ಪಟ್ಟಾ ಜಮೀನಿಗೆ ಅಕ್ರಮ ಪ್ರವೇಶ, ಮರ ಕಡಿದು ಮನೆ ಹಾನಿ

kadaba times

ಕಡಬ ತಾಲೂಕಿನ ಆಲಂಕಾರು ಗ್ರಾಮದ ಮುತ್ತುಗಿರಿಯಲ್ಲಿ ಸೋಮಪ್ಪ ಪೂಜಾರಿ ಎಂಬವರ ಪಟ್ಟಾ ಜಮೀನಿಗೆ ಅಕ್ರಮ ಪ್ರವೇಶ ಮಾಡಿದ ಐವರು ವ್ಯಕ್ತಿಗಳು, ಹಲಸು ಹಾಗೂ ಅಕೇಶಿಯಾ ಮರಗಳನ್ನು ಕಡಿದು ಮನೆ ಮೇಲೆ ಬೀಳಿಸಿ ಅಪಾರ ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಕಡಬ / ಆಲಂಕಾರು:ಕಡಬ ತಾಲೂಕಿನ ಆಲಂಕಾರು ಗ್ರಾಮದ ಮುತ್ತುಗಿರಿ ಎಂಬಲ್ಲಿ ವ್ಯಕ್ತಿಯೊಬ್ಬರ ಪಟ್ಟಾ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ, ಹಲಸು ಮತ್ತು ಅಕೇಶಿಯಾ ಮರಗಳನ್ನು ಕಡಿದು ಮನೆ ಮೇಲೆ ಬೀಳಿಸಿ  ಹಾನಿ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಐವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಲಂಕಾರು ಗ್ರಾಮದ ಮುತ್ತುಗಿರಿ ಮನೆ ನಿವಾಸಿ, ಗ್ರಾಮ ಪಂಚಾಯತ್ ತ್ಯಾಜ್ಯ ವಿಲೇವಾರಿ ವಾಹನದ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸೋಮಪ್ಪ ಪೂಜಾರಿ (64) ಎಂಬವರು ಈ ಕುರಿತು ಕಡಬ ಠಾಣೆಗೆ ದೂರು ನೀಡಿದ್ದಾರೆ.

ದೂರುದಾರರು  ಪ್ರಸ್ತುತ ರಾಮಕುಂಜ ಗ್ರಾಮದ ಸಂಕ್ರಾಂತಿ ಎಂಬಲ್ಲಿರುವ ತಮ್ಮ ಅತ್ತೆ ಮನೆಯಲ್ಲಿ ವಾಸವಾಗಿದ್ದು, ಆಲಂಕಾರು ಗ್ರಾಮದ ಮುತ್ತುಗಿರಿ ಸರ್ವೆ ನಂ. 141/1A P1 ರಲ್ಲಿ ಪಟ್ಟಾ ಜಾಗವನ್ನು ಹೊಂದಿದ್ದಾರೆ.

ಆಗಸ್ಟ್ 14ರಂದು ಎಂದಿನಂತೆ ಚಾಲಕ ವೃತ್ತಿಗೆ ತೆರಳಿದ್ದ ಅವರು ಮಧ್ಯಾಹ್ನ ಊಟಕ್ಕಾಗಿ ಮುತ್ತುಗಿರಿಗೆ ಬಂದಾಗ, ಪಟ್ಟಾ ಜಾಗದಲ್ಲಿದ್ದ ಹಲಸಿನ ಮರ ಹಾಗೂ ಅಕೇಶಿಯಾ ಮರಗಳನ್ನು ಕಡಿದು ಮನೆ ಮೇಲೆ ಬೀಳಿಸಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದರನ್ನು ವಿಚಾರಿಸಿದಾಗ ಆರೋಪಿಗಳು ಮರ ಕಡಿದಿರುವುದು ಬೆಳಕಿಗೆ ಬಂದಿದೆ.

kadaba times
kadaba times

ಈ ಘಟನೆಗೆ ಸಂಬಂಧಿಸಿ  ಸುರೇಶ ಗೌಡ, ಜಯಪ್ರಕಾಶ್ ಗೌಡ , ಮೋಹನ ಗೌಡ , ಅಶೋಕ ಗೌಡ ,ಕುಶಾಲಪ್ಪ ಗೌಡ ವಿರುದ್ದ ಪ್ರಕರಣ ದಾಖಲಾಗಿದೆ. 

ಆರೋಪಿಗಳು ಕಡಿದ ಮರ ತುಂಡಾಗಿ ಮನೆ ಮೇಲೆ ಬಿದ್ದ ಪರಿಣಾಮ ಮನೆಗೆ ಸುಮಾರು ₹5,000 ನಷ್ಟವಾಗಿದ್ದು, ಕಡಿದ 5 ಹಲಸಿನ ಮರ ಹಾಗೂ 6 ಅಕೇಶಿಯಾ ಮರಗಳಿಂದ ಸುಮಾರು ₹50,000 ಮೌಲ್ಯದ ನಷ್ಟ ಸೇರಿ ಒಟ್ಟು ₹55,000 ಕ್ಕೂ ಹೆಚ್ಚು ಆರ್ಥಿಕ ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತುರ್ತು  ಕೆಲಸ ಕಾರ್ಯಗಳಿದ್ದ ಕಾರಣ ಆ.16 ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನನ್ವಯ ಕಡಬ ಪೊಲೀಸ್ ಠಾಣೆಯ ಎಎಸ್ಐ ಶಿವರಾಮ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಹಾಗೂ ತನಿಖೆ ಕೈಗೊಂಡಿದ್ದಾರೆ.

Related Articles

Latest Articles