ನೆಲ್ಯಾಡಿ: ಮಿಡ್ ನೈಟ್ ಟಾರ್ಚ್ ಬೆಳಕಿನಲ್ಲಿ ಅಕ್ರಮ ಕೋಳಿ ಅಂಕ

kadaba times

ನೆಲ್ಯಾಡಿ / ಉಪ್ಪಿನಂಗಡಿ: ಕಡಬ ತಾಲೂಕಿನ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿನ ರಬ್ಬರ್ ತೋಟದ ತೆರೆದ ಸ್ಥಳದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕದ ಜೂಜಾಟದ ಅಡ್ಡೆಗೆ ಉಪ್ಪಿನಂಗಡಿ ಪೊಲೀಸರು ಮಧ್ಯರಾತ್ರಿ ದಿಢೀರ್ ದಾಳಿ ನಡೆಸಿ, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

kadaba times
uniq

ಟಾರ್ಚ್ ಬೆಳಕಿನಲ್ಲಿ ಜೂಜಾಟ – ಪೊಲೀಸರ ಮಿಂಚಿನ ಕಾರ್ಯಾಚರಣೆ:

ಆಗಸ್ಟ್ 18ರಂದು ಮುಂಜಾನೆ ಸುಮಾರು 1:00 ಗಂಟೆಯ ವೇಳೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪಿಎಸ್‌ಐ (ತನಿಖೆ-2) ಕೌಶಿಕ್ ಬಿ.ಸಿ. ಹಾಗೂ ಸಿಬ್ಬಂದಿಗಳು ನೈಟ್ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಪಾಂಡಿಬೆಟ್ಟು ಸಮೀಪದ ರಬ್ಬರ್ ತೋಟದಲ್ಲಿ ಟಾರ್ಚ್ ಲೈಟ್‌ಗಳ ಬೆಳಕಿನ ಸಹಾಯದಿಂದ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ.

kadaba times
kadaba times

ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ, ಅಲ್ಲಿ ಗುಂಪು ಸೇರಿದ್ದ ಜೂಜುಕೋರರು ಕತ್ತಲಲ್ಲಿ ಓಡಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಬೆನ್ನಟ್ಟಿ ಕೊಣಾಲು ಗ್ರಾಮದ ನಿವಾಸಿಗಳಾದ ಸುರೇಶ ಮತ್ತು ಪ್ರವೀಣ ಎಂಬಿಬ್ಬರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳದಿಂದ ಪೊಲೀಸರು  ಸುಮಾರು ₹5,150 ಮೌಲ್ಯದ 7 ಹುಂಜಗಳು ,ಜೂಜಾಟಕ್ಕೆ ಬಳಸಲಾಗಿದ್ದ ₹1,700 ನಗದು ಹಣ, ಅಂದಾಜು ₹300 ಮೌಲ್ಯದ ಇತರೇ ಸಾಮಗ್ರಿಗಳನ್ನು ಅಮಾನತುಪಡಿಸಿಕೊಂಡಿದ್ದಾರೆ. miಈ ಅಕ್ರಮ ಕೋಳಿ ಅಂಕ ಜೂಜಾಟಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Related Articles

Latest Articles