ಸುಬ್ರಹ್ಮಣ್ಯ:ಕೃಷಿಕನ ಕಣ್ಣೆದುರೇ ಅಡಿಕೆ ಗಿಡಗಳನ್ನು ಕೊಚ್ಚಿ ಹಾಕಿದ ಅರಣ್ಯಾಧಿಕಾರಿಗಳು

kadaba times

ಸುಬ್ರಹ್ಮಣ್ಯ: ಕಡಬ ತಾಲೂಕು ವ್ಯಾಪ್ತಿಯ  ಯೇನೆಕಲ್ ಗ್ರಾಮದ ಕೃಷಿಕರೊಬ್ಬರು   ನೆಟ್ಟ ಅಡಿಕೆ ಗಿಡಗಳನ್ನು ಅರಣ್ಯ ಭೂಮಿಯಲ್ಲಿ ಅತಿಕ್ರಮಿಸಿ ಮಾಡಿದ್ದಾರೆಂಬ ಕಾರಣಕ್ಕಾಗಿ ಅರಣ್ಯ ಇಲಾಖೆ ಕಿತ್ತೆಸೆಯುವ ಕಾರ್ಯಾಚರಣೆಗೆ ಮುಂದಾಗಿದೆ.

kadaba times
uniq

ಈ ಸುದ್ದಿಯನ್ನೂ ಓದಿ:Good News: ದಸರಾ ಹಬ್ಬಕ್ಕೆ ಬೆಂಗಳೂರು-ಮಂಗಳೂರು ವಿಶೇಷ ರೈಲು ಘೋಷಿಸಿದ ನೈರುತ್ಯ ರೈಲ್ವೆ

ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಕೃಷಿ ತೋಟವನ್ನು ನಾಶಪಡಿಸುತ್ತಿರುವ ವೀಡಿಯೋ ಕಡಬ ಟೈಮ್ಸ್ ಗೆ ಲಭ್ಯವಾಗಿದೆ.   ಪುರ್ಲುಪ್ಪಾಡಿ ನಿವಾಸಿ ಕುಮಾರ ಎಂಬವರಿಗೆ ಸೇರಿದ ಕೃಷಿ ತೋಟ ಇದಾಗಿದ್ದು, ಸ್ಥಳೀಯರೊಬ್ಬರ ದೂರಿನ ಮೇರೆಗೆ  ಲೋಕಾಯುಕ್ತ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಯಾಗಿ ಅತಿಕ್ರಮಣ ತೆರವುಗೊಳಿಸುವಂತೆ ಆದೇಶವಾಗಿತ್ತು.

ನಿಗದಿತ ಸಮಯದೊಳಗೆ ತೆರವುಗೊಳಿಸದೇ ಇದ್ದುದಕ್ಕಾಗಿ ಪಂಜ ವಲಯದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು  ಸೆ.26 ರಂದು ಬೆಳಿಗ್ಗೆ ಸ್ಥಳಕ್ಕೆ  ಕೃಷಿಯನ್ನು ಕಿತ್ತು ನಾಶಪಡಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸುದ್ದಿಯನ್ನೂ ಓದಿರಿ:ಕಡಬ: ಆ ಒಂದು ಸುದ್ದಿ ತಿಳಿದು ಠಾಣೆಯತ್ತ ಬಂದ ಜನರು:ಏನಿದು ಘಟನೆ?

kadaba times
kadaba times

ಸುಮಾರು 200 ಎಕ್ರೆ ಪ್ರದೇಶ ಈ ಸರ್ವೆ ನಂ. ವ್ಯಾಪ್ತಿಗೆ ಬರುತ್ತಿದೆ ಎನ್ನಲಾಗಿದ್ದು, ಇಲ್ಲಿ ಹಲವಾರು ಮಂದಿ ಕೃಷಿಕರು ಮನೆಕಟ್ಟಿ ಕೃಷಿ ಮಾಡಿ ಬದುಕುತ್ತಿದ್ದಾರೆ .ಕುಮಾರರವರು ಕೃಷಿ ಮಾಡಿರುವ ಜಾಗ ಅವರ ತಾಯಿ ರುಕ್ಮಿಣಿಯವರ  ಹೆಸರಿನಲ್ಲಿ 2019 ಅಕ್ರಮ ಸಕ್ರಮದಲ್ಲಿ ರೆಕಾರ್ಡ್ ಆಗಿದೆ ಎಂದು ಹೇಳಲಾಗಿದೆ.

ಈಗ ಲೋಕಾಯುಕ್ತ ನ್ಯಾಯಾಲಯದ ಆದೇಶದ ಹೆಸರಿನಲ್ಲಿ ಒಬ್ಬರನ್ನು ಮಾತ್ರ ಒಕ್ಕಲೆಬ್ಬಿಸುವ ಕೆಲಸ ಸರಿಯಲ್ಲವೆಂದು ಊರವರು ಸ್ಥಳದಲ್ಲಿ ಸೇರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆಂದು ತಿಳಿದು ಬಂದಿದೆ. ಸ್ಥಳದಲ್ಲಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ನೀವು ಗಿಡನೆಟ್ಟು ನೋಡಿ ಎಂದು ಅರಣ್ಯ ಇಲಾಖೆಗೆ ತಾಕಿತು ಮಾಡುತ್ತಿರುವುದು ವೀಡಿಯೋದಲ್ಲಿದೆ.

Related Articles

Latest Articles