ಸುಳ್ಯದ ಬೇಂಗಮಲೆಯಲ್ಲಿ ಕಾಡಾನೆ ಓಡಿಸಲು ಅರಣ್ಯ ಸಿಬ್ಬಂದಿ ಫೈರಿಂಗ್

kadaba times

ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಬೇಂಗಮಲೆಯಲ್ಲಿ ಕಾಡಾನೆಯನ್ನು ಓಡಿಸಲು ಪುತ್ತೂರು ವಲಯ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಫೈರಿಂಗ್‌ನ ಚಿಲ್ಲು ಆಕಸ್ಮಿಕವಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಸ್ಕೂಟರ್ ಸವಾರ ರಾಘವ ಪ್ರಭು ಎಂಬವರ ಎಡಕಾಲಿಗೆ ತಾಗಿ ಗಾಯಗೊಂಡಿದ್ದಾರೆ. ಗಾಯಾಳು ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆದಿದ್ದು, ಚಿಕಿತ್ಸಾ ವೆಚ್ಚವನ್ನು ಅರಣ್ಯ ಇಲಾಖೆಯೇ ಭರಿಸುತ್ತಿದೆ.

kadaba times
uniq

ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಬೇಂಗಮಲೆ ಪರಿಸರದಲ್ಲಿ ಕಾಡಾನೆಯನ್ನು ಕಾಡಿನತ್ತ ಓಡಿಸಲು ಪುತ್ತೂರು ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಹಾರಿಸಿದ ಗುಂಡಿನ ಚಿಲ್ಲು (ಬುಲೆಟ್ ಸ್ಪ್ಲಿಂಟರ್) ಆಕಸ್ಮಿಕವಾಗಿ ಸ್ಕೂಟರ್ ಸವಾರರೊಬ್ಬರ ಕಾಲಿಗೆ ತಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಪೆರುವಾಜೆ ಗ್ರಾಮದ ಏನಡ್ಕ ನಿವಾಸಿ, ಬ್ಯಾಂಕ್ ಉದ್ಯೋಗಿ ರಾಘವ ಪ್ರಭು ಗಾಯಗೊಂಡ ವ್ಯಕ್ತಿ.

ಸ್ಕೂಟಿ ತಿರುಗಿಸುವಾಗ ಕಾಲಿಗೆ ತಾಗಿದ ಚಿಲ್ಲು: ಆಗಸ್ಟ್ 12ರಂದು ಸಂಜೆ ಕೆಲಸ ಮುಗಿಸಿ ಸಂಪಾಜೆಯಿಂದ ಪೆರುವಾಜೆಯ ಮನೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಬೇಂಗಮಲೆ ಬಳಿ ಕಾಡಾನೆಯೊಂದು ರಸ್ತೆ ದಾಟುತ್ತಿತ್ತು. ಈ ವೇಳೆ ಆನೆಯನ್ನು ಕಾಡಿಗೆ ಓಡಿಸಲು ಪುತ್ತೂರು ವಲಯದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಆನೆ ಕಂಡ ತಕ್ಷಣ ರಾಘವ ಪ್ರಭು ಅವರು ಸ್ಕೂಟಿಯನ್ನು ವಾಪಸ್ ಸುಳ್ಯದತ್ತ ತಿರುಗಿಸಲು ಯತ್ನಿಸಿದರು.

kadaba times
kadaba times

ಅದೇ ಸಂದರ್ಭದಲ್ಲಿ ಆನೆಯನ್ನು ಬೆದರಿಸಿ ಓಡಿಸಲು ಅರಣ್ಯ ಸಿಬ್ಬಂದಿ ರಸ್ತೆಗೆ ಫೈರಿಂಗ್ ನಡೆಸಿದ್ದು, ನೆಲಕ್ಕೆ ತಾಗಿ ರಿಬೌಂಡ್ ಆದ ಗುಂಡಿನ ಚಿಲ್ಲೊಂದು ರಾಘವ ಪ್ರಭು ಅವರ ಎಡಕಾಲಿಗೆ ಬಲವಾಗಿ ತಾಗಿದೆ.

ಕೆವಿಜಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ: ಮರುದಿನ (ಆ.13) ಕಾಲಿನಲ್ಲಿ ಅತಿಯಾದ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಗಸ್ಟ್ 14ರಂದು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಕಾಲಿನ ಒಳಗಿದ್ದ ಗುಂಡಿನ ಚಿಲ್ಲನ್ನು ಯಶಸ್ವಿಯಾಗಿ ಹೊರತೆಗೆದಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

“ಕಾಡಾನೆಯನ್ನು ಓಡಿಸುವ ಕಾರ್ಯಾಚರಣೆ ವೇಳೆ ಆಕಸ್ಮಿಕವಾಗಿ ಗುಂಡಿನ ಚಿಲ್ಲು ನೆಲಕ್ಕೆ ಬಡಿದು ರಿಬೌಂಡ್ ಆಗಿ ಅವರಿಗೆ ತಾಗಿರಬಹುದು. ಗಾಯಾಳು ರಾಘವ ಪ್ರಭು ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಅರಣ್ಯ ಇಲಾಖೆಯ ವತಿಯಿಂದಲೇ ನೋಡಿಕೊಳ್ಳಲಾಗುತ್ತಿದೆ ಎಂದು ಅರಣ್ಯ ಇಲಾಖೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Related Articles

Latest Articles