಿದ್ದ ನಾರಾಯಣಗೌಡ ಅವರು ದಿನನಿತ್ಯದ ಕೃಷಿ ಕೆಲಸಗಳ ಜತೆಗೆ ತೆಂಗು ಹಾಗೂ ಅಡಕೆ ಕೊಯ್ಯುವ ಕಾಯಕವನ್ನೂ ಮಾಡಿಕೊಂಡಿದ್ದರು. ಸೆಪ್ಟೆಂಬರ್ 15 ರಂದು ಎಂದಿನಂತೆ ಚಿಬಿದ್ರೆ ಗ್ರಾಮದ ಕುತ್ರಿಜಾಲು ಪರಿಸರಕ್ಕೆ ತೆಂಗಿನಕಾಯಿ ಕೀಳುವ ಕೆಲಸಕ್ಕಾಗಿ ತೆರಳಿದ್ದರು.

kadaba times
kadaba times

ತೋಟದಲ್ಲಿದ್ದ ಎತ್ತರದ ತೆಂಗಿನ ಮರವನ್ನು ಏರಿ ಕಾಯಿಗಳನ್ನು ಕೀಳುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಅವರು ಮರದಿಂದ ಕೆಳಗೆ ಬಿದ್ದಿದ್ದಾರೆ.

ಅಡಕೆ ಮರದ ತುಂಡು ತಲೆಗೆ ಬಡಿದು ಸ್ಥಳದಲ್ಲೇ ಸಾವು:ಮರದಿಂದ ಕೆಳಗೆ ಬೀಳುತ್ತಿದ್ದಂತೆ, ಸಮೀಪದಲ್ಲೇ ಕಡಿದು ಹಾಕಲಾಗಿದ್ದ ಚೂಪಾದ ಅಡಕೆ ಮರದ ತುಂಡಿನ ಭಾಗ ನಾರಾಯಣ ಗೌಡ ಅವರ ಮುಖದ ಮೂಲಕ ತಲೆಗೆ ಅತ್ಯಂತ ರಭಸವಾಗಿ ತಾಗಿದೆ. ಪರಿಣಾಮವಾಗಿ ಮುಖ ಹಾಗೂ ತಲೆಯ ಭಾಗಕ್ಕೆ ತೀವ್ರ ರಕ್ತಸ್ರಾವ ಹಾಗೂ ಗಂಭೀರ ಪೆಟ್ಟು ಬಿದ್ದಿದ್ದು, ಅವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.

ವಿಷಯ ತಿಳಿದು ಸ್ಥಳೀಯರು ಹಾಗೂ ಕುಟುಂಬಸ್ಥರು ಘಟನಾ ಸ್ಥಳಕ್ಕೆ ಧಾವಿಸಿದ್ದು, ದುರ್ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕಷ್ಟಪಟ್ಟು ಬದುಕುತ್ತಿದ್ದ ಶ್ರಮಜೀವಿಯೊಬ್ಬರ ಆಕಸ್ಮಿಕ ಸಾವು ನಿಡ್ಲೆ ಹಾಗೂ ಚಿಬಿದ್ರೆ ಗ್ರಾಮಸ್ಥರಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.

Related Articles

Latest Articles