
ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 15ರಂದು ತಾಲೂಕು ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ಧ್ವಜಾರೋಹಣದ ಬಳಿಕ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಭಾಂಗಣದಲ್ಲಿ ತಹಶೀಲ್ದಾರ್ ಜಿ. ಗಣೇಶ್ ಸವಣೂರು ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ನಿವೃತ್ತ ಮುಖ್ಯ ಶಿಕ್ಷಕ ಯಶವಂತ ರೈ ಕೆ. ಮರ್ಧಾಳ ಅವರು ಪ್ರಧಾನ ಭಾಷಣ ಮಾಡಿದರು.


ಕಡಬ:ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 15ರಂದು ತಾಲೂಕು ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಧ್ವಜಾರೋಹಣದ ಬಳಿಕ ಕಡಬದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಭಾಂಗಣದಲ್ಲಿ ಕಡಬ ತಹಶೀಲ್ದಾರ್ ಜಿ. ಗಣೇಶ್ ಸವಣೂರು ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನೆರವೇರಿತು.
ವಿಕಸಿತ ಭಾರತಕ್ಕೆ ನೈತಿಕ ಬುನಾದಿ & ಸರ್ಕಾರಿ ಶಾಲೆಗಳ ಉನ್ನತೀಕರಣ ಅಗತ್ಯ: ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ಶ್ರೀ ಯಶವಂತ ರೈ ಕೆ. ಮರ್ಧಾಳ, “ಕೇವಲ ಬಾಹ್ಯ ಅಥವಾ ತಾಂತ್ರಿಕ ಬೆಳವಣಿಗೆಯಷ್ಟೇ ದೇಶದ ನೈಜ ಅಭಿವೃದ್ಧಿಯಲ್ಲ; ಪ್ರತಿಯೊಬ್ಬ ವ್ಯಕ್ತಿಯ ಅಂತರಂಗದಲ್ಲಿ ನೈತಿಕತೆ, ಪರಸ್ಪರ ಗೌರವ ಹಾಗೂ ಮಾನವೀಯ ಮೌಲ್ಯಗಳು ಉದ್ದೀಪನಗೊಂಡಾಗ ಮಾತ್ರ ನಾವೆಲ್ಲರೂ ನವ ಭಾರತ ಹಾಗೂ ವಿಕಸಿತ ಭಾರತದ ಕನಸಿಗೆ ನೈಜ ಕೊಡುಗೆ ನೀಡಲು ಸಾಧ್ಯ” ಎಂದು ಕರೆ ನೀಡಿದರು.
ತಮ್ಮ ಭಾಷಣದಲ್ಲಿ ದೇಶದ ಭವಿಷ್ಯ ಹಾಗೂ ಯುವ ಪೀಳಿಗೆಯ ಜವಾಬ್ದಾರಿಯನ್ನು ವಿಸ್ತಾರವಾಗಿ ಪ್ರಸ್ತಾಪಿಸಿದ ಅವರು:”ಸ್ವಾತಂತ್ರ್ಯದ ಸಾರ್ಥಕತೆ ಇರುವುದು ಸಾಮರಸ್ಯ ಮತ್ತು ಮೌಲ್ಯಯುತ ಸಮಾಜದ ನಿರ್ಮಾಣದಲ್ಲಿ.”
”ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣವು ಕೇವಲ ಉದ್ಯೋಗ ಪಡೆಯುವುದಕ್ಕಷ್ಟೇ ಸೀಮಿತವಾಗದೆ, ಉತ್ತಮ ಸಂಸ್ಕಾರ ಮತ್ತು ಸಮಾಜಮುಖಿ ಚಿಂತನೆಯನ್ನು ಬೆಳೆಸುವಂತಾಗಬೇಕು.”


”ದೇಶದ ಸರ್ವತೋಮುಖ ಪ್ರಗತಿಯಲ್ಲಿ ಪ್ರತಿಯೊಬ್ಬ ನಾಗರಿಕನ ಪ್ರಾಮಾಣಿಕ ಕರ್ತವ್ಯ ಮತ್ತು ಮಾನವೀಯತೆಯ ಸ್ಪಂದನೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.””ಜೊತೆಗೆ ಕಡಬ ತಾಲೂಕಿನ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಮೇಲ್ದರ್ಜೆಗೆ ಏರಲು ಬೇಕಾದ ಪೂರಕ ವ್ಯವಸ್ಥೆ ನಿರ್ಮಾಣವಾಗಬೇಕು ಹಾಗೂ ಅವುಗಳ ಸಮಗ್ರ ಉನ್ನತೀಕರಣವಾಗಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ಹಾಜಿ ಹನೀಫ್ ಕೆ.ಎಂ ( ಸ್ಥಾಯಿ ಸಮಿತಿ ಅಧ್ಯಕ್ಷರು, ಕಡಬ ಪಟ್ಟಣ ಪಂಚಾಯತ್)ಸಮಯೋಜಿತವಾಗಿ ಮಾತನಾಡಿ ಶುಭ ಹಾರೈಸಿದರು.
ಸಭಾದ್ಯಕ್ಷತೆ ವಹಿಸಿ ಮಾತಾನಾಡಿ ತಹಶಿಲ್ದಾರ್ ಗಣೇಶ್ ಸವಣೂರು ಅವರು ಭ್ಯವ ಭಾರತ ಕನಸನ್ನು ನನಸು ಮಾಡಲು ನಾವೆಲ್ಲರೂ ಶ್ರಮಿಸಬೇಕು ಎಂದರು.
ವೇದಿಕೆಯಲ್ಲಿ ಜನಾರ್ಧನ ಗೌಡ ಪಿಜಕ್ಕಳ ( ಮಾಜಿ ಅಧ್ಯಕ್ಷರು, ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್)
ಹಾಜಿ ಹನೀಫ್ ಕೆ.ಎಂ ( ಸ್ಥಾಯಿ ಸಮಿತಿ ಅಧ್ಯಕ್ಷರು, ಕಡಬ ಪಟ್ಟಣ ಪಂಚಾಯತ್)
ನೀಲಾವತಿ ಶಿವರಾಮ್ ( ಉಪಾಧ್ಯಕ್ಷರು, ಕಡಬ ಪಟ್ಟಣ ಪಂಚಾಯತ್)
ರೋಹಿತ್ ( ಸದಸ್ಯರು, ಕಡಬ ಪಟ್ಟಣ ಪಂಚಾಯತ್)
ಅಕ್ಷತಾ ಬಾಲಕೃಷ್ಣ – (ಸದಸ್ಯರು, ಕಡಬ ಪಟ್ಟಣ ಪಂಚಾಯತ್)
ಶಿವಪ್ರಸಾದ್ ಮೈಲೇರಿ ( ಅಧ್ಯಕ್ಷರು, ಯುವಜನ ಒಕ್ಕೂಟ)
ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು, ಜನಪ್ರತಿನಿಧಿಗಳು, ಶಾಲಾ-ಕಾಲೇಜು ಶಿಕ್ಷಕರು, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಟ್ಟಣ ಪಂಚಾಯತ್ನ ಸಿಬ್ಬಂದಿ ಹರೀಶ್ ಕಾರ್ಯಕ್ರಮವನ್ನು ನಿರೂಪಿಸಿದರು.
