ಕಡಬ ಪ.ಪಂ ವ್ಯಾಪ್ತಿ: ಕಳಾರ ವಾರ್ಡಿನ ಪ್ರಮುಖ ಎರಡು ರಸ್ತೆಗಳ ಉದ್ಘಾಟನೆ

kadaba times

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಒಂದನೇ ವಾರ್ಡ್‌ನ ಕಡಬ ಬೈಲು/ಶೇಡಿಗುಂಡಿ ಮತ್ತು ಜನತಾ ಕಾಲೋನಿಯ ಪ್ರಮುಖ ರಸ್ತೆಗಳು 15ನೇ ಹಣಕಾಸು ಯೋಜನೆಯಡಿ ಅಭಿವೃದ್ಧಿಗೊಂಡಿದ್ದು, ಸಾರ್ವಜನಿಕ ಸಂಚಾರಕ್ಕೆ ಉದ್ಘಾಟನೆಗೊಂಡವು. ವಾರ್ಡಿನ ಹಿರಿಯ ಮಹಿಳೆಯರಾದ ಸನ್ಮಾ ಶೇಡಿಗುಂಡಿ ಹಾಗೂ ಕಳಾರ ಕುಂಞಲಿಯಮ್ಮ ಅವರು ರಸ್ತೆಗಳನ್ನು ಉದ್ಘಾಟಿಸಿದರು.

kadaba times
uniq

ಕಡಬ: ಇಲ್ಲಿನ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ 1ನೇ ವಾರ್ಡ್ (ಕಳಾರ) ವ್ಯಾಪ್ತಿಯಲ್ಲಿ ಬರುವ ಕಡಬದ ಬೈಲು/ಶೇಡಿಗುಂಡಿ ರಸ್ತೆ ಹಾಗೂ ಜನತಾ ಕಾಲೋನಿ ಮುಖ್ಯ ರಸ್ತೆಯು 15 ನೇ ಹಣಕಾಸು ಯೋಜನೆಯಡಿ  ಕಾಂಕ್ರೀಟೀಕರಣಗೊಂಡು ಅಭಿವೃದ್ಧಿಗೊಂಡಿದ್ದು, ಸಾರ್ವಜನಿಕರ ಉಪಯೋಗಕ್ಕಾಗಿ ಅಧಿಕೃತವಾಗಿ ಉದ್ಘಾಟನೆಗೊಂಡಿದೆ.

ವಾರ್ಡಿನ ಹಿರಿಯ ಮಹಿಳೆಯರಾದ ಸನ್ಮಾ ಶೇಡಿಗುಂಡಿ ಮತ್ತು ಕಳಾರ ಕುಂಞಲಿಯಮ್ಮ ಅವರುಗಳು ರಸ್ತೆಗಳನ್ನು ಉದ್ಘಾಟಿಸಿದರು.

ಚುನಾವಣಾ ಭರವಸೆ ಈಡೇರಿಸಿದ ಅಧ್ಯಕ್ಷೆ – ಅಭಿಲಾಷ್: ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್, “ಕಾಂಗ್ರೆಸ್ ಬೆಂಬಲಿತ ಆಡಳಿತ ಬಂದ 10 ತಿಂಗಳ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಶರವೇಗದಲ್ಲಿ ನಡೆಯುತ್ತಿವೆ. ಈ ವಾರ್ಡಿನ ಸದಸ್ಯೆಯೂ, ಪಟ್ಟಣ ಪಂಚಾಯತ್ ಅಧ್ಯಕ್ಷೆಯೂ ಆಗಿರುವ ತಮನ್ನಾ ಜಬೀನ್ ಅವರು ಚುನಾವಣಾ ಪ್ರಚಾರದ ವೇಳೆ ಜನರ ಬಳಿ ಕೊಟ್ಟಿದ್ದ ಕಾಂಕ್ರೀಟ್ ರಸ್ತೆಯ ಭರವಸೆಯನ್ನು ಗೆದ್ದ ಬಳಿಕ ಯಶಸ್ವಿಯಾಗಿ ಈಡೇರಿಸಿದ್ದಾರೆ” ಎಂದು ಶ್ಲಾಘಿಸಿದರು.

kadaba times
kadaba times

ಮಾದರಿ ಪಟ್ಟಣ ಪಂಚಾಯತ್ ನಿರ್ಮಾಣಕ್ಕೆ ಶ್ರಮ – ಉಷಾ ಅಂಚನ್: ಮಹಿಳಾ ಕಾಂಗ್ರೆಸ್ ಮುಖಂಡೆ ಉಷಾ ಅಂಚನ್ ಮಾತನಾಡಿ, “ಒಬ್ಬ ಮಹಿಳಾ ಜನಪ್ರತಿನಿಧಿಯಾಗಿ ತಮ್ಮನಾ ಜಬೀನ್ ಅವರು ಸಮರ್ಥ ಆಡಳಿತ ನೀಡುತ್ತಾ ಸಾರ್ವಜನಿಕರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಕಡಬವನ್ನು ಮಾದರಿ ಪಟ್ಟಣ ಪಂಚಾಯತ್ ಮಾಡಲು ಹೊರಟಿರುವ ಅವರ ಪ್ರಯತ್ನಕ್ಕೆ ಸರ್ವರೂ ಬೆಂಬಲ ನೀಡೋಣ” ಎಂದರು.

ಜೆಡಿಎಸ್ ಹಿರಿಯ ಮುಖಂಡ  ಮೀರಾ ಸಾಹೇಬ್ , ಪ.ಪಂ ಅಧ್ಯಕ್ಷೆ  ತಮನ್ನಾ ಜಬೀನ್,   ಸ್ಥಾಯಿ ಸಮಿತಿ ಅಧ್ಯಕ್ಷ  ಹನೀಫ್ , ಉಪಾಧ್ಯಕ್ಷೆ ನೀಲಾವತಿ ಶಿವರಾಮ್ ಸೇರಿದಂತೆ ಊರಿನ ಪ್ರಮುಖರು, ವಾರ್ಡ್ ನಿವಾಸಿಗಳು ಹಾಜರಿದ್ದರು. ಪ.ಪಂ ಸದಸ್ಯ ಫೈಝಲ್ ಕಾರ್ಯಕ್ರಮ ನಿರ್ವಹಿಸಿದರು

Related Articles

Latest Articles