ಎಡಮಂಗಲ ಗ್ರಾ.ಪಂ ವ್ಯಾಪ್ತಿ: ಸೋಲಾರ್ ದೀಪದ ಕಂಬಕ್ಕೆ ರಾಜಕೀಯ ಬ್ಯಾನರ್ ಫಿಕ್ಸ್

kadaba times

ಎಡಮಂಗಲ / ಕಡಬ:ರಾತ್ರಿ ವೇಳೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ಬೆಳಕು ನೀಡಲು ಅಳವಡಿಸಿರುವ ಸೋಲಾರ್ ಬೀದಿದೀಪದ ಕಂಬವನ್ನೇ ರಾಜಕೀಯ ಕಾರ್ಯಕ್ರಮದ ಪ್ರಚಾರದ ಬ್ಯಾನರ್ ಕಟ್ಟಲು ಬಳಸಿರುವುದು  ಎಡಮಂಗಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

kadaba times
uniq

ರಸ್ತೆ ಬದಿಯಲ್ಲಿರುವ ಸೋಲಾರ್ ಕಂಬಕ್ಕೆ ರಾಜಕೀಯ ನಾಯಕರ ಅಭಿನಂದನಾ ಹಾಗೂ ರಸ್ತೆ ಉದ್ಘಾಟನಾ ಕಾರ್ಯಕ್ರಮದ ಬೃಹತ್ ಬ್ಯಾನರ್ ಅನ್ನು ನೇರವಾಗಿ ಹಗ್ಗಗಳಿಂದ ಕಟ್ಟಿರುವುದು ಕಂಡುಬಂದಿದೆ.

ಬ್ಯಾನರ್ ಅಳವಡಿಕೆಗೆ ಸಂಬಂಧಿಸಿದಂತೆ ಸ್ಥಳ, ಗಾತ್ರ, ಸುರಕ್ಷತೆ ಹಾಗೂ ಸಾರ್ವಜನಿಕ ಆಸ್ತಿಯ ರಕ್ಷಣೆಗೆ ಯಾವುದೇ ಕಾನೂನು-ನಿಯಮಗಳಿಲ್ಲವೇ? .ನಿಯಮಗಳಿದ್ದರೂ ಸಾರ್ವಜನಿಕ ಆಸ್ತಿಗಳನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಸ್ಥಳೀಯ ಪಂಚಾಯತ್ ಅಧಿಕಾರಿಗಳು ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಮಳೆ-ಗಾಳಿಯ ರಭಸಕ್ಕೆ ಬ್ಯಾನರ್‌ನ ಒತ್ತಡ ತಾಳಲಾರದೆ ಸೂಕ್ಷ್ಮವಾದ ಸೋಲಾರ್ ಫಲಕ ಅಥವಾ ಕಂಬ ಮುರಿದು ಬಿದ್ದರೆ, ತೆರಿಗೆದಾರರ ಸಾರ್ವಜನಿಕ ಹಣದ ನಷ್ಟಕ್ಕೆ ಯಾರು ಜವಾಬ್ದಾರರು? ಎಂದು  ಸ್ಥಳೀಯ  ಪ್ರಜ್ಞಾವಂತ ನಾಗರಿಕರು ಪ್ರಶ್ನಿಸಿದ್ದಾರೆ.

kadaba times
kadaba times

ಜವಾಬ್ದಾರಿ ಮೆರೆಯಲು ಆಗ್ರಹ: ರಾಜಕೀಯ ನಾಯಕರಿಗೆ ಅಭಿನಂದನೆ ಸಲ್ಲಿಸುವುದು ಅಥವಾ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವುದು ಆಯಾ ಪಕ್ಷಗಳ ಹಕ್ಕಾಗಿದ್ದರೂ, ಸಾರ್ವಜನಿಕ ಹಣದಿಂದ ನಿರ್ಮಾಣವಾದ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.   ಸಂಬಂಧಪಟ್ಟ ಪಂಚಾಯತ್ ಆಡಳಿತವು ತಕ್ಷಣವೇ ಇಂತಹ ಬ್ಯಾನರ್‌ಗಳನ್ನು ತೆರವುಗೊಳಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

Related Articles

Latest Articles